ಕನ್ನಡಪ್ರಭ ವಾರ್ತೆ ಕೋಲಾರ
ಕೋಲಾರ ಜಿಪಂ ವ್ಯಾಪ್ತಿಗೆ ಸೇರಿದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ರಾಜ್ಯ ಮಟ್ಟದ ಜಿಲ್ಲಾ ಪಾಲಿಕ್ಲಿನಿಕ್‌ನಲ್ಲಿ ಹಲವಾರು ತಿಂಗಳಿಂದ ಸುಮಾರು ೩೦೦ ಹುದ್ದೆಗಳು ಖಾಲಿ ಇರುವುದು ಸಂಬಂಧಪಟ್ಟ ಸಚಿವರಿಗೆ ಮಾಹಿತಿ ಇದ್ದರೂ ಸಹ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಸಲು ಕ್ರಮ ಕೈಗೊಂಡಿಲ್ಲ.ಜಿಲ್ಲೆಗೆ ಎಂ.ವಿ.ಯು ೭ ವಾಹನ ಮತ್ತು ಎಂ.ವಿ.ಸಿ ೫ ತುರ್ತು ವಾಹನಗಳ ಸೌಲಭ್ಯಗಳನ್ನು ಕಲ್ಪಿಸಲಾಗಿದೆ, ಆದರೆ ಇವುಗಳ ಕರೆ ಮಾಡಿದರೆ ಸ್ವೀಕರಿಸುವವರೇ ಇಲ್ಲ, ಇವುಗಳ ಸೇವೆಯು ಸಹ ಬೆಳಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಮಾತ್ರ ಇದೆ.
ವೈದ್ಯಾಧಿಕಾರಿ 2 ಹುದ್ದೆ ಖಾಲಿಜಿಲ್ಲೆಯಲ್ಲಿರುವ ರಾಜ್ಯಮಟ್ಟದ ಪಾಲಿ ಕ್ಲಿನಿಕ್‌ನಲ್ಲಿ ಓರ್ವ ಉಪನಿರ್ದೇಶಕರು ಹಾಗೂ ಮೂವರು ಮುಖ್ಯ ವೈದ್ಯಾಧಿಕಾರಿಗಳು ಹುದ್ದೆಗಳಿವೆ, ಆದರೆ ಉಪನಿರ್ದೆಶಕರು ಇದ್ದಾರೆ, ಮೂವರು ಮುಖ್ಯ ವೈದ್ಯಾಧಿಕಾರಿಗಳ ಬದಲಿಗೆ ಒಬ್ಬ ಮುಖ್ಯ ವೈದ್ಯಾಧಿಕಾರಿ ಇದ್ದು ಉಳಿದ ಎರಡು ಹುದ್ದೆಗಳು ಖಾಲಿ ಇವೆ.
22 ಚಿಕಿತ್ಸಾಲಯದಲ್ಲಿ 14 ವೈದ್ಯರುಜಿಲ್ಲೆಯ ತಾಲೂಕು ಮಟ್ಟದಲ್ಲಿ ೨೬ ಪಶು ಆಸ್ಪತ್ರೆಗಳಿದೆ, ಪದವಿ ಪಶು ಚಿಕಿತ್ಸಾ ವೈದ್ಯರ ಹುದ್ದೆಗಳು ಒಟ್ಟು ೮೬ ಇದ್ದು, ೫೬ ಭರ್ತಿ ಮಾಡಲಾಗಿದೆ. ಜಿಲ್ಲೆಯಲ್ಲಿ ೨೨ ಪ್ರಾಥಮಿಕ ಚಿಕಿತ್ಸಾಲಯಗಳಿವೆ, ಈ ಪೈಕಿ ೫೪ ವೈದ್ಯರ ಹುದ್ದೆಗಳಲ್ಲಿ ಕೇವಲ ೧೪ ಮಾತ್ರ ಭರ್ತಿಯಾಗಿವೆ. ಜಿಲ್ಲೆಯಲ್ಲಿ ಒಟ್ಟು ೧೬೬ ಪಶು ಪರೀಕ್ಷ ತಾಂತ್ರಿಕರ ಹುದ್ದೆಗಳ ಪೈಕಿ ೫೨ ಮಂದಿ ಮಾತ್ರ ಭರ್ತಿ ಇದ್ದು ಉಳಿದಂತೆ ೧೧೪ ಪಶು ಪರೀಕ್ಷ ತಾಂತ್ರಿಕರ ಹುದ್ದೆಗಳು ಖಾಲಿ ಇವೆ, ಡಿ ದರ್ಜೆ ೧೯೨ ಹುದ್ದೆಗಳ ಪೈಕಿ ೮೨ ಮಾತ್ರ ಭರ್ತಿ ಮಾಡಿದ್ದು ಉಳಿದ ೧೧೦ ಹುದ್ದೆಗಳು ಖಾಲಿ ಇವೆ.
ನಾನಾ ಆಸ್ಪತ್ರೆಗಳಲ್ಲಿ ತಾತ್ಕಾಲಿಕ ವ್ಯವಸ್ಥೆಈ ಸಂಬಂಧವಾಗಿ ಜಿಲ್ಲಾ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಜಿ.ಟಿ.ರಾಮಯ್ಯ ಪ್ರಕಾರ, ಹುದ್ದೆಗಳು ಖಾಲಿ ಇರುವಂತ ಆಸ್ಪತ್ರೆಗಳಲ್ಲಿ ದಿನನಿತ್ಯದ ಕೆಲಸಗಳಿಗೆ ಆಡಚಣೆಯಾಗದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದಿಂದ ಸರಬರಾಜು ಆಗಿರುವಂತ ಲಸಿಕೆಗಳು, ಔಷಧಿಗಳನ್ನು ವಿತರಿಸಲಾಗುತ್ತಿದೆ, ಸರಬರಾಜು ಇಲ್ಲದಿರುವುದನ್ನು ಮಾತ್ರ ವೈದ್ಯರಿಂದ ಚೀಟಿ ಪಡೆದು ಹೊರಗಿನಿಂದ ಖರೀದಿಸಬೇಕಾಗುತ್ತದೆ, ೧೨ ವರ್ಷದಿಂದ ವೈದ್ಯರಿಲ್ಲ:ಶ್ರೀನಿವಾಸಪುರ ತಾಲ್ಲೂಕಿನ ಸೋಮಾಯಜಪಲ್ಲಿಯಲ್ಲಿ ಪಶು ಆಸ್ಪತ್ರೆ ಇದ್ದರೂ ಕಳೆದ ೧೨ ವರ್ಷದಿಂದ ಆಸ್ಪತ್ರೆಗೆ ವೈದ್ಯರನ್ನು ನೇಮಿಸಿಲ್ಲ. ಇದು ಗಡಿಭಾಗವಾಗಿರುವುದರಿಂದ ವೈದ್ಯರು ಹೋಗುತ್ತಿಲ್ಲ. ಹಾಗಾಗಿ ಸಮೀಪದ ರೋಣೂರು ಆಸ್ಪತ್ರೆಯ ವೈದ್ಯರನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ,