ಕನ್ನಡಪ್ರಭ ವಾರ್ತೆ, ಚಿತ್ರದುರ್ಗದ್ವಿ ತೀಯು ಪಿಯು ಪರೀಕ್ಷೆಯಲ್ಲಿ ಈ ಬಾರಿಯೂ ಚಿತ್ರದುರ್ಗ ಜಿಲ್ಲೆ ತನ್ನ ಕಳಪೆ ಸಾಧನೆ ಮುಂದುವರಿಸಿದ್ದು, ಕಳೆದ ಬಾರಿಗೆ ಹೋಲಿಸಿದರೆ ಒಂದು ಸ್ಥಾನ ಜಿಗಿತ ಕಂಡಿದೆ. ಕಳೆದ ವರ್ಷ 32ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 31ಕ್ಕೆ ತೃಪ್ತಿ ಪಟ್ಟುಕೊಂಡಿದೆ. ಅಂದರೆ ಕೆಳಗಡೆಯಿದ ಎರಡನೇ ಸ್ಥಾನಕ್ಕೆ ಸೀಮಿತವಾಗಿದೆ. ಈ ಬಾರಿ ಶೇ.72.92 ರಷ್ಟು ಫಲಿತಾಂಶ ದಾಖಲಾಗಿದೆ. 2023ರ ನೇ ಸಾಲಿನಲ್ಲಿ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ.69.5 ರಷ್ಟು ಫಲಿತಾಂಶ ಲಭಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.3.42 ಫಲಿತಾಂಶ ಹೆಚ್ಚಳಗೊಂಡಿದೆ ಎಂಬುದೇ ಸಮಾಧಾನದ ಸಂಗತಿ.
ಈ ಬಾರಿ ಚಿತ್ರದುರ್ಗ ಜಿಲ್ಲೆಯಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿಂದ ಒಟ್ಟು 13,348 ವಿದ್ಯಾರ್ಥಿಗಳ ಪರೀಕ್ಷೆ ಬರೆದಿದ್ದರು. ಈ ಪೈಕಿ 9734 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಶೇ.72.92 ರಷ್ಟು ವಿದ್ಯಾರ್ಥಿ ಗಳ ಉತ್ತೀರ್ಣರಾಗುವುದರೊಂದಿಗೆ ರಾಜ್ಯದಲ್ಲಿ 31ನೇ ಸ್ಥಾನವನ್ನು ಜಿಲ್ಲೆ ಪಡೆದುಕೊಂಡಿದೆ.ಕಲಾ ವಿಭಾಗದಲ್ಲಿ ಜಿಲ್ಲೆಗೆ ಶೇ.57.79 ಫಲಿತಾಂಶ ಲಭ್ಯವಾಗಿದ್ದು, ಪರೀಕ್ಷೆ ಬರೆದ 3990 ವಿದ್ಯಾರ್ಥಿಗಳ ಪೈಕಿ 2306 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಶೇ.75.07 ಫಲಿತಾಂಶ ಬಂದಿದ್ದು, ಪರೀಕ್ಷೆ ಬರೆದ 3437 ವಿದ್ಯಾರ್ಥಿಗಳ ಪೈಕಿ 2580 ವಿದ್ಯಾರ್ಥಿಗಳು ಉತ್ತೀರ್ಣರಾಗಿದಾರೆ. ವಿಜ್ಞಾನ ವಿಭಾಗದಲ್ಲಿ ಶೇ.81.88 ಫಲಿತಾಂಶ ಲಭ್ಯ ವಾಗಿದ್ದು, ಪರೀಕ್ಷೆ ಬರೆದ 5921 ವಿದ್ಯಾರ್ಥಿಗಳ ಪೈಕಿ 4848 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಇದರ ಹೊರತಾಗಿ ಪರೀಕ್ಷೆಗೆ ಹಾಜರಾದ 965 ಪುನಾರವರ್ತಿತ ವಿದ್ಯಾರ್ಥಿಗಳ ಪೈಕಿ 402 ಹಾಗೂ 385 ಖಾಸಗಿ ವಿದ್ಯಾರ್ಥಿಗಳ ಪೈಕಿ 123 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕೆಎಂಎಸ್ ಕಾಲೇಜಿಗೆ ಶೇ.92 ರಷ್ಟು ಫಲಿತಾಂಶಚಿತ್ರದುರ್ಗ ನಗರದ ಕೆಎಂಎಸ್ ಸ್ವತಂತ್ರ ಪ.ಪೂ ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ ಶೇ 92 ಫಲಿತಾಂಶ ಬಂದಿದೆ.ಆಂಜಿಲಾ ಅಲ್ಮಂಡ್ ಸರ್ಕಿಸ್ 600ಕ್ಕೆ 559 ಅಂಕಗಳನ್ನು (ಶೇ 93) ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಆಕಾಶ್.ಎನ್ 457 (ಶೇ76) ದ್ವಿತೀಯ ಸ್ಥಾನ, ಜೀವನ್.ಜಿ 400 (ಶೇ 67) ತೃತೀಯ ಸ್ಥಾನ ಪಡೆದಿದ್ದಾರೆ.ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆಎಂ ವೀರೇಶ್, ನಿರ್ದೇಶಕ ಕೆಎಂ ಚೈತನ್ಯ, ಪ್ರಾಚಾರ್ಯ ಜಿ.ಎನ್ ವೀರೇಶ್, ಕೆಎಂಎಸ್ ಪ್ರ.ದ ಕಾಲೇಜಿನ ಪ್ರಾಚಾರ್ಯೆ ಡಾ.ಕೆ.ಮಂಜುಳ ಹಾಗೂ ಉಪನ್ಯಾಸಕ ಬಳಗ ಅಭಿನಂದಿಸಿದ್ದಾರೆ.ವಿಶ್ವ ಮಾನವಕಾಲೇಜಿಗೆ ಶೇ.100 ರಷ್ಟು ಫಲಿತಾಂಶಚಿತ್ರದುರ್ಗ ಪ್ರತಿಷ್ಠಿತ ಸೀಬಾರ-ಗುತ್ತಿನಾಡು ವಿಶ್ವಮಾನವ ಪದವಿ ಪೂರ್ವ ಕಾಲೇಜಿಗೆ ಈ ಬಾರಿಯ ದ್ವಿತೀಯಪಿಯು ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾಗಿದ್ದ ವಿಜ್ಞಾನ ವಿಭಾಗದ 188 ಹಾಗೂ ವಾಣಿಜ್ಯ ವಿಭಾಗದ27 ವಿದ್ಯಾರ್ಥಿಗಳು ಸೇರಿ ಒಟ್ಟು 215ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100 ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ರಮ್ಯ ಡಿ.584 ಅಂಕ, ಜಿ.ಎಸ್.ಮಾನಸ 567 ಅಂಕ, ತೌಸಿಫ್ 559, ಧನುಷ್ 559, ಆರ್.ಟಿ.ರಾಕೇಶ್ 556 ಅಂಕ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿಯರು ಮೇಲು ಗೈ ಸಾಧಿಸಿದ್ದಾರೆ. ಲಾಲ್ ಬಿ 580, ಕೆ.ಆರ್.ಸುಜಾತ 580, ಸಿ.ಹೇಮಲತ 677, ಎಸ್.ಕಣಮೇಶ್ 576 ಹಾಗೂ ಯು.ಎಸ್. ಮಂಜುನಾಥ್ 575 ಅಂಕ ಪಡೆದಿದ್ದಾರೆ. ವಿಜ್ಞಾನ ವಿಭಾಗದ 188 ವಿದ್ಯಾರ್ಥಿಗಳ ಪೈಕಿ 106 ಮಂದಿ ಅತ್ಯುನ್ನತ ಶ್ರೇಣಿ, 82 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.ಎಸ್‌ಆರ್‌ಎಸ್‌ಪಿಯು ಕಾಲೇಜಿಗೆ ದಾಖಲೆ ಫಲಿತಾಂಶಚಿತ್ರದುರ್ಗ: ಚಿತ್ರದುರ್ಗದ ಪ್ರತಿಷ್ಠಿತ ಎಸ್ ಆರ್ ಎಸ್ ಕಾಲೇಜಿಗೆ ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಮತ್ತೆ ದಾಖಲೆಯ ಫಲಿತಾಂಶ ಲಭ್ಯವಾಗಿದೆ. ವಿಜ್ಞಾನ ಹಾಗೂ ವಾಣಿಜ್ಯ ವಿಷಯದಲ್ಲಿ ಶೇಕಡಾ ನೂರರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ದಾಖಲೆ ಫಲಿತಾಂಶದ ಓಟ ಮುಂದುವರಿಸಿದ್ದಾರೆ. ಈ ಬಾರಿಯೂ ಜಿಲ್ಲೆಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಈ ಹಿಂದಿನ ಎಲ್ಲಾ ದಾಖಲೆಗಳನ್ನೂ ಮೀರಿ ಒಟ್ಟು 448 ವಿದ್ಯಾರ್ಥಿಗಳ ಪೈಕಿ 343 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ (ಡಿಸ್ಟಿಂಕ್ಷನ್) ಪಡೆದಿದ್ದಾರೆ. ವಿವಿಧ ವಿಷಯಗಳಲ್ಲಿ ಒಟ್ಟು 51 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತೀ ತಂದಿದ್ದಾರೆ.ಕಾಲೇಜಿನ ವಿದ್ಯಾರ್ಥಿ ಕುಮಾರಿ ನೇಹಾ ಎಸ್. 600ಕ್ಕೆ 586 ಅಂಕಗಳನ್ನು ಪಡೆದು ಜಿಲ್ಲೆಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಚಂದ್ರಿಕ ಜಿ. ಕಲ್ಯಾಣಿ, ಪ್ರಖ್ಯಾತ್ ಎಸ್. ಇವರು ಕ್ರಮವಾಗಿ 585, 584 ಅಂಕ ಗಳಿಸುವ ಮೂಲಕ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.ಎಸ್ ಆರ್ ಎಸ್ ಪಿಯು ಕಾಲೇಜು ಈ ವರ್ಷವೂ ಅತ್ಯುತ್ತಮ ಫಲಿತಾಂಶ ದಾಖಲಿಸಿ, ಕನ್ನಡ, ಹಿಂದಿ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಸಂಖ್ಯಾಶಾಸ್ತ್ರ ಹಾಗೂ ಗಣಕ ವಿಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳು ಶೇ.ನೂರಕ್ಕೆ ನೂರು ಅಂಕಗಳನ್ನು ಪಡೆದು ಇತಿಹಾಸವನ್ನು ಮುಂದುವರೆಸಿದ್ದಾರೆ. ಕಾಲೇಜಿಗೆ ಉತ್ತಮ ಫಲಿತಾಂಶ ಬರಲು ಕೈಗೊಂಡ ಅತ್ಯುತ್ತಮ ಕ್ರಮಗಳು ಯಶಸ್ಸುನೀಡಿವೆ. ಕಾಲೇಜು ಗುಣಮಟ್ಟದ ತರಬೇತಿಯಲ್ಲಿ ತನ್ನ ನಾಗಲೋಟವನ್ನು ಮುಂದುವರೆಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಿ ಎ ಲಿಂಗಾರೆಡ್ಡಿಹರ್ಷ ವ್ಯಕ್ತಪಡಿಸಿ್ದದಾರೆ. ಅಭಿಪ್ರಾಯ ಪಟ್ಟಿದ್ದಾರೆ.ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತೀ ತಂದಿರುವ ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ, ಉಪಾಧ್ಯಕ್ಷ ಬಿ.ಎಲ್. ಅಮೋಘ್, ಆಡಳಿತಾಧಿಕಾರಿ ಡಾ.ರವಿ ಟಿ.ಎಸ್, ಪ್ರಾಂಶುಪಾಲ ಗಂಗಾಧರ್ ಈ. ಉಪ ಪ್ರಾಂಶುಪಾಲ ಮನೋಹರ ಬಿ. ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.