36ಸಾವಿರ ಮತದಾರರು ಪಟ್ಟಿಯಿಂದ ಹೊರಗೆ

KannadaprabhaNewsNetwork |  
Published : Aug 26, 2026, 03:15 AM IST
ಜಮಖಂಡಿ ನಗರದ ತಾಲುಕು ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸುದ್ದಿಗಾರರೊಂದಿಗೆ ಮಾತನಾಡಿದರು, ತಹಸೀಲ್ದಾರ ಅನೀಲ ಬಡಿಗೇರ ಇದ್ದರು.  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಬಹುತೇಕ ಪೂರ್ಣ ಗೊಂಡಿದ್ದು, ಕ್ಷೇತ್ರದಿಂದ 36,739 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ತಿಳಿಸಿದರು.ತಾಲೂಕು ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 36,739 ಮತದಾರರ ಪೈಕಿ 2533 ಗೈರಾದ, ಸ್ಥಳಾಂತರವಾದವರು 24,278, ನಿಧನ 7542, ಎರಡು ಕಡೆ ಹೆಸರಿರುವವರು 2244, ಇತರೆ 142 ಮತದಾರರು ಸೇರಿದ್ದಾರೆ

ಕನ್ನಡಪ್ರಭ ವಾರ್ತೆ ಜಮಖಂಡಿ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಬಹುತೇಕ ಪೂರ್ಣ ಗೊಂಡಿದ್ದು, ಕ್ಷೇತ್ರದಿಂದ 36,739 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ತಿಳಿಸಿದರು.ತಾಲೂಕು ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 36,739 ಮತದಾರರ ಪೈಕಿ 2533 ಗೈರಾದ, ಸ್ಥಳಾಂತರವಾದವರು 24,278, ನಿಧನ 7542, ಎರಡು ಕಡೆ ಹೆಸರಿರುವವರು 2244, ಇತರೆ 142 ಮತದಾರರು ಸೇರಿದ್ದಾರೆ. ಜಮಖಂಡಿ ಕ್ಷೇತ್ರದಲ್ಲಿ 2,30,006 ಮತದಾರರು ಪಟ್ಟಿಯಲ್ಲಿದ್ದು, ಎಲ್ಲರನ್ನು ಪತ್ತೆ ಹಚ್ಚಿ ಅರ್ಜಿನಮೂನೆ ನೀಡಲಾಗಿತ್ತು. 1,93,267 ಮತದಾರರ ಭರ್ತಿ ಮಾಡಿದ ಫಾರಂಗಳನ್ನು ಮರಳಿ ಪಡೆದು ಡಿಜಟಲೀ ಕರಣಗೊಳಿಸಲಾಗಿದೆ ಎಂದು ತಿಳಿಸಿದರು.

ಒಟ್ಟು ಮತದಾರರ ಸಂಖ್ಯೆ 1,93,267 ಇದ್ದು ಈ ಪೈಕಿ ಗಂಡು 96,586 ಹಾಗೂ ಮಹಿಳೆಯರು 96,673, ಇತರೆ 8 ಜನರಿದ್ದಾರೆ. ವ್ಯತ್ಯಾಸ ವಿರುವ ಹಾಗೂ ಮ್ಯಾಪಿಂಗ್‌ ಆಗದ ಮತದಾರರ ನಮೂನೆಗಳನ್ನು ಪರಿಶೀಲಿಸಿ ನೋಟಿಸ್‌ ವಿತರಿಸಲಾಗುವುದು. 1221 ಮತದಾರರು ನಮೂನೆಗಳು ಹೊಂದಾಣಿಕೆ ಇಲ್ಲದವರು, 2002 ಪಟ್ಟಿಯಲ್ಲಿ ಯಾವುದೇ ದಾಖಲೆ ಇಲ್ಲದ 601, ಸೇರಿ ಒಟ್ಟು 1822 ಮತದಾರರ ವಿಚಾರಣೆ ನಡೆಸಿ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಮತದಾರರ ಪಟ್ಟಿಗೆ ಸೇರಿಸಲಾಗುವುದು. 232 ಮತಗಟ್ಟೆಗಳು ಕ್ಷೇತ್ರಲ್ಲಿದ್ದು, 21 ಮತಗಟ್ಟೆಗಳನ್ನು ಸೇರಿಸಿ ಒಟ್ಟು 253 ಮತಗಟ್ಟೆಗಳನ್ನು ರಚಿಸಲಾಗಿದೆ ಎಂದರು.

ಈ ವೇಳೆ ತಹಸೀಲ್ದಾರ ಅನೀಲ ಬಡಿಗೇರ ಇದ್ದರು. ಬಾಕ್ಸ್‌

ಪ್ರತಿ ಶನಿವಾರ ಜನಸೇವಾ ಆಂದೋಲನರಾಜ್ಯ ಸರ್ಕಾರದ ಆದೇಶದ ಮೇರೆಗೆ ಮುಂದಿನ ಸಪ್ಟೆಂಬರ್‌ನಿಂದ ಪ್ರತಿ ಶನಿವಾರ ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಆವರಣದಲ್ಲಿ ಜನಸೇವಾ ಆಂದೋಲನ ನಡೆಸಲಾಗುವದು. ಸಚಿವರು, ಶಾಸಕರು, ತಾಲೂಕು ಮಟ್ಟದ ಅಧಿಕಾರಿಗಳು ಆಂದೋಲನದಲ್ಲಿ ಭಾಗವಹಿಸುವರು. ತಮ್ಮ ಸಮಸ್ಯೆಗಳು ಹಾಗೂ ಅಹವಾಲುಗಳನ್ನು ಸಾರ್ವಜನಿಕರು ಸಲ್ಲಿಸಬಹುದಾಗಿದ್ದು, ತಕ್ಷಣ ಪರಿಹಾರಗೊಳಿಸಲಾಗುವುದು. ಸಪ್ಟೆಂಬರ್‌ ತಿಂಗಳ 1ನೇ ಶನಿವಾರ ನಗರದ ಗುರುದೇವ ರಾನಡೆ ಭವನ ಪಿ.ಬಿ.ಹೈಸ್ಕೂಲ್‌ನಲ್ಲಿ ಜನಸ್ಪಂಧನ ಕಾರ್ಯಕ್ರಮ ಶಾಸಕ ಜಗದೀಶ ಗುಡಗುಂಟಿ ನೇತೃತ್ವದಲ್ಲಿ ನಡೆಯಲಿದೆ.

2ನೇ ಶನಿವಾರ ಸಾವಳಗಿ ಗ್ರಾಮದ ಮಾಳಿ ಸಭಾಭವನದಲ್ಲಿ ಆಯೋಜಿಸಲಾಗಿದೆ. ಮೂರನೇ ಸಭೆ ಸೆ.19 ಮರೆಗುದ್ದಿಯಲ್ಲಿ ಹಾಗೂ ಗೋಠೆ ಗ್ರಾಮದಲ್ಲಿ, ನಾಲ್ಕನೇ ಜನ ಸ್ಪಂಧನ ನಡೆಯಲಿದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆಗಳ್ಳತನ: ಹುಬ್ಬಳ್ಳಿಯ ಇಬ್ಬರ ಬಂಧನ
ಹಬ್ಬದ ಹೊತ್ತಲ್ಲೇ ಸಕ್ಕರೆ ದರ ಏರಿಕೆ