ಹೊಸಬಾಳಿಗೆ ಕಾಲಿಟ್ಟ ೩೮ ಜೋಡಿಗಳು

KannadaprabhaNewsNetwork |  
Published : Apr 02, 2026, 03:00 AM IST
ತಾಳಿಕೋಟೆ,  1 | Kannada Prabha

ಸಾರಾಂಶ

ವಿವಿಧ ಮಠಾಧಿಪತಿಗಳ ಸಾನ್ನಿಧ್ಯದಲ್ಲಿ ಪಟ್ಟಣದ ಖಾಸ್ಗತೇಶ್ವರ ಸಭಾಭವನದಲ್ಲಿ ಮಂಗಳವಾರ ಜರುಗಿದ ಸಾಮೂಹಿಕ ವಿವಾಹದಲ್ಲಿ ಸಮಾಜದ ವಿವಿಧ ವರ್ಗಗಳ ೩೮ ಜೋಡಿಗಳು ನವ ದಾಂಪತ್ಯ ಜೀವನಕ್ಕೆ ಶ್ರೀಗಳ ಆಶೀರ್ವಾದ ಪಡೆದು ಪಾದಾರ್ಪಣೆ ಮಾಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ವಿವಿಧ ಮಠಾಧಿಪತಿಗಳ ಸಾನ್ನಿಧ್ಯದಲ್ಲಿ ಪಟ್ಟಣದ ಖಾಸ್ಗತೇಶ್ವರ ಸಭಾಭವನದಲ್ಲಿ ಮಂಗಳವಾರ ಜರುಗಿದ ಸಾಮೂಹಿಕ ವಿವಾಹದಲ್ಲಿ ಸಮಾಜದ ವಿವಿಧ ವರ್ಗಗಳ ೩೮ ಜೋಡಿಗಳು ನವ ದಾಂಪತ್ಯ ಜೀವನಕ್ಕೆ ಶ್ರೀಗಳ ಆಶೀರ್ವಾದ ಪಡೆದು ಪಾದಾರ್ಪಣೆ ಮಾಡಿದರು.

ತಿಂಗಳ ಹಿಂದೆಯೇ ಬಡ ಜನತೆಯ ಅನುಕೂಲಕ್ಕಾಗಿಯೂ ಹಾಗೂ ವಿವಾಹಕ್ಕಾಗಿ ದುಂದು ವೆಚ್ಚ ಮಾಡುವುದನ್ನು ತಡೆ ಹಿಡಿದು ದಾಂಪತ್ಯ ಜೀವನ ವ್ಯವಸ್ಥಿತವಾಗಿ ಸಾಗಲು ವಧು-ವರರ ಪಾಲಕರಿಗೆ ಅನುಕೂಲವಾಗಲೆಂಬ ಸದುದ್ದೇಶ ಹೊತ್ತ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಶ್ರೀಮಠದ ವತಿಯಿಂದ ತಮ್ಮ ಶಕ್ಕೆತೆಯ ಅನುಸಾರ ನೂತನ ೩೮ ವಧು-ವರರಿಗೆ ಅಗತ್ಯವಾಗಿದ್ದ ತಾಳಿ, ಕಾಲುಂಗರ, ಸೀರೆ, ಬಟ್ಟೆ ಬರೆಗಳಂತಹ ವಿವಾಹಕ್ಕೆ ಅಗತ್ಯ ವಸ್ತುಗಳನ್ನು ಪೂರೈಸಿ ಆಗಮಿಸಿದ ಸುಮಾರು ೧೫ ಸಾವಿರ ಜನರಿಗೆ ಪ್ರಸಾದದ ವ್ಯವಸ್ಥೆ ಮಾಡಿರುವುದು ಜನ ಮೆಚ್ಚುಗೆಗೆ ಪಾತ್ರವಾಯಿತು.ಲಿಂ.ಶಿವಬಸವ ಮಹಾ ಸ್ವಾಮಿಗಳ ವಿರಕ್ತಮಠ ಅವರ ಗದ್ದುಗೆಯ ಮುಂಭಾಗದಲ್ಲಿ ಧಾರ್ಮಿಕ ಪದ್ಧತಿಯಂತೆ ಸುರಗಿ ಸುತ್ತುವ ಕಾರ್ಯ ಅರಸಿಣ ಹಚ್ಚುವ ಕಾರ್ಯ, ಕಿವಿಯಲ್ಲಿ ಎಣ್ಣಿ ಹಾಕುವ ಕಾರ್ಯಗಳಂತೆ ವಧು-ವರರಿಗೆ ಈ ಹಿಂದಿನಿಂದ ಸಾಗಿಬಂದ ಪದ್ಧತಿಯಂತೆ ಮಠದ ಸಂಬಂಧಿತ ಸಿದ್ದಲಿಂಗ ಶ್ರೀಗಳ ಮಾತೋಶ್ರೀ ವಿದ್ಯಾವತಿ ವಿರಕ್ತಮಠ ಹಾಗೂ ಚಿಕ್ಕಮ್ಮಳ್ಳಾದ ಜ್ಯೋತಿ ಹಿರೇಮಠ ಅವರು ಧಾರ್ಮಿಕ ಪದ್ಧತಿಯಂತೆ ವಧು-ವರರಿಗೆ ಅವರವರ ಕುಟುಂಬದವರೊಂದಿಗೆ ಸಿಂಗಾರಗೊಳಿಸುವಂತಹ ವ್ಯವಸ್ಥೆಗೆ ಮುಂದಾಗಿ ಕೈಜೋಡಿಸಿ ಅನುವು ಮಾಡಿಕೊಟ್ಟರು.ನಂತರ ಹಸೆಮಣೆ ಏರಿದ ೩೮ ನವ ಜೋಡಿಗಳು ಸಭಾಭವನದ ವೇದಿಕೆಯ ಮೇಲೆ ಕರೆತರಲಾಯಿತ್ತಲ್ಲದೇ ವಿವಾಹದ ಪದ್ಧತಿಯ ಮಂತ್ರೋಪದೇಶ ಮಾಡಿದ ಶ್ರೀಗಳ ಎಲ್ಲ ಸಮಾಜ ಬಾಂಧವರೊಂದಿಗೆ ಅಕ್ಷತಾರೋಪಣ ಕಾರ್ಯಕ್ರಮ ನೆರವೇರಿಸಿದರು.ಈ ಸಮಯದಲ್ಲಿ ದಿವ್ಯ ಸಾನಿದ್ಯ ವಹಿಸಿದ ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಸಿದ್ದಲಿಂಗ ದೇವರು ಮಾತನಾಡಿ, ಪ್ರೀತಿ ವಿಶ್ವಾಸವೆಂಬುವುದು ಸದಾ ಹಸೆಮಣೆ ಏರಿದ ನವದಂಪತಿಗಳಲ್ಲಿರಲಿ ಖಾಸ್ಗತಮಠದ ಮೇಲೆ ಶ್ರದ್ಧಾ, ಭಕ್ತಿ ಎಂಬುವುದು ಸದಾ ಇರಲಿ. ಇದರಿಂದ ಶ್ರೀ ಖಾಸ್ಗತ ನಿಮಗ ಕೈ ಬಿಡುವುದಿಲ್ಲ. ಒಳ್ಳೆಯ ಜೀವನವೆಂಬುವುದು ದಾಂಪತ್ಯ ಜೀವನದಲ್ಲಿರಬೇಕಾಗಿದೆ. ಕಣ್ಣ ತುಂಬಾ ನೋಡಿ, ಮನಸ್ಸು ತುಂಬಾ ಪ್ರೀತಿಸಿ. ಕಿವಿ ತುಂಬಾ ಒಳ್ಳೆಯದನ್ನು ಕೇಳಿ, ಒಳ್ಳೆಯ ಜೀವನ ಮಾಡಿ ಎಂದು ನವ ದಂಪತಿಗೆ ಶುಭಕೋರಿದರು.ಕೊಡೇಕಲ್ಲ ದುರಂಡೇಶ್ವರ ಮಠದ ಶಿವಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಸಿದ್ದಲಿಂಗ ದೇವರ ನೇತೃತ್ವದಲ್ಲಿ ಜರುಗಿದ ಸಾಮೂಹಿಕ ವಿವಾಹವು ಧಾರ್ಮಿಕ ಪದ್ಧತಿಯಂತೆ ಜರುಗಿದೆ. ಖಾಸ್ಗತಮಠದ ಶ್ರೀಗಳ ಆಶೀರ್ವಾದ ಹಸೆಮಣೆ ಏರಿದ ಎಲ್ಲ ನವದಂಪತಿಗೆ ದೊರಕಿದೆ. ಇದರಿಂದ ನಿಮ್ಮ ಎಲ್ಲರ ಇಡೀ ದಾಂಪತ್ಯ ಜೀವನ ಸುಃಖಕರವಾಗಿ ಸಾಗಲಿದೆ. ನಿವೇಲ್ಲರೂ ಭಾಗ್ಯವಂತರೆಂದು ಶ್ರೀಗಳು ಆಶೀರ್ವದಿಸಿದರು.ನಾವದಗಿಯ ರಾಜಗುರು ರಾಜೇಂದ್ರ ಒಡೆಯರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಪತಿ, ಪತ್ನಿ ಇಬ್ಬರೂ ಚಾಲಕ ನಿರ್ವಾಹಕರಂತೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಪತಿಯಾದವ ಚಾಲಕನಂತೆ ಎಲ್ಲವನ್ನು ಹಿಮ್ಮೆಟ್ಟಿಸುವಂತಹ ಕಾರ್ಯ ಮಾಡಬೇಕಾಗುತ್ತದೆ. ಪತ್ನಿಯಾದವಳು ಸಹ ನಿರ್ವಾಹಕನಂತೆ ಚಾಲಕನಿಗೆ ಚಾಲಕತನ ಮಾರ್ಗ ತೋರುವ ಕಾರ್ಯ ಮಾಡುತ್ತ ಸಾಗಿದರೇ ಸಂಸಾರವೆಂಬುವುದು ಸುಗಮವಾಗಿ ಸಾಗಲಿದೆ ಎಂದರು.

ಈ ಸಮಯದಲ್ಲಿ ಜಮ್ಮಲದಿನ್ನಿ ಶ್ರೀಗಳು, ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಮೊದಲಾದವರು ಉಪಸ್ಥಿತರಿದ್ದರು.ಬಡವರ ಕಲ್ಯಾಣಕ್ಕಾಗಿ ಇಡೀ ಜೀವನವನ್ನು ಸವಿಸಿದ ಶ್ರೀಮಠದ ಲಿಂ.ವಿರಕ್ತಜ್ಜನ ಆಜ್ಞೆಯಂತೆ ಶ್ರೀಖಾಸ್ಗತಮಠದಿಂದ ಸಾಮೂಹಿಕ ವಿವಾಹವನ್ನು ಆಯೋಜಿಸಿ ಯಶಸ್ವಿಗೊಳಿಸಲಾಗಿದೆ. ಭಕ್ತರೇ ಶ್ರೀಮಠದ ಆಸ್ತಿ ಎಂಬ ನಂಬಿಕೆಯೊಂದಿಗೆ ಸಾಗಿರುವ ಶ್ರೀಮಠದಿಂದ ಮುಂದಿನ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳು ಆಯೋಜಿಸಲು ಪೂರ್ವತಯಾರಿ ನಡೆಸಲಾಗುತ್ತಿದೆ.

- ಬಾಲಶಿವಯೋಗಿ ಸಿದ್ದಲಿಂಗ ಶ್ರೀ,

ಖಾಸ್ಗತೇಶ್ವರ ಮಠ ತಾಳಿಕೋಟೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಣ್ಣು ಮಕ್ಕಳನ್ನು ಗೌರವಿಸಿದರೆ ಕುಟುಂಬದ ಶಕ್ತಿಯಾಗುವರು
ಬೆಮುಲ್‌ಗೆ ₹ 12.59 ಕೋಟಿ ದಾಖಲೆ ಲಾಭ