ಕನ್ನಡಪ್ರಭ ವಾರ್ತೆ ದಾವಣಗೆರೆ
ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಬೆಣ್ಣೆನಗರಿ ದಾವಣಗೆರೆಯಲ್ಲಿ ನಡೆದ 38ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಈ ಹಿಂದೆ ನಡೆದ ಎಲ್ಲಾ ಸಮ್ಮೇಳನಕ್ಕಿಂತ ಹೆಚ್ಚು ಅದ್ಧೂರಿಯಾಗಿ ನಡೆದಿದೆ. ಈ ಯಶಸ್ವಿಗೆ ಜಿಲ್ಲಾ ಘಟಕಕ್ಕೆ ಅಭಿನಂದನೆ ಸಲ್ಲಿಸಿದರು.
ಮುಂದಿನ ಬಾರಿ ನಡೆಯಲಿರುವ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ನಡೆಸಲು ತುಮಕೂರು, ಶಿವಮೊಗ್ಗ, ಗಡಿಭಾಗದ ಜಿಲ್ಲೆಯಾದ ರಾಯಚೂರಿನಲ್ಲಿ ಮುಂದಿನ ಪತ್ರಕರ್ತರ ಸಮ್ಮೇಳನ ನಡೆಸಲು ಭಾರೀ ಬೇಡಿಕೆ ಬಂದಿದ್ದು, ಗಡಿ ಜಿಲ್ಲೆಗಳಾದ ಕಲಬುರಗಿ, ವಿಜಯಪುರ ಮತ್ತು ಕರಾವಳಿಯಲ್ಲೂ ನಾವು ಸಮ್ಮೇಳನ ಮಾಡಿದ್ದೇವೆ. ಈಗ ಶಿವಮೊಗ್ಗ, ತುಮಕೂರು ಮತ್ತು ರಾಯಚೂರು ಜಿಲ್ಲೆಗಳಿಂದ ಸಾಕಷ್ಟು ಪೈಪೋಟಿ ಬಂದಿದೆ. ಮೊದಲು ಸಮ್ಮೇಳನ ನಡೆಸಲು ಮುಂದೆ ಬನ್ನಿ ಎಂದರೆ ನೂರು ಕಿ.ಮೀ. ದೂರ ಓಡುತ್ತಿದ್ದರು. ಈಗ ನಮಗೆ ಕೊಡಿ ಎಂದು ಪೈಪೋಟಿ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಎಲ್ಲರೂ ಒಪ್ಪಿಗೆ ಮೇರೆಗೆ ಮುಂದಿನ ಬಾರಿ 39ನೇ ರಾಜ್ಯ ಮಟ್ಟದ ಸಮ್ಮೇಳನ ನಡೆಸಲು ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ನಡೆಸಲು ಪ್ರತಿನಿಧಿಗಳ ಸಭೆ ನಿರ್ಣಯಿಸಿದೆ ಎಂದು ಘೋಷಣೆ ಮಾಡಿದರು.ಸಭೆಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಭವಾನಿ ಸಿಂಗ್ ಟಾಕೂರ್, ಅಜ್ಜಮಾಡ ರಮೇಶ್ ಪುಟ್ಟಪ್ಪ, ಪುಂಡಲಿಕ ಪಿ.ಬಾಲಾಜಿ, ಮತ್ತಿಕೆರೆ ಜಯರಾಂ, ಸೋಮಶೇಖರ್ ಕೆರೆಗೋಡು, ನಿಂಗಪ್ಪ ಚೌವಡಿ, ವಸುದೇವ ಹೊಳ್ಳ ಸೇರಿದಂತೆ ರಾಜ್ಯ ಸಮಿತಿ ಪದಾಧಿಕಾರಿಗಳು, ಜಿಲ್ಲಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರತಿನಿಧಿಗಳ ಸಭೆಯ ನಿರ್ಣಯಗಳೇನು?
* ಮುಂದಿನ ಸಮ್ಮೇಳನ ನಡೆಸಲು ₹50 ಲಕ್ಷ ನೀಡಬೇಕು ಎಂಬ ಹಕ್ಕೋತ್ತಾಯ ಮಂಡಿಸಿದರು.
* ಪತ್ರಕರ್ತರಿಗೂ ಆರೋಗ್ಯ ಕ್ಷೇಮಾಭಿವೃದ್ಧಿ ಯೋಜನೆ ಪ್ರಾರಂಭ, ತಾಲೂಕು ಮಟ್ಟದಲ್ಲಿ ಕಾರ್ಯನಿರತ ಪತ್ರಕರ್ತರ ಘಟಕ ಸ್ಥಾಪಿಸಬೇಕು.
* ಪತ್ರಕರ್ತರು ಮೃತಪಟ್ಟರೆ 2 ಲಕ್ಷ ರು. ಸಹಾಯಧನ ನೀಡಬೇಕು. ಟೋಲ್‌ನಲ್ಲಿ ಉಚಿತ ಪ್ರವೇಶ ಒದಗಿಸಬೇಕು.