22ರಿಂದ 3ನೇ ರಾಷ್ಟ್ರೀಯ ಕಲ್ಪಿತ ನ್ಯಾಯಾಲಯ ಸ್ಪರ್ಧೆ

KannadaprabhaNewsNetwork |  
Published : May 21, 2026, 02:15 AM IST
ಸುದ್ದಿಗೋಷ್ಠಿಯಲ್ಲಿ ಸಿದ್ರಾಮಪ್ಪ ಅಂದಾನಪ್ಪ ಮಾನ್ವಿ ಮಾತನಾಡಿದರು. | Kannada Prabha

ಸಾರಾಂಶ

ಮೇ 22ರಂದು ಸಂಜೆ 5ಕ್ಕೆ ಗದುಗಿನ ಜೆಟಿ ಕಾಲೇಜು ಆವರಣದ ಸಭಾಂಗಣದಲ್ಲಿ ಸ್ಪರ್ಧೆಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮವನ್ನು ಗ್ರಾಮೀಣ ವಿವಿ ಕುಲಪತಿ ಪ್ರೊ. ಸುರೇಶ ವಿ. ನಾಡಗೌಡರ ಉದ್ಘಾಟಿಸಲಿದ್ದಾರೆ.

ಗದಗ: ನಗರದ ಕೆಎಲ್ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಮೇ 22ರಿಂದ ಮೂರು ದಿನಗಳ ಕಾಲ ಕಾನೂನು ಅಕಾಡೆಮಿಯ 3ನೇ ರಾಷ್ಟ್ರೀಯ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸ್ಥಳೀಯ ಆಡಳಿತಾಧಿಕಾರಿ ಸಿದ್ರಾಮಪ್ಪ ಅಂದಾನಪ್ಪ ಮಾನ್ವಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾನೂನು ವಿದ್ಯಾರ್ಥಿಗಳಿಗೆ ವಾದ ಮಂಡನೆ ಕೌಶಲ್ಯ ಹಾಗೂ ಕಾನೂನು ಸಂಶೋಧನಾ ಸಾಮರ್ಥ್ಯವನ್ನು ವೃತ್ತಿಪರ ರೀತಿಯಲ್ಲಿ ಅಭಿವೃದ್ಧಿಪಡಿಸಲು ಕಲ್ಪಿತ ನ್ಯಾಯಾಲಯ ಅತ್ಯಂತ ಪರಿಣಾಮಕಾರಿ ವಿಧಾನ ಆಗಿದೆ. ನಾಗ್ಪುರ, ಯರ್ನಾಕುಲಂ, ಮುಂಬೈ ಸೇರಿದಂತೆ ದೇಶದ 27 ಕಾಲೇಜು ಸ್ಪರ್ಧಿಗಳು ಭಾಗವಹಿಸಲಿವೆ ಎಂದರು.

ಮೇ 22ರಂದು ಸಂಜೆ 5ಕ್ಕೆ ಗದುಗಿನ ಜೆಟಿ ಕಾಲೇಜು ಆವರಣದ ಸಭಾಂಗಣದಲ್ಲಿ ಸ್ಪರ್ಧೆಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮವನ್ನು ಗ್ರಾಮೀಣ ವಿವಿ ಕುಲಪತಿ ಪ್ರೊ. ಸುರೇಶ ವಿ. ನಾಡಗೌಡರ ಉದ್ಘಾಟಿಸಲಿದ್ದಾರೆ. ಸ್ಪರ್ಧೆಯಲ್ಲಿ ಪ್ರಾಥಮಿಕ ಸುತ್ತು, ಕ್ವಾರ್ಟರ ಫೈನಲ್, ಸೆಮಿಫೈನಲ್ ಹಾಗೂ ಅಂತಿಮ ಸುತ್ತು ನಡೆಯಲಿವೆ. ಗೌರವ ಅತಿಥಿಗಳಾಗಿ ವಕೀಲ ಡಾ. ಜಗದೀಶ ಎಸ್. ಹಾಲಶೆಟ್ಟಿ, ಪ್ರೊ. ಪಿ.ಜಿ. ಪಾಟೀಲ ಉಪಸ್ಥಿತಿ ಇರಲಿದ್ದಾರೆ ಎಂದರು. ಮೇ 24ರಂದು ಮಧ್ಯಾಹ್ನ 3ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ನಿವೃತ್ತ ನ್ಯಾಯಾಧೀಶ ಬಿ.ಎ. ಪಾಟೀಲ ಸಮಾರೋಪ ಸಮಾರಂಭ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಉಮೇಶ ಮಂಜುನಾಥ ಭಟ್ ಅಡಿಗ, ಎಂ.ಐ. ಶಿಲ್ಲ, ಡಾ. ಜೆ.ಎಂ. ಮಲ್ಲಿಕಾರ್ಜುನಯ್ಯ, ಬಿ.ಜಿ. ಶೆಲ್ಲಿಕೇರಿ, ಎಸ್.ಎಫ್. ಹಾದಿಮನಿ, ಡಾ. ಸಂಜೀವ ಎಂ. ಹುಲ್ಲೂರ ಇತರರು ಉಪಸ್ಥಿತಿ ಇರುವರು ಎಂದರು.ಸುದ್ದಿಗೋಷ್ಠಿಯಲ್ಲಿ ಎಸ್.ಎಫ್. ಹಾದಿಮನಿ, ಬಿ.ಜೆ. ಶೆಲ್ಲಿಕೇರಿ, ಪಿ.ಜಿ. ಪಾಟೀಲ ಇತರರು ಇದ್ದರು.ಸ್ಪರ್ಧೆಗೆ 28 ತಂಡ

ಒಟ್ಟು 28 ತಂಡಗಳು ಭಾಗವಹಿಸಲಿದ್ದಾರೆ. ಒಂದು ತಂಡದಲ್ಲಿ ಮೂವರು ಸ್ಪರ್ಧಿಗಳು ಇರಲಿದ್ದಾರೆ. ಉತ್ತಮ ಪುರುಷ ಅಡ್ವೋಕೆಟ್, ಉತ್ತಮ ಮಹಿಳಾ ಅಡ್ವೋಕೇಟ್ ಪ್ರಶಸ್ತಿ ನೀಡಲಾಗುವುದು. ಸ್ಪರ್ಧೆಯಲ್ಲಿ ತೆಗೆದುಕೊಂಡಿರುವ ವಿಷಯವು ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ದಾಖಲಾಗಿದ್ದ ಪ್ರಕರಣ ಆಗಿದೆ. ಅದೇ ವಿಷಯ ಕಲ್ಪಿತ ಸ್ಪರ್ಧೆ ಇದಾಗಿದ್ದು, ಅರ್ಜಿದಾರರು, ಪ್ರತಿವಾದಿಗಳು ತಮ್ಮ ವಾದ ಮಂಡಿಸಲಿದ್ದಾರೆ. ಅಂತಿಮ ಸುತ್ತಿನ ತೀರ್ಪುಗಾರರಾಗಿ ನಿವೃತ್ತ ನ್ಯಾಯಾಧೀಶ ಬಿ.ಎ. ಪಾಟೀಲ ಹಾಗೂ ಉಮೇಶ ಅಡಿಗ ಭಾಗವಹಿಸಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡಾಪಟುಗಳು ತಾಲೂಕಿಗೆ ಕೀರ್ತಿ ಹೆಚ್ಚಿಸಿ
ಪುರಸಭೆ ಅಧ್ಯಕ್ಷರ ವಿರುದ್ಧ ಮುಖ್ಯಾಧಿಕಾರಿ ಪ್ರತಿಭಟನೆ