ಮಂಗಳೂರು: ನವಮಂಗಳೂರು ಬಂದರಿಗೆ ಪ್ರಸ್ತುತ ಕ್ರೂಸ್ ಋತುವಿನ ಮೂರನೇ ವಿಲಾಸಿ ಹಡಗು ‘ಎಂಎಸ್ ಸಿರೆನಾ’ ಭಾನುವಾರ ಆಗಮಿಸಿದ್ದು, ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಈ ಪ್ರವಾಸಿಗರು ನಗರದ ಗೋಕರ್ಣನಾಥೇಶ್ವರ ದೇವಸ್ಥಾನ, ಐತಿಹಾಸಿಕ ಸೈಂಟ್ ಅಲೋಶಿಯಸ್ ಚಾಪೆಲ್, ಸಾವಿರ ಕಂಬದ ಬಸದಿ, ಸ್ಥಳೀಯ ಮಾರುಕಟ್ಟೆಗಳು ಸೇರಿದಂತೆ ಮಂಗಳೂರು ಸುತ್ತಮುತ್ತಲಿನ ಹಲವು ಪ್ರಮುಖ ಪ್ರವಾಸಿ ತಾಣಗಳನ್ನು ಸಂದರ್ಶಿಸಿದರು.
ಮಂಗಳೂರಿನ ಸ್ಮರಣೀಯ ಅನುಭವಗಳೊಂದಿಗೆ ಪ್ರವಾಸಿಗರು ತಮ್ಮ ಮುಂದಿನ ತಾಣವಾದ ಮೊರ್ಮುಗಾವೊ ಬಂದರಿಗೆ ಸಂಜೆ ವೇಳೆಗೆ ಹೊರಟರು.ಮಂಗಳೂರಿಗೆ ಅಂತಾರಾಷ್ಟ್ರೀಯ ವಿಲಾಸಿ ಹಡಗುಗಳ ಆಗಮನ ಸಂಖ್ಯೆ ಏರಿಕೆಯಾಗುತ್ತಿದ್ದು, ಭಾರತದ ಪಶ್ಚಿಮ ಕರಾವಳಿಯಲ್ಲಿ ಕ್ರೂಸ್ ಪ್ರವಾಸಿ ತಾಣವಾಗಿ ಮಂಗಳೂರು ಹೊರಹೊಮ್ಮುತ್ತಿದೆ. ಇಲ್ಲಿನ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೆಚ್ಚಿಸಲು ನವ ಮಂಗಳೂರು ಬಂದರು ಪ್ರಾಧಿಕಾರವು ವಿಶ್ವ ದರ್ಜೆಯ ಮೂಲಸೌಕರ್ಯ ಒದಗಿಸಲು ಬದ್ಧವಾಗಿದೆ ಎಂದು ಎನ್‌ಎಂಪಿಎ ತಿಳಿಸಿದೆ.