ಹರ್ಷಿತಾ ಕನ್ನಡ ಎಂಎ ಪದವಿಯಲ್ಲಿ 4 ಚಿನ್ನದ ಪದಕ

KannadaprabhaNewsNetwork |  
Published : Sep 13, 2024, 01:40 AM IST
12ಕೆಆರ್ ಎಂಎನ್ 10.ಜೆಪಿಜಿಬೆಂಗಳೂರು ವಿವಿಯ ಜ್ನಾನ ಜ್ಯೋತಿ ಸಭಾಂಗಣದಲ್ಲಿ ನಡೆದ 59ನೇ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವರು , ಕುಲಪತಿಗಳು ಮತ್ತು ಗಣ್ಯರ ಸಮ್ಮುಖದಲ್ಲಿ ವಿದ್ಯಾರ್ಥಿನಿ ಹರ್ಷಿತಾರವರು ನಾಲ್ಕು ಚಿನ್ನದ ಪದಕಗಳನ್ನು ಪಡೆದುಕೊಂಡರು. | Kannada Prabha

ಸಾರಾಂಶ

ರಾಮನಗರ: ತಾಲೂಕಿನ ಹೊಸದೊಡ್ಡಿ ಗ್ರಾಮದ ಕೃಷಿ ಕುಟುಂಬದ ಬಲರಾಮು ಮತ್ತು ಶೋಭ ದಂಪತಿ ಮಗಳಾದ ಬಿ.ಹರ್ಷಿತ ಕನ್ನಡ ಸಾಹಿತ್ಯದಲ್ಲಿ ಎಂಎ ಪದವಿ ಅಧ್ಯಯನ ನಡೆಸಿ ಬೆಂಗಳೂರು ವಿವಿಯಿಂದ ನಾಲ್ಕು ಚಿನ್ನದ ಪದಕ ಪಡೆದಿದ್ದಾರೆ.

ರಾಮನಗರ: ತಾಲೂಕಿನ ಹೊಸದೊಡ್ಡಿ ಗ್ರಾಮದ ಕೃಷಿ ಕುಟುಂಬದ ಬಲರಾಮು ಮತ್ತು ಶೋಭ ದಂಪತಿ ಮಗಳಾದ ಬಿ.ಹರ್ಷಿತ ಕನ್ನಡ ಸಾಹಿತ್ಯದಲ್ಲಿ ಎಂಎ ಪದವಿ ಅಧ್ಯಯನ ನಡೆಸಿ ಬೆಂಗಳೂರು ವಿವಿಯಿಂದ ನಾಲ್ಕು ಚಿನ್ನದ ಪದಕ ಪಡೆದಿದ್ದಾರೆ.

ಹರ್ಷಿತ ಅವರು ರಾಮನಗರ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಯನ ವಿಭಾಗದಲ್ಲಿ ಕನ್ನಡ ಎಂಎ ಅಧ್ಯಯನ ನಡೆಸಿ ಬೆಂಗಳೂರು ವಿವಿಗೆ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿದ್ದರು.

ಅತಿ ಹೆಚ್ಚು ಅಂಕಗಳಿಗಾಗಿ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘದ ಗೋಲ್ಡನ್ ಜುಬಿಲಿ ಗೋಲ್ಡ್ ಮೆಡಲ್, ಕನ್ನಡ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದಕ್ಕಾಗಿ ಶ್ರೀಮತಿ ನಂಜನಗೂಡು ತಿರುಮಲಾಂಬ ಬರ್ತ್ ಸೆಂಚುರಿ ಸೆಲೆಬ್ರೇಷನ್ ಕಮಿಟಿಯ ಗೋಲ್ಡ್ ಮೆಡಲ್, ಸಾಹಿತ್ಯ ಮತ್ತು ತೌಲನಿಕ ವಿಮರ್ಶೆಯಲ್ಲಿ ಡಾ. ಜಿ.ಎಸ್.ಶಿವರುದ್ರಪ್ಪ ಗೋಲ್ಡ್ ಮೆಡಲ್ ಹಾಗೂ ಕನ್ನಡ ಭಾಷಾ ವಿಜ್ಞಾನದಲ್ಲಿ ಶ್ರೀಮತಿ ವಿಜಯ ಗೋಲ್ಡ್ ಮೆಡಲ್ ಗಳನ್ನು ಪಡೆದುಕೊಂದಿದ್ದಾರೆ.

12ಕೆಆರ್ ಎಂಎನ್ 10.ಜೆಪಿಜಿಬೆಂಗಳೂರು ವಿವಿಯ ಜ್ನಾನ ಜ್ಯೋತಿ ಸಭಾಂಗಣದಲ್ಲಿ ನಡೆದ 59ನೇ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವರು , ಕುಲಪತಿಗಳು ಮತ್ತು ಗಣ್ಯರ ಸಮ್ಮುಖದಲ್ಲಿ ವಿದ್ಯಾರ್ಥಿನಿ ಹರ್ಷಿತಾರವರು ನಾಲ್ಕು ಚಿನ್ನದ ಪದಕ ಪಡೆದುಕೊಂಡರು.

12ಕೆಆರ್ ಎಂಎನ್ 9.ಜೆಪಿಜಿಬೆಂಗಳೂರು ವಿವಿಯ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆದ 59ನೇ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ, ಕುಲಪತಿ ಮತ್ತು ಗಣ್ಯರ ಸಮ್ಮುಖದಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ಬಿಡದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ವಿಜಯಕುಮಾರಿ ವಾಮನ ಚೌಹಾಣ ಎರಡು ಚಿನ್ನದ ಪದಕ ಪಡೆದುಕೊಂಡರು.

12ಕೆಆರ್ ಎಂಎನ್ 11.ಜೆಪಿಜಿ

ಬೆಂಗಳೂರು ವಿವಿಯ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆದ 59ನೇ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವರು, ಕುಲಪತಿಗಳು ಮತ್ತು ಗಣ್ಯರ ಸಮ್ಮುಖದಲ್ಲಿ ವಿದ್ಯಾರ್ಥಿ ಬಿ.ಸಿ.ಸಾಗರ್ ಚಿನ್ನದ ಪದಕ ಪಡೆದುಕೊಂಡರು. ಬಾನಂದೂರು ಗ್ರಾಮದ ರೈತಾಪಿ ಕುಟುಂಬದ ದಿವಂಗತ ಚಿಕ್ಕಲಿಂಗಯ್ಯ ಮತ್ತು ಪದ್ಮ ದಂಪತಿ ಪುತ್ರರಾದ ಬಿ.ಸಿ.ಸಾಗರ್ ಸ್ನಾತಕೋತ್ತರ ಪದವಿಯ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಪಡೆದಿದ್ದಾರೆ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ