ಲೋಕ ಅದಾಲತ್‌ನಲ್ಲಿ ಒಂದಾದ 4 ಜೋಡಿಗಳು

KannadaprabhaNewsNetwork |  
Published : Dec 16, 2024, 12:47 AM IST
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವಿ.ವಿಜಯ ಅವರ ನೇತೃತ್ವದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ವಿಚ್ಛೇದನ ಕೋರಿ ಬಂದವರನ್ನು ರಾಜಿ ಸಂದಾನ ಮೂಲಕ ಒಂದೊಗೂಡಿಸಲಾಯಿತು. | Kannada Prabha

ಸಾರಾಂಶ

ಲೋಕ ಅದಾಲತ್‌ನಲ್ಲಿ ಬಾಕಿ ಇರುವ 7989 ಪೈಕಿ 5420 ಹಾಗೂ ವಾಜ್ಯ ಪೂರ್ವ ಪ್ರಕರಣಗಳಲ್ಲಿ 29533 ಪೈಕಿ 22609 ಪ್ರಕರಣ ಸೇರಿ ಒಟ್ಟು 28029 ಪ್ರಕರಣಗಳನ್ನು ರಾಜಿ ಸಂದಾನ ಮೂಲಕ ಇತ್ಯರ್ಥಪಡಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲಾ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಬಾಕಿ 5420 ಹಾಗೂ ವಾಜ್ಯ ಪೂರ್ವ ಪ್ರಕರಣಗಳಲ್ಲಿ 22609 ಪ್ರಕರಣ ಸೇರಿ ಒಟ್ಟು 28029 ಪ್ರಕರಣಗಳನ್ನು ರಾಜಿ ಸಂದಾನ ಮೂಲಕ ಇತ್ಯರ್ಥಪಡಿಸಲಾಯಿತು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವಿ.ವಿಜಯ ನೇತೃತ್ವದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಬಾಕಿ ಇರುವ 7989 ಪೈಕಿ 5420 ಹಾಗೂ ವಾಜ್ಯ ಪೂರ್ವ ಪ್ರಕರಣಗಳಲ್ಲಿ 29533 ಪೈಕಿ 22609 ಪ್ರಕರಣ ಸೇರಿ ಒಟ್ಟು 28029 ಪ್ರಕರಣಗಳನ್ನು ರಾಜಿ ಸಂದಾನ ಮೂಲಕ ಇತ್ಯರ್ಥಪಡಿಸಲಾಯಿತು. ಅದಾಲತ್‌ನಲ್ಲಿ ಒಟ್ಟು ₹51.03 ಕೋಟಿ ಪ್ರಕರಣದ ಮೊತ್ತವಾಗಿತ್ತು. ಅಲ್ಲದೇ ವಿಚ್ಛೇದನ ಕೋರಿ ಬಾಗಲಕೋಟೆ ಹಾಗೂ ಬೀಳಗಿ ನ್ಯಾಯಾಲಯದಲ್ಲಿ ತಲಾ ಒಂದು ಹಾಗೂ ಬನಹಟ್ಟಿ ನ್ಯಾಯಾಲಯದಲ್ಲಿ 3 ಸೇರಿ ಒಟ್ಟು 5 ಜೋಡಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಕುಟುಂಬ ನ್ಯಾಯಾಲಯದಲ್ಲಿ ರಾಜಿ ಮೂಲಕ ಒಂದು ಮಾಡಲಾಯಿತು.

ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ 2187 ಪ್ರಕರಣಗಳ ಪೈಕಿ 1608, ಬೀಳಗಿ ನ್ಯಾಯಾಲಯದಲ್ಲಿ 140 ಪೈಕಿ 87, ಮುಧೋಳ ನ್ಯಾಯಾಲಯದಲ್ಲಿ 648 ಪೈಕಿ 517, ಬನಹಟ್ಟಿ ನ್ಯಾಯಾಲಯದಲ್ಲಿ 1146 ಪೈಕಿ 668, ಹುನಗುಂದ ನ್ಯಾಯಾಲಯದಲ್ಲಿ 404 ಪೈಕಿ 291, ಇಳಕಲ್ಲ ನ್ಯಾಯಾಲಯದಲ್ಲಿ 435 ಪೈಕಿ 352, ಬಾದಾಮಿ ನ್ಯಾಯಾಲಯದಲ್ಲಿ 739 ಪೈಕಿ 557 ಹಾಗೂ ಜಮಖಂಡಿ ನ್ಯಾಯಾಲಯದಲ್ಲಿ 2290 ಪೈಕಿ 1400 ಪ್ರಕರಣ ಇತ್ಯರ್ಥಪಡಿಸಲಾಯಿತು.

ಬ್ಯಾಂಕಿಗೆ ಸಂಬಂಧಿಸಿದ 6133 ಪೈಕಿ 309 ಪ್ರಕರಣಗಳಿಗೆ ಒಟ್ಟು 4.40 ಕೋಟಿ ರು.ಗಳಿಗೆ ಇತ್ಯರ್ಥಗೊಂಡರೆ, ವಿದ್ಯುತ ಬಿಲ್‌ಗೆ ಸಂಬಂಧಿಸಿದ 88 ಪೈಕಿ 88 ಇತ್ಯರ್ಥಗೊಂಡು 2.77 ಲಕ್ಷ ರು, ನೀರಿನ ಕರಕ್ಕೆ ಸಂಬಂಧಿಸಿದ 983 ಪೈಕಿ 51ಕ್ಕೆ 3.25 ಲಕ್ಷ ರು, ಕಂದಾಯ ಇಲಾಖೆಗೆ ಸಂಬಂಧಿಸಿದ 519 ಪೈಕಿ 364 ಪ್ರಕರಣ, ಸಂಚಾರಿ ಉಲ್ಲಂಘನೆಗೆ ಸಂಬಂಧಿಸಿದ 10170 ಪೈಕಿ 10170ಕ್ಕೆ 42.24 ಲಕ್ಷ ರು, ಆಸ್ತಿ ತೆರಿಗೆ ಸಂಬಂಧಿಸಿದಂತೆ 11640 ಪೈಕಿ 11627 ಪ್ರಕರಣಗಳನ್ನು 2.30 ಕೋಟಿ ರು.ಗಳಿಗೆ ಇತ್ಯರ್ಥಪಡಿಸಲಾಯಿತು.

ಲೋಕ ಅದಾಲತ್‌ನಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ.ರೆಹಮಾನ್, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶ ಜಿ.ಎ.ಮೂಲಿಮನಿ, ಜಿಲ್ಲಾ ಕುಟುಂಬ ನ್ಯಾಯಾಧೀಶ ಕೃಷ್ಣಮೂರ್ತಿ ಪಡಸಲಗಿ, ಪ್ರಧಾನ ಹಿರಿಯ ದಿವಾನಿ ನ್ಯಾಯಾಧೀಶರಾದ ಹೇಮಾ ಪಸ್ತಾಪೂರ, 2ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಮಹೇಶ ಪಾಟೀಲ, 2ನೇ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾಧೀಶ ರಾಜಶೇಖರ ತಿಳಗಂಜಿ, ಪ್ರಧಾನ ದಿವಾಣಿ ನ್ಯಾಯಾಧೀಶ ಮುರಗೇಂದ್ರ ತುಬಾಕೆ, ಹೆಚ್ಚುವರಿ ದಿವಾನಿ ನ್ಯಾಯಾಧೀಶ ಪಿ.ಎಚ್.ನಾರಾಯಣಕರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...