ಕನ್ನಡಪ್ರಭ ವಾರ್ತೆ ಯಲ್ಲಾಪುರ
ಶನಿವಾರ ಅಡಕೆ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಮ್ಮ ಸಂಸ್ಥೆಯಲ್ಲಿ ₹೧೦.೮ ಲಕ್ಷ ಕಾಯ್ದಿಟ್ಟ ನಿಧಿಗಾಗಿ ತೆಗೆದಿರಿಸಲಾಗಿದೆ. ಶಿಕ್ಷಣ ನಿಧಿಗೆ ₹೬೦.೪೮ ಸಾವಿರ ಇಡಲಾಗಿದೆ. ಈ ವರ್ಷವೂ ನಮ್ಮ ಸದಸ್ಯರಿಗೆ ಶೇ.೧೨ ಡಿವಿಡೆಂಡ್ ನೀಡುತ್ತಿದ್ದೇವೆ. ಕಟ್ಟಡ ನಿಧಿಗಾಗಿ ₹೧೦.೬೪ ಲಕ್ಷ ತೆಗೆದಿರಿಸಲಾಗಿದೆ. ಮಹೋತ್ಸವ ನಿಧಿಗಾಗಿ ₹೧ ಲಕ್ಷ, ಧರ್ಮಾರ್ಥ ನಿಧಿಗೆ ₹೬೦ ಸಾವಿರ, ಪ್ರಚಾರ ನಿಧಿಗೆ ₹೧ ಲಕ್ಷ, ಬೆಲೆ ಏರಿಳಿತ ನಿಧಿಗೆ ₹೩.೬೫ ಲಕ್ಷ, ಬ್ಯಾಡ್ ಡೆಡ್ ಪ್ರೊವಿಶನ್‌ಗೆ ₹೧೨ ಲಕ್ಷ ತೆಗೆದಿರಿಸಲಾಗಿದೆ ಎಂದು ವಿವರಿಸಿದರು.
ಸೆ.೧೦ರಂದು ಮಧ್ಯಾಹ್ನ ೩.೩೦ಕ್ಕೆ ಅಡಕೆ ಭವನದಲ್ಲಿ ಪ್ರಸಕ್ತ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ನಡೆಸಲಾಗುವುದು. ಆ ಸಂದರ್ಭದಲ್ಲಿ ಯುವ ಸಾಧಕ ಕೃಷಿಕರಿಗೆ ಸನ್ಮಾನ ಕೂಡ ನಡೆಯಲಿದೆ ಎಂದು ವಿವರಿಸಿದರು.ಸಂಘದ ಉಪಾಧ್ಯಕ್ಷ ಎಂ.ಜಿ. ಭಟ್ಟ ಶೀಗೆಪಾಲ, ನಿರ್ದೇಶಕರಾದ ಎಂ.ಆರ್. ಹೆಗಡೆ ತಾರೇಹಳ್ಳಿ, ಮಧುಕೇಶ್ವರ ಭಟ್ಟ, ಗೋಪಾಲಕೃಷ್ಣ ಹೆಗಡೆ ನಂದಿಸರ, ಜಿ.ಆರ್. ಹೆಗಡೆ, ಗಜಾನನ ಭಟ್ಟ ಹಿತ್ಲಳ್ಳಿ, ಎಂ.ಪಿ. ಹೆಗಡೆ ಚವತ್ತಿ, ರವೀಂದ್ರ ಗೌಡ ಕುಂದರಗಿ, ಜಾನು ಘಾಡಿ ಸೋಮನಳ್ಳಿ, ಮುಖ್ಯಕಾರ್ಯನಿರ್ವಾಹಕ ವಿನಾಯಕ ಹೆಗಡೆ ಇತರರಿದ್ದರು.