ಕುಣಿಗಲ್‌ ಪುರಸಭೆಗೆ 42 ಕೋಟಿ ಬಜೆಟ್‌ ಮಂಡನೆ

KannadaprabhaNewsNetwork | Published : Apr 4, 2025 12:45 AM

ಸಾರಾಂಶ

ಪುರಸಭೆಗೆ ಅವಿರೋಧವಾಗಿ ಆಯ್ಕೆಯಾದ ಮಂಜುಳಾ ನಾಗರಾಜ್ ತಿಂಗಳ ತುಂಬುವ ಮೊದಲೇ ಬಜೆಟ್ ಮಂಡಿಸಿ ಸದಸ್ಯರಿಂದ ಸೈ ಎನಿಸಿಕೊಂಡಿದ್ದಾರೆ

ಕನ್ನಡಪ್ರಭ ವಾರ್ತೆ ಕುಣಿಗಲ್ ಪುರಸಭೆಗೆ ಅವಿರೋಧವಾಗಿ ಆಯ್ಕೆಯಾದ ಮಂಜುಳಾ ನಾಗರಾಜ್ ತಿಂಗಳ ತುಂಬುವ ಮೊದಲೇ ಬಜೆಟ್ ಮಂಡಿಸಿ ಸದಸ್ಯರಿಂದ ಸೈ ಎನಿಸಿಕೊಂಡಿದ್ದಾರೆ ಪಟ್ಟಣದ ಪುರಸಭೆಯ ಆವರಣದಲ್ಲಿ 2025- 26ನೇ ಸಾಲಿನ ಬಜೆಟ್ ಮಂಡಿಸಿದ ಮಂಜುಳ ನಾಗರಾಜ್ 42 ಕೋಟಿ ಬಜೆಟ್ ಮಂಡಿಸಿ 47 ಲಕ್ಷ 83,000 ಉಳಿತಾಯ ತೋರಿಸಿದ್ದಾರೆ ಬಜೆಟ್ ಬಜೆಟ್ ಪ್ರತಿಯನ್ನು ಸಭೆಯಲ್ಲಿ ಓದಿದ ಮಂಜುಳಾ ಕುಣಿಗಲ್ ಪಟ್ಟಣದಲ್ಲಿ ನಡೆಯುವ ಹಲವಾರು ಜಾನಪದ ಕನ್ನಡ ಸಾಹಿತ್ಯ ಸಮ್ಮೇಳನ ವಾರ್ಡ್ ಗಳಲ್ಲಿ ನಾಮಪಲಕ ಅಳವಡಿಕೆ, ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ ಬಾಳೆಗೌಡ ಪಾರ್ಕ್ ನಲ್ಲಿ ಮ್ಯೂಸಿಕಲ್ ಲೈಟ್ , ಕುಣಿಗಲ್ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಪತ್ರಕರ್ತರಿಗೆ ವಿಮೆ, ಲಕ್ಷ ಗಿಡ ನೆಡುವ ಕಾರ್ಯಕ್ರಮ ಪೌರ ಕಾರ್ಮಿಕರಿಗೆ ವಿದೇಶಿ ಪ್ರಯಾಣ ಸ್ಮಶಾನ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳಿಂದ 41 ಕೋಟಿ 95 ಲಕ್ಷ 97,000 ರು.ಗಳನ್ನು ಖರ್ಚು ಮಾಡುವ ಗುರಿ ಹೊಂದಿ 47 ಲಕ್ಷದ ಉಳಿತಾಯ ಬಜೆಟ್ ತೋರಿಸಿದ್ದಾರೆ.ನಂತರ ಮಾತನಾಡಿದ ಅಧ್ಯಕ್ಷ ಮಂಜುಳಾ ಕುಣಿಗಲ್ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಶಾಶ್ವತ ವಿದ್ಯುತ್ ಸಂಪರ್ಕವನ್ನು ಚಾಲನೆ ನೀಡಲಾಗಿದೆ. ಕಸ ವಿಲೇವಾರಿ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವುದು ಕುಣಿಗಲ್ ಪಟ್ಟಣದ ಕುಡಿಯುವ ನೀರು ಮೂಲಭೂತ ಸೌಕರ್ಯ ಸೇರಿದಂತೆ ಇತರ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸುವುದಾಗಿ ಎಲ್ಲರ ಸಹಕಾರ ಬೇಕಿದೆ ಎಂದರು. ಉಪಾಧ್ಯಕ್ಷ ಶ್ರೀನಿವಾಸ್, ಮುಖ್ಯ ಅಧಿಕಾರಿ ಮಂಜುಳಾ, ಪುರಸಭಾ ಸದಸ್ಯರಾದ ರಂಗಸ್ವಾಮಿ, ಕೃಷ್ಣ, ವಾಸು, ನಾಗೇಂದ್ರ ಅರುಣ್ ಕುಮಾರ್, ಸದಸ್ಯರಾದ ಜಯಲಕ್ಷ್ಮಿ ಆಸ್ಮ ರೂಪಿಣಿ ಆನಂದ್ ಸೇರಿದಂತೆ ಇತರರು ಇದ್ದರು.

Share this article