ಆಳ್ವಾಸ್ ನ 45 ವಿದ್ಯಾರ್ಥಿಗಳು ಟಾಪರ್ಸ್

KannadaprabhaNewsNetwork |  
Published : Apr 11, 2024, 12:50 AM IST
ಪಿಯುಸಿ:  ಆಳ್ವಾಸ್ 45 ವಿದ್ಯಾರ್ಥಿಗಳು ರ‍್ಯಾಂಕ್‌ ಟಾಪರ್ಸ್685 ಮಂದಿ ಶೇ 95ಕ್ಕೂ ಅಧಿಕ ಅಂಕಗಳಿಕೆ | Kannada Prabha

ಸಾರಾಂಶ

ಈ ಬಾರಿ ಪಿಯುಸಿ ಫಲಿತಾಂಶದಲ್ಲಿ ಮೂಡುಬಿದಿರೆ ಆಳ್ವಾಸ್‌ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ 26, ವಾಣಿಜ್ಯ 18, ಕಲಾ ವಿಭಾಗ 1 ಒಟ್ಟು 45 ವಿದ್ಯಾರ್ಥಿಗಳು ಟಾಪ್ ಟೆನ್ ರ‍್ಯಾಂಕ್‌ ಸಾಧನೆ ಮೆರೆದಿದ್ದಾರೆ. 2882 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಸಾಧನೆ ಮಾಡಿದ್ದು 682 ವಿದ್ಯಾರ್ಥಿಗಳು ಶೇ 95ಕ್ಕೂ ಅಧಿಕ ಅಂಕ ಗಳಿಕೆಯ ಸಾಧನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಈ ಬಾರಿ ಪಿಯುಸಿ ಫಲಿತಾಂಶದಲ್ಲಿ ಮೂಡುಬಿದಿರೆ ಆಳ್ವಾಸ್‌ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ 26, ವಾಣಿಜ್ಯ 18, ಕಲಾ ವಿಭಾಗ 1 ಒಟ್ಟು 45 ವಿದ್ಯಾರ್ಥಿಗಳು ಟಾಪ್ ಟೆನ್ ರ‍್ಯಾಂಕ್‌ ಸಾಧನೆ ಮೆರೆದಿದ್ದಾರೆ. 2882 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಸಾಧನೆ ಮಾಡಿದ್ದು 682 ವಿದ್ಯಾರ್ಥಿಗಳು ಶೇ 95ಕ್ಕೂ ಅಧಿಕ ಅಂಕ ಗಳಿಕೆಯ ಸಾಧನೆ ಮಾಡಿದ್ದಾರೆ. ವಿಷಯವಾರು 866 ಮಂದಿ ನೂರಕ್ಕೆ ನೂರು ಅಂಕ , 571 ವಿದ್ಯಾರ್ಥಿಗಳು ಒಂದೇ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಈ ಪೈಕಿ ಕಾಲೇಜಿನ 11 ಮಂದಿ ವಿಕಲ ಚೇತನರೂ ಉತ್ತಮ ಸಾಧನೆ ಮಾಡುವ ಮೂಲಕ ಅಪರೂಪದ ದಾಖಲೆ ಬರೆದಿದ್ದಾರೆ. ಈ ರೀತಿ ದ.ಕ ಜಿಲ್ಲೆ ಪಿಯು ಫಲಿತಾಂಶದಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಮೂಡುಬಿದಿರೆ ತಾಲೂಕಿನ ಶಿಕ್ಷಣ ಸಂಸ್ಥೆಗಳ ಜತೆ ಆಳ್ವಾಸ್ ಕೊಡುಗೆ ಗಮನಾರ್ಹ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

45 ಟಾಪ್ ರ‍್ಯಾಂಕ್‌ ಸಾಧಕರು:

ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ 4ನೇ ರ‍್ಯಾಂಕ್‌ (595 ಅಂಕ) ನೂತನ ಆರ್ ಗೌಡ, ವಾಣಿಜ್ಯ ವಿಭಾಗದಲ್ಲಿ ತರುಣ್ ಕುಮಾರ್ ಪಾಟೀಲ್ (594 ಅಂಕ) 4 ನೇ ಸ್ಥಾನ, ವಿಜ್ಞಾನ ವಿಭಾಗದ ಆಕಾಶ್ ಪಿ.ಎಸ್ (594 ಅಂಕ) 5 ನೇ ಸ್ಥಾನ, ವಾಣಿಜ್ಯ ವಿಭಾಗದಲ್ಲಿ ಅನಿರುದ್ಧ ಪಿ ಮೆನನ್, ಸುಮಿತ್ ವಿ.ರೂಗೆ, ಎಂ. ಸುಧೀಂದ್ರ ಕಾಮತ್ (593 ಅಂಕ) 5 ನೇ ರ‍್ಯಾಂಕ್ , ಸಹನಾ ಕೆ, ಶಿವಷೇಶ ಕೆ. ಆರ್ (592 ಅಂಕ) 6 ನೇ ರ‍್ಯಾಂಕ್ ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ವಾಣಿ ಕೆ, ಮೇಧಾ ವಿ, ಜೀವಿಕಾ ಎಸ್,(592 ಅಂಕ) 7ನೇ ರ‍್ಯಾಂಕ್, ನಮಿತ್ ಎ.ಪಿ, ಪ್ರೀತಂ, ಎಂ. (591 ಅಂಕ) 8ನೇ ರ‍್ಯಾಂಕ್,ಚೇತನ್ , ವೀಕ್ಷಾ ವಿ. ಶೆಟ್ಟಿ, ಸುಕೃತಾ ಎಸ್. ಭಟ್, ಆಕಾಶ್ ಗೌಡ ಜಿ. ಕೆ. ಸುಪ್ರೀತಾ ಎನ್.ಎಸ್, ರಕ್ಷಿತಾ ವಿ. ನಾಯ್ಕ್ , ಶೃದ್ಧಾ ರಾವ್, (590 ಅಂಕ) 9 ನೇ ರ‍್ಯಾಂಕ್, ಭೂಮಿಕಾ ಎಸ್. ನಾಯ್ಕ್, ಶ್ರೀಜಾ ಹೆಬ್ಬಾರ್, ಆರ್. ರಕ್ಷಿತಾ, ರಕ್ಷಿತಾ ಆರ್, ಅಮನ್ ಪ್ರಿಯಾಂಶ್, ಅಂಕಿತಾ ಆರ್.ಪಾಟೀಲ್, ಭಾವನಾ ಬೀರದಾರ್, ಬಿಂದು ಐ, ಮೇಘನಾ ಎಂ. ವೈ, ರೋಹಿತ್ ರಾಜು ಸಿಂಘೇ, ಸಿಂಚನ ಪಿ.ಬಿ, ಮದಗೊಂಡ ತುಕಾರಾಂ ಹೊರ್ಟಿಕರ್(589 ಅಂಕ) 10 ನೇ ರ‍್ಯಾಂಕ್ ಪಡೆದಿದ್ಧಾರೆ.

ವಾಣಿಜ್ಯ ವಿಭಾಗದಲ್ಲಿ ಹರೀಶ್ ಯು.ಕೆ , ಭೂಮಿ ಆರ್. ಭಂಡಾರಿ, ಷಾನ್ ಪಿಂಟೋ, ಅಶೋಕ್ ಸುತಾರ್, ಮಂಜುನಾಥ್ ಡಿ. (591 ಅಂಕ) 7ನೇ ರ‍್ಯಾಂಕ್, ವಿನಯ್ ಸಲಾದಿ, ದಿಯಾ ಶುಭಕರ್ ಪೂಜಾರಿ, ವಿಜಯ್ ಕುಮಾರ್ ಯಲ್ಲಪ್ಪ ಡಿ. , ಶ್ರೇಯ ಗೌರೀ ಕೆ.ಎನ್ (590 ಅಂಕ) 8 ನೇ ರ‍್ಯಾಂಕ್,

ಶರಣ್ಯ ಬಂಗೇರ, ಚೈತನ್ಯ ಶ್ರೀ ರಂಗ, ದಿವ್ಯ ಆರ್. ಜ್ಯೋತಿ (588 ಅಂಕ) 10ನೇ ರ‍್ಯಾಂಕ್ ಕಲಾ ವಿಭಾಗದಲ್ಲಿ ಭುವನ್ ಕೆ.ಪವಾರ್ (588 ಅಂಕ) 9ನೇ ರ‍್ಯಾಂಕ್ ಪಡೆದಿದ್ದಾರೆ.

ಕನ್ನಡ ವಿಷಯದಲ್ಲಿ 22, ಸಂಸ್ಕೃತದಲ್ಲಿ 54, ಬೌತಶಾಸ್ತ್ರದಲ್ಲಿ 9, ರಸಾಯನ ಶಾಸ್ತ್ರದಲ್ಲಿ 81, ಗಣಿತದಲ್ಲಿ 232, ಜೀವಶಾಸ್ತ್ರದಲಿ 290, ಗಣಕ ವಿಜ್ಞಾನದಲ್ಲಿ 39, ಅಕೌಂಟೆನ್ಸಿ-53, ಸಂಖ್ಯಾಶಾಸ್ತ್ರದಲ್ಲಿ 7, ಇಲೆಕ್ಟ್ರಾನಿಕ್ಸ್ ನಲ್ಲಿ 4, ಅರ್ಥಶಾಸ್ತ್ರದಲ್ಲಿ 35, ಬ್ಯುಸಿನೆಸ್ ಸ್ಟಡೀಸ್ ನಲ್ಲಿ ೦೯, ಬೇಸಿಕ್ ಮ್ಯಾತ್ಸ್ ನಲ್ಲಿ 27, ಸಮಾಜಶಾಸ್ತ್ರದಲ್ಲಿ 2, ರಾಜ್ಯಶಾಸ್ತ್ರದಲ್ಲಿ 2 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.

4 ವಿಷಯಗಳಲ್ಲಿ 9 ಮಂದಿ, 3 ವಿಷಯಗಳಲ್ಲಿ 38 , 2 ವಿಷಯಗಳಲ್ಲಿ 148 , ಒಂದು ವಿಷಯದಲ್ಲಿ 571ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲ ಪ್ರೊ. ಎಂ. ಸದಾಕತ್, ಕಾಮರ್ಸ್ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ, ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!