ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ 49 ಕೊಳವೆ ಬಾವಿ ಮಂಜೂರು

KannadaprabhaNewsNetwork | Published : May 9, 2025 12:33 AM
Follow Us

ಸಾರಾಂಶ

ಬೀರೂರು, 2023-24 ಮತ್ತು 2024-25 ಸೇ ಸಾಲಿನಲ್ಲಿ ಕಡೂರು ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಕೆ.ಎಸ್.ಆನಂದ್ ಅವರು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಒಟ್ಟು 49 ಕೊಳವೆ ಬಾವಿಗಳನ್ನು ಮಂಜೂರು ಮಾಡಿಸಿದ್ದಾರೆ ಎಂದು ತಾಳುಕು ಬಗರ್ ಹುಕುಂ ಕಮಿಟಿ ಸದಸ್ಯ ಹೊಗರೇಹಳ್ಳಿ ಶಶಿಕುಮಾರ್ ಹೇಳಿದರು.

- ಗಂಗಾ ಕಲ್ಯಾಣ ಯೋಜನೆ ಕಾಮಗಾರಿಗೆ ಬಗರ್ ಹುಕುಂ ಕಮಿಟಿ ಸದಸ್ಯ ಹೊಗರೇಹಳ್ಳಿ ಶಶಿಕುಮಾರ್ ಚಾಲನೆ

ಕನ್ನಡಪ್ರಭ ವಾರ್ತೆ,ಬೀರೂರು.2023-24 ಮತ್ತು 2024-25 ಸೇ ಸಾಲಿನಲ್ಲಿ ಕಡೂರು ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಕೆ.ಎಸ್.ಆನಂದ್ ಅವರು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಒಟ್ಟು 49 ಕೊಳವೆ ಬಾವಿಗಳನ್ನು ಮಂಜೂರು ಮಾಡಿಸಿದ್ದಾರೆ ಎಂದು ತಾಳುಕು ಬಗರ್ ಹುಕುಂ ಕಮಿಟಿ ಸದಸ್ಯ ಹೊಗರೇಹಳ್ಳಿ ಶಶಿಕುಮಾರ್ ಹೇಳಿದರು.ಬೀರೂರು ಸಮೀಪದ ಹೊಗರೇಹಳ್ಳಿಯಲ್ಲಿ ಗುರುವಾರ ಫಲಾನುಭವಿಯೊಬ್ಬರ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಈ ಯೋಜನೆಯಡಿ ಪ್ರತಿ ಫಲಾನುಭವಿ ರೈತನಿಗೆ 1 ಕೊಳವೆಬಾವಿ, ಪಂಪ್, ಮೋಟಾರ್, ಮತ್ತು ಟಿಸಿ ನೀಡಲಾಗುತ್ತಿದ್ದು, ಸರ್ಕಾರ ಗಂಗಾಕಲ್ಯಾಣ ಯೋಜನೆಯಡಿ ಒಟ್ಟು ₹ 5ಲಕ್ಷ ನೀಡಲಾಗುತ್ತಿದೆ. ಇದು ಬಡ ರೈತರ ಸಬಲೀಕರಣಕ್ಕೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಆಯ್ಕೆಯಾಗಿರುವ ಎಲ್ಲಾ ಫಲಾನುಭವಿಗಳ ಗ್ರಾಮಗಳಲ್ಲು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದರು.

ಬೇರೆ ವಿಧಾನ ಸಭಾ ಕ್ಷೇತ್ರಗಳಿಗೆ ಸರ್ಕಾರ ಕಡಿಮೆ ಕೊಳವೆಬಾವಿಗಳನ್ನು ಮಂಜೂರು ಮಾಡಿದೆ. ಆದರೆ ಈ ಮಂಜೂರು ಮಾಡುವ ವಿಷಯದ ಬಗ್ಗೆ ಶಾಸಕ ಆನಂದ್ ಅವರು ಕಡೂರು ಕ್ಷೇತ್ರದ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿದ ಪರಿಣಾಮ ನೀರಾವರಿ ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚಿನ ಕೊಳವೆ ಮಂಜೂರು ಮಾಡಿದ್ದಾರೆ. ರೈತರು ಮತ್ತು ಬಡವರ್ಗದ ಜನರ ಮೇಲೆ ಶಾಸಕ ಆನಂದ ಇಟ್ಟಿರುವ ಕಾಳಜಿಗೆ ಎಲ್ಲಾ ಫಲಾನುಭವಿಗಳ ಪರವಾಗಿ ಕೃತಜ್ಞತೆ ತಿಳಿಸಿದರು.ಫಲಾನುಭವಿ ಹೊಗರೇಹಳ್ಳಿ ರೈತ ರಮೇಶ್ ಮಾತನಾಡಿ, ಗಂಗಕಲ್ಯಾಣ ಯೋಜನೆಗೆ ಈ ಹಿಂದೆ ಹಲವು ಬಾರಿ ಅರ್ಜಿ ಹಾಕಿದ್ದರು ಯಾವುದೇ ಪ್ರಯೋಜನವಾಗದೇ ಉಳ್ಳವರ ಪಾಲಾಗುತ್ತಿತ್ತು ಈ ಯೋಜನೆ. ಈ ಸಾಲಿನಲ್ಲಿ ಅರ್ಜಿ ಹಾಕಿ ಶಾಸಕರಿಗೆ ಬಡ ರೈತರ ಕಷ್ಟ ಹೇಳಿಕೊಂಡ ತಕ್ಷಣ ಈ ಸಾಲಿನಲ್ಲಿಯೇ ಮಂಜೂರು ಮಾಡಿಸಿರುವುದು ರೈತ ಕುಟುಂಬಗಳಿಗೆ ಅಕ್ಷಯಪಾತ್ರೆ ನೀಡಿದಂತಾಗಿ ನಾವು ಕೂಡ ಕೃಷಿಯಲ್ಲಿ ಯಶಸ್ಸು ಕಾಣುವ ಸ್ಥಿತಿ ಬರಲಿದೆ. ಅವರ ಈ ಸಹಾಯಕ್ಕೆ ಧನ್ಯವಾದಗಳು ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಡಿ.ದೇವರಾಜು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಟಿ.ರಾಕೇಶ್, ಗ್ರಾಪಂ ಸದಸ್ಯ ಸುರೇಶ್, ಫಲಾನುಭವಿಗಳಾದ ಪ್ರಹ್ಲಾದ್, ನಾಗರಾಜ್, ಜಾನಪ್ಪ, ಮಂಜುನಾಥ್, ಮುಖಂಡರಾದ ಪ್ರವೀಣ್, ದೇವರಾಜ್, ಸೇರಿದಂತೆ ಮತ್ತಿತರರು ಇದ್ದರು. 8 ಬೀರೂರು 1ಬೀರೂರು ಹೋಬಳಿಯ ಹೊಗರೇಹಳ್ಳಿ ಗ್ರಾಮದಲ್ಲಿ ಡಿ.ದೇವರಾಜು ಅಭಿವೃದ್ಧಿ ನಿಗಮದಿಂದ ಮಂಜೂರಾಗಿದ್ದ ಗಂಗಾ ಕಲ್ಯಾಣ ಯೋಜನೆ ಕಾಮಗಾರಿಗೆ ತಾಲೂಕು ಬಗರ್ ಹುಕುಂ ಕಮಿಟಿ ಸದಸ್ಯ ಹೊಗರೇಹಳ್ಳಿ ಚಾಲನೆ ನೀಡಿದರು. ನಿಗಮದ ವ್ಯವಸ್ಥಾಪಕ ಟಿ.ರಾಕೇಶ್ ಇದ್ದರು.