ಇಂದಿನಿಂದ 5 ದಿನಗಳ ಕಾಲ ಕನಕೋತ್ಸವ

KannadaprabhaNewsNetwork |  
Published : Jan 28, 2026, 01:45 AM IST
ಕೆ ಕೆ ಪಿ ಸುದ್ದಿ 02: ಬುಧವಾರ ದಿಂದ ಸತತ ಐದು ದಿನಗಳಕಾಲ ನಡೆಯಲಿರುವ ಕನಕೋತ್ಸವದ ಬಗ್ಗೆ ಬಮೂಲ್ ಅಧ್ಯಕ್ಷ ಡಿ. ಕೆ ಸುರೇಶ್ ಮಾಹಿತಿ ನೀಡಿದರು.  | Kannada Prabha

ಸಾರಾಂಶ

ಕನಕಪುರ: ತಾಲೂಕಿನ ಜನತೆಯ ಹಬ್ಬಕನಕೋತ್ಸವ ಸಮಾರಂಭ ಗ್ರಾಮೀಣ ಯುವ ಪ್ರತಿಭೆಗಳನ್ನು ಉತ್ತೇಜಿಸುವ ದೊಡ್ಡ ವೇದಿಕೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು

ಕನಕಪುರ: ತಾಲೂಕಿನ ಜನತೆಯ ಹಬ್ಬಕನಕೋತ್ಸವ ಸಮಾರಂಭ ಗ್ರಾಮೀಣ ಯುವ ಪ್ರತಿಭೆಗಳನ್ನು ಉತ್ತೇಜಿಸುವ ದೊಡ್ಡ ವೇದಿಕೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.

ತಾಲೂಕು ಕ್ರೀಡಾಂಗಣದಲ್ಲಿ ಬುಧವಾರದಿಂದ ಸತತ ಐದು ದಿನಗಳ ಕಾಲ ನಡೆಯಲಿರುವ ಕನಕೋತ್ಸವದ ಪೂರ್ವಭಾವಿ ತಯಾರಿಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ಕನಕೋತ್ಸವ ಅನೇಕ ಜನಪ್ರತಿನಿಧಿಗಳಿಗೂ ಸ್ಪೂರ್ತಿಯಾಗಿದ್ದು, ತಾಲೂಕಿನ ಜನರಲ್ಲಿರುವ ಸಾಹಿತ್ಯ, ಶೈಕ್ಷಣಿಕ, ಕ್ರೀಡೆ, ವೃತ್ತಿಯ ಸಾಧಕರನ್ನು ಗುರುತಿಸಿ

ಕನಕೋತ್ಸವದಲ್ಲಿ ಗೌರವಿಸುತ್ತೇವೆ. ಬುಧವಾರ ಬೆಳಗ್ಗೆ 5 ಗಂಟೆಗೆ ಯೋಗ ಗುರು ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಯೋಗಾಸನದೊಂದಿಗೆ ಆರಂಭವಾಗಲಿದೆ ಎಂದು ಹೇಳಿದರು.

ಕಳೆದ ಮೂರು ತಿಂಗಳಿಂದ ಕಾರ್ಯಕ್ರಮಕ್ಕೆ ತಯಾರಿ ನಡೆಸಿ ಗ್ರಾಮೀಣ ಭಾಗದಲ್ಲೂ ಅನೇಕ ಸ್ಪರ್ಧೆಗಳನ್ನ ಆಯೋಜಿಸಿದ್ದೇವೆ. ಜ.28ರಂದು ಬುಧವಾರ ಕನಕಪುರದಲ್ಲಿ ರಂಗೋಲಿ ಸ್ಪರ್ಧೆ ನಡೆಯಲಿದ್ದು ಹಲವು ಕಲಾ ತಂಡಗಳೊಂದಿಗೆ ಸುಮಾರು 250 ಗ್ರಾಮ ದೇವತೆಗಳ ಸಮೇತ ಆನೆ ಅಂಬಾರಿಯಲ್ಲಿ ಶಕ್ತಿ ದೇವತೆಗಳ ಮೆರವಣಿಗೆ ನಡೆಯಲಿದೆ ಎಂದರು.ಜ.29ರಂದು ಗುರುವಾರ ಬೆಳಿಗ್ಗೆ ಪುರುಷರ ಮ್ಯಾರಥಾನ್ ಓಟ ಹಾಗೂ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಮನರೇಗಾ ಯೋಜನೆ ವಿಷಯದಲ್ಲಿ ಮಕ್ಕಳು ಚಿತ್ರ ಬರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಜನಪದ, ದೇಶ ಭಕ್ತಿ ಗೀತೆ, ಸಿನಿಮಾ ಗೀತೆಗಳ ಜಿಲ್ಲಾ ಮಟ್ಟದ ಸ್ಪರ್ಧೆ ಏರ್ಪಡಿಸಲಾಗಿದೆ. ಜ.30ರಂದು ಮಹಿಳೆಯರ ಮ್ಯಾರಥಾನ್ ಓಟ, ವಾಯ್ಸ್ ಆಫ್‌ ಕನಕೋತ್ಸವ, ಕೇಶ ವಿನ್ಯಾಸ ಸ್ಪರ್ಧೆ ಹಾಗೂ ಭಾರತೀಯ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಸಂಜೆ ರಘು ದೀಕ್ಷಿತ್ ಹಾಗೂ ಸಂಚಿತ್ ಹೆಗಡೆ ಅವರ ತಂಡಗಳಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಜ.31ರಂದು 8700 ವಿದ್ಯಾರ್ಥಿಗಳಿಗೆ(ಕಳೆದ ಎರಡು ವರ್ಷಗಳನ್ನು ಸೇರಿಸಿ) ಪುರಸ್ಕಾರ ಮಾಡಲಾಗುವುದು. ಅಂದು ಸಂಜೆ ವಿಜಯ್ ಪ್ರಕಾಶ್ ಅವರ ತಂಡದಿಂದ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಫೆ.1ರಂದು ಮೆಹಂದಿ ಸ್ಪರ್ಧೆ, ಕನಕೋತ್ಸವ ರೀಲ್ ಹಬ್ಬ ನಡೆಯಲಿದೆ. ಚಂದನ್ ಶೆಟ್ಟಿ, ನವೀನ್ ಸಜ್ಜು ಹಾಗೂ ಆಲ್ ಓಕೆ ತಂಡದಿಂದ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದರು.

ಜ.28ರಿಂದ ಕುಸ್ತಿ, ಚೆಸ್, ಪುರುಷರ ದೇಹಧಾಡ್ಯ ಸ್ಪರ್ಧೆ, ಟೆನಿಸ್, ಕಬಡ್ಡಿ, ಖೋಖೊ, ಬಾಸ್ಕೆಟ್ ಬಾಲ್ ಕ್ರೀಡೆಗಳು ಆರಂಭವಾಗಲಿವೆ. ಜೊತೆಗೆ ಪ್ರತಿನಿತ್ಯ ವಿಜ್ಞಾನ ಮೇಳ, ಫಲಪುಷ್ಪ ಪ್ರದರ್ಶನದ ಜೊತೆಗೆ ಮಕ್ಕಳಿಗಾಗಿ ಆಕರ್ಷಣೀಯ ಆಟಗಳ ಆಯೋಜನೆ ಮಾಡಲಾಗಿದೆ. ತಾಲೂಕಿನ ಜನತೆ ತಪ್ಪದೇ ಈ ಎಲ್ಲ ಸಮಾರಂಭಗಳಿಗೂ ಆಗಮಿಸಿ ಸಂಭ್ರಮಿಸಿ ಯಶಸ್ವಿಗೊಳಿಸುವಂತೆ ಡಿ.ಕೆ.ಸುರೇಶ್‌ ಮನವಿ ಮಾಡಿದರು

ಕೆ ಕೆ ಪಿ ಸುದ್ದಿ 02:

ಕನಕಪುರದಲ್ಲಿ ಜ.28ರಂದು ಬುಧವಾರದಿಂದ ಸತತ ಐದು ದಿನಗಳ ಕಾಲ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಕನಕೋತ್ಸವ ಕುರಿತು ಬಮುಲ್ ಅಧ್ಯಕ್ಷ ಡಿ.ಕೆ,ಸುರೇಶ್ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ