ಪ್ರತಿ 2 ಹೆಕ್ಟೇರ್‌ಗೆ 5 ಪಾಕೇಟ್ ಬೀಜ

KannadaprabhaNewsNetwork |  
Published : May 31, 2024, 02:16 AM IST
ಮುರಗೋಡ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಕೃಷಿ ಇಲಾಖೆಯಿಂದ ಸರಕಾರಿ ಸಹಾಯ ಧನದಲ್ಲಿ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. | Kannada Prabha

ಸಾರಾಂಶ

ಕೃಷಿಕರು ಭೂ ತಾಯಿಯ ಮೇಲೆ ನಂಬಿಕೆಯಿಟ್ಟು ಶ್ರಮವಹಿಸಿ ದುಡಿದಲ್ಲಿ ಸಮೃದ್ಧ ಫಸಲು ಪಡೆದು ತಮ್ಮ ಆರ್ಥಿಕ ಮಟ್ಟ ಪ್ರಗತಿ ಪಡಿಸಿಕೊಳ್ಳಲು ಸಾಧ್ಯವಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಸಂಕೇತಾ ಹಟ್ಟಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲಕೃಷಿಕರು ಭೂ ತಾಯಿಯ ಮೇಲೆ ನಂಬಿಕೆಯಿಟ್ಟು ಶ್ರಮವಹಿಸಿ ದುಡಿದಲ್ಲಿ ಸಮೃದ್ಧ ಫಸಲು ಪಡೆದು ತಮ್ಮ ಆರ್ಥಿಕ ಮಟ್ಟ ಪ್ರಗತಿ ಪಡಿಸಿಕೊಳ್ಳಲು ಸಾಧ್ಯವಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಸಂಕೇತಾ ಹಟ್ಟಿಹೊಳಿ ಹೇಳಿದರು. ಸಮೀಪದ ಮುರಗೋಡ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಕೃಷಿ ಇಲಾಖೆಯಿಂದ ಸರ್ಕಾರಿ ಸಹಾಯ ಧನದಲ್ಲಿ ನೀಡುವ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸಕ್ತ ವರ್ಷದ ಮುಂಗಾರು ಹಂಗಾಮಿಗೆ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ರೈತರಿಗೆ ಪ್ರತಿ 2 ಹೆಕ್ಟೇರ್‌ಗೆ 5 ಪಾಕೇಟ್ ಬಿತ್ತನೆ ಬೀಜ ವಿತರಿಸಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ಕೃಷಿ ಅಧಿಕಾರಿ ನಾಗೇಶ ವಿರಕ್ತಮಠ ಮಾತನಾಡಿ, ಮುಂಗಾರು ಹಂಗಾಮಗೆ ಮುರಗೋಡ ಹೋಬಳಿಯ ಎಲ್ಲ ಸಣ್ಣ, ಅತಿ ಸಣ್ಣ ಹಾಗೂ ದೊಡ್ಡ ರೈತರಿಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಸೋಯಾಬಿನ್, ಹೆಸರು, ಉದ್ದು, ಸಜ್ಜೆ, ಗೋವಿನ ಜೋಳ ಬೀಜ ದಾಸ್ತಾನು ಮಾಡಲಾಗಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.ಸವದತ್ತಿ ತಾಲೂಕು ಎಪಿಎಂಸಿ ಮಾಜಿ ಉಪಾಧ್ಯಕ್ಷ ರಾಮಚಂದ್ರ ಶೆಟ್ಟರ, ಎಂ.ಎ.ಅಮಠೆ, ಪ್ರಕಾಶ ಹಟ್ಟಿಹೊಳಿ, ರಾಜು ಕಲಾಲ, ಶೇತಾ ಕೋಟಗಿ, ರೈತ ಅನುವುಗಾರ ದುರ್ಗಪ್ಪ ಭಜಂತ್ರಿ, ಎಫ್.ಎಸ್.ಸಿದ್ದನಗೌಡರ, ಯಮನಪ್ಪ ಮಾದಿಗರ, ಶಿವು ದಳವಾಯಿ, ರಾಜು ಮರಮಣ್ಣವರ, ಬಸವರಾಜ ಗೌಡರ, ಬಸವರಾಜ ಹುಚನಟ್ಟಿ, ರುದ್ರಗೌಡ ಗೌಡರ, ಶಂಕ್ರೆಪ್ಪ ಮೂಗಬಸವ, ಮಲ್ಲಯ್ಯ ಪೂಜೇರಿ, ನಾಗಪ್ಪ ಬೂದಗಟ್ಟಿ ಹಾಗೂ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!