ಹೊಸ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಗಜೇಂದ್ರಗಡದ ೫ ಸ್ಥಳಗಳು

KannadaprabhaNewsNetwork |  
Published : Sep 22, 2025, 01:01 AM IST
ಗಜೇಂದ್ರಗಡ ಸಮೀಪದ ಕಾಲಕಾಲೇಶ್ವರ ದೇವಸ್ಥಾನ. | Kannada Prabha

ಸಾರಾಂಶ

ತಾಲೂಕಿನ ಬಹುವರ್ಷದ ಬೇಡಿಕೆಗೆ ಸರ್ಕಾರ ಹಸಿರು ನಿಶಾನೆ ನೀಡಿದ್ದು, ಗಜೇಂದ್ರಗಡ ಕೋಟೆ, ಕಾಲಕಾಲೇಶ್ವರ ಕ್ಷೇತ್ರ ಹಾಗೂ ಸೂಡಿ ಸೇರಿ ೫ಕ್ಕೂ ಅಧಿಕ ಸ್ಥಳಗಳನ್ನು ಗುರುತಿಸಿದೆ. ಪಟ್ಟಣ ಸೇರಿ ತಾಲೂಕಿನಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಶರವೇಗ ಸಿಗುವ ನಿರೀಕ್ಷೆ ಮೂಡಿಸಿದೆ.

ಎಸ್.ಎಂ. ಸೈಯದ್ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ತಾಲೂಕಿನ ಬಹುವರ್ಷದ ಬೇಡಿಕೆಗೆ ಸರ್ಕಾರ ಹಸಿರು ನಿಶಾನೆ ನೀಡಿದ್ದು, ಗಜೇಂದ್ರಗಡ ಕೋಟೆ, ಕಾಲಕಾಲೇಶ್ವರ ಕ್ಷೇತ್ರ ಹಾಗೂ ಸೂಡಿ ಸೇರಿ ೫ಕ್ಕೂ ಅಧಿಕ ಸ್ಥಳಗಳನ್ನು ಗುರುತಿಸಿದೆ. ಪಟ್ಟಣ ಸೇರಿ ತಾಲೂಕಿನಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಶರವೇಗ ಸಿಗುವ ನಿರೀಕ್ಷೆ ಮೂಡಿಸಿದೆ.

ಪ್ರವಾಸೋದ್ಯಮ ಕ್ಷೇತ್ರವನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ಯಲು ರಾಜ್ಯ ಸರ್ಕಾರವು ಕರ್ನಾಟಕ ಪ್ರವಾಸೋದ್ಯಮ ನೀತಿ ೨೦೨೪-೨೫ನೇ ಅಡಿಯಲ್ಲಿ ತಾಲೂಕಿನ ೫ಕ್ಕೂ ಅಧಿಕ ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳನ್ನು ಗುರುತಿಸಿದೆ.

ಗಜೇಂದ್ರಗಡ ಕೋಟೆ, ಕಾಲಕಾಲೇಶ್ವರ ದೇವಸ್ಥಾನ, ಸೂಡಿಯ ನಾಗೇಶ್ವರ ದೇವಸ್ಥಾನ (ಜೋಡು ಕಳಸ), ನಾಗರಕುಂಡ (ರಸದ ಬಾವಿ), ಇಟಗಿ ಗ್ರಾಮದ ಭೀಮಾಂಬಿಕಾ ದೇವಸ್ಥಾನ ಹಾಗೂ ಶಂಭುಲಿಂಗ ದೇವಸ್ಥಾನವನ್ನು ಗುರುತಿಸಿದೆ. ಸಾಕಾರದತ್ತ ಕೂಗು: ಈ ಸ್ಥಳಗಳನ್ನು ಪ್ರವಾಸಿ ತಾಣಗಳನ್ನಾಗಿ ಮಾರ್ಪಡಿಸಬೇಕು ಎಂಬ ಕೂಗಿತ್ತು. ಈಗ ಅದು ಕೈಗೂಡಿದೆ. ಈಗ ಬೆಟ್ಟಗಳ ಸಾಲಿನಲ್ಲಿರುವ ಹಾಗೂ ಮಳೆಗಾಲದಲ್ಲಿ ಈ ಭಾಗದಲ್ಲಿನ ಓಡಾಟ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಪಟ್ಟಣ, ೫ ಕಿಮೀ ದೂರದಲ್ಲಿನ ಕಾಲಕಾಲೇಶ್ವರ ದೇವಸ್ಥಾನ, ದೇವಸ್ಥಾನ ಹಾಗೂ ಇಟಗಿ ಗ್ರಾಮಗಳಿಗೆ ರಾಜ್ಯ ಸೇರಿ ಹೊರ ರಾಜ್ಯಗಳ ಪ್ರವಾಸಿಗರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ.

ಶಾಸಕ ಜಿ.ಎಸ್. ಪಾಟೀಲ ಅವರ ಪರಿಶ್ರಮದಿಂದ ತಾಲೂಕಿನ ಈ ಸ್ಥಾನಗಳು ಪ್ರಮುಖ ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳನ್ನಾಗಿ ಗುರುತಿಸಿದ್ದು ಸಂತಸ ತಂದಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಶಶಿಧರ ಹೂಗಾರ ಹೇಳಿದರು.

೨೦೨೦-೨೫ನೇ ಪ್ರವಾಸೋದ್ಯಮ ನೀತಿಯಲ್ಲಿ ಜಿಲ್ಲೆಯಲ್ಲಿ ೧೨ ಪ್ರವಾಸಿ ತಾಣಗಳನ್ನು ಗುರುತಿಸಲಾಗಿತ್ತು. ೨೦೨೫-೨೯ನೇ ಪ್ರವಾಸೋದ್ಯಮ ನೀತಿ ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ೪೮ ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಗಜೇಂದ್ರಗಡ ತಾಲೂಕಿನ ೬ ಹೊಸ ಪ್ರವಾಸಿ ತಾಣಗಳನ್ನು ಸ್ಥಾನ ಪಡೆದಿರುವುದು ಖುಷಿಯ ಸಂಗತಿ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೋಟ್ರೇಶ್ವರ ವಿಭೂತಿ ಹೇಳಿದರು.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ