ಕನ್ನಡಪ್ರಭ ವಾರ್ತೆ ಉಡುಪಿ
ಆಕೆಯ ರಕ್ಷಣೆಗೆ ಮಣಿಪಾಲ ಪೊಲೀಸ್ ಠಾಣೆಯ ಸಿಬ್ಬಂದಿ ದೀಪಾ ಶೆಟ್ಟಿ ಸಹಕರಿಸಿದ್ದಾರೆ. ಆಕೆಯ ಪರಿಚಯಸ್ಥರು ಇದ್ದಲ್ಲಿ ಮಣಿಪಾಲ ಠಾಣೆ ಅಥವಾ ಜಿಲ್ಲಾಸ್ಪತ್ರೆ ಸಂಪರ್ಕಿಸಬೇಕಾಗಿ ವಿಶು ಶೆಟ್ಟಿ ವಿನಂತಿಸಿದ್ದಾರೆ.ಕಾನೂನು ಪಾಲನೆಯಾಗಲಿ: ನೀತು ತನಗೆ ಒಟ್ಟು ನಾಲ್ಕು ಮಕ್ಕಳಿದ್ದಾರೆ ಎಂದಿದ್ದಾಳೆ. ಆಕೆ ಮಗುವಿನೊಂದಿಗೆ ಬೀದಿ ಪಾಲಾಗಿ ಬಹಳ ಸಮಯವಾಗಿದ್ದು, ಸ್ನಾನ ಮಾಡದೇ, ಸರಿಯಾಗಿ ಆಹಾರ ಸೇವಿಸದೇ, ಬಟ್ಟೆಗಳನ್ನು ತೊಳೆಯದ ಕಾರಣ ದುರ್ವಾಸನೆ ಬೀರುತಿದ್ದರು. ಆಕೆ ಅನೇಕ ನಗರಗಳನ್ನು ಸುತ್ತಿ ಆಕೆ ಮಣಿಪಾಲಕ್ಕೆ ಬಂದಿದ್ದಾಳೆ, ಆದರೇ ಈವರೆಗೆ ಈ ತಾಯಿ ಮಗಳ ರಕ್ಷಣೆ ಆಗದೇ ಇರುವುದು ಖೇದಕರ ಎಂದು ವಿಶು ಶೆಟ್ಟಿ ಹೇಳಿದ್ದಾರೆ. ಬಾಲಕಿಯ ಭವಿಷ್ಯದ ದೃಷ್ಟಿಯಿಂದ ಮಕ್ಕಳ ಇಲಾಖೆ ಕೂಡಲೇ ಕಾನೂನು ಪ್ರಕ್ರಿಯೆ ನಡೆಸಬೇಕು, ನಮ್ಮ ದೇಶದಲ್ಲಿ ಮಕ್ಕಳ ರಕ್ಷಣೆ ಬಗ್ಗೆ ಬಹಳ ಕಠಿಣ ಕಾನೂನು ಕ್ರಮಗಳಿವೆ. ಆದರೂ ಈವರೆಗೆ ಇಲಾಖೆ ಗಮನಿಸದಿರುವುದು ದುರದೃಷ್ಟಕರ. ಇನ್ನಾದರೂ ಬಾಲಕಿಗೆ ಒಳ್ಳೆಯ ವಾತಾವರಣ ಕಲ್ಪಿಸುವ ಜವಾಬ್ದಾರಿ ಇಲಾಖೆ ವಹಿಸಲಿ ಎಂದವರು ಆಗ್ರಹಿಸಿದ್ದಾರೆ.