ಗದಗ: ಚಿಲ್ಲರೆ ಸಮಸ್ಯೆ ಪ್ರತಿಯೊಂದು ವ್ಯಾಪಾರ ಕ್ಷೇತ್ರದಲ್ಲಿ ಸರ್ವೇ ಸಾಮಾನ್ಯ. ಇತ್ತೀಚಿನ ದಿನಮಾನಗಳಲ್ಲಿ ಈ ಚಿಲ್ಲರೆ ಸಮಸ್ಯೆ ನಿಯಂತ್ರಣಕ್ಕೆ ಆಧುನಿಕ ತಂತ್ರಜ್ಞಾನ ಸಹಕಾರಿಯಾಗಿದೆ. ಯುಪಿಐ ವ್ಯವಸ್ಥೆ ಮೂಲಕ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಅಂದಾಜು ₹50.53 ಕೋಟಿ ಸಂಗ್ರಹವಾಗಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಯುಪಿಐ (UPI) ಮೂಲಕ ಹಣ ಪಾವತಿಸಿಕೊಂಡು ಟಿಕೆಟ್ ವಿತರಿಸುತ್ತಿದೆ. 2023ರ ಸೆಪ್ಟೆಂಬರ್ 1ರಿಂದ ಪ್ರಾಯೋಗಿಕವಾಗಿ ಆರಂಭಿಸಿ ಫೆಬ್ರವರಿ 2024ರಂದು ಪೂರ್ಣ ಪ್ರಮಾಣದಲ್ಲಿ ಸಂಸ್ಥೆಯ 50 ಘಟಕಗಳಲ್ಲಿ ಯುಪಿಐ ವ್ಯವಸ್ಥೆ ಅಳವಡಿಸಲಾಗಿದೆ. 2024ರ ಅಕ್ಟೋಬರ್ 13ರ ವರೆಗೆ ಯುಪಿಐ ಮೂಲಕ ಒಟ್ಟು 55.96 ಲಕ್ಷ ವಹಿವಾಟು ನಡೆದು ₹50.53 ಕೋಟಿ ಸಂಗ್ರಹವಾಗಿದೆ. ಪ್ರಸ್ತುತ ಪ್ರತಿದಿನ ಸರಾಸರಿ 27000 ವಹಿವಾಟುಗಳಿಂದ ₹22.52 ಲಕ್ಷಗಳಷ್ಟು ಸಂಗ್ರಹವಾಗುತ್ತಿದೆ ಎಂದು ಸಾರಿಗೆ ಸಂಸ್ಥೆ ತಿಳಿಸಿದೆ.ಯುಪಿಐಗೆ ಮೆಚ್ಚುಗೆ
ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಹಾಗೂ ನಿರ್ವಾಹಕರಿಗೆ ಚಿಲ್ಲರೆ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಟಿಕೆಟ್ ದರದ ಮೇಲಿನ ಚಿಲ್ಲರೆಯನ್ನು ಪ್ರಯಾಣಿಕರಿಗೆ ಮರಳಿ ಕೊಡುವಲ್ಲಿ ಬಸ್ ಕಂಡಕ್ಟರ್ ಹರಸಾಹಸ ಪಡುಬೇಕಾಗಿತ್ತು, ಇಬ್ಬರು, ಮೂವರು ಪ್ರಯಾಣಿಕರನ್ನು ಸೇರಿಸಿ ಚಿಲ್ಲರೆ ನೀಡಿದರೆ ಕೆಲ ಬಾರಿ ಚಿಲ್ಲರೆ ಸಮಸ್ಯೆಯಿಂದ ಹೊಡೆದಾಟ-ಬಡಿದಾಟಗಳು ನಡೆದ ನಿದರ್ಶನಗಳಿವೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆ ಜಾರಿ ಮಾಡಿದ ಯುಪಿಐ ವ್ಯವಸ್ಥೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆಉತ್ತಮ ಸ್ಪಂದನೆಚಿಲ್ಲರೆ ಸಮಸ್ಯೆ ನಿವಾರಣೆಗೆ ಸಾರಿಗೆ ಸಂಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಯುಪಿಐ ವ್ಯವಸ್ಥೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತು ಈ ವರೆಗೆ ಯುಪಿಐ ವಹಿವಾಟುನಿಂದ ₹50.53 ಕೋಟಿ ಸಂಗ್ರಹವಾಗಿದೆ. ಪ್ರಸ್ತುತ ಪ್ರತಿ ದಿನ ಸರಾಸರಿ 27000 ವಹಿವಾಟುಗಳಿಂದ ₹22.52 ಲಕ್ಷಗಳಷ್ಟು ಸಂಗ್ರಹವಾಗುತ್ತಿದೆ.
ಪ್ರಿಯಾಂಗಾ ಎಂ. ವ್ಯವಸ್ಥಾಪಕ ನಿರ್ದೇಶಕರು. ವಾಯವ್ಯ ಕರ್ನಾಟಕ ಸಾರಿಗೆನಗದು ರಹಿತ ಪ್ರಯಾಣ
ಬಸ್‌ಗಳಲ್ಲಿ ಚಿಲ್ಲರೆ ಸಮಸ್ಯೆ ತಲೆನೋವಾಗಿತ್ತು, ಸಾರಿಗೆ ಸಂಸ್ಥೆಯಲ್ಲಿ ಯುಪಿಐ ಮೂಲಕ ಟಿಕೆಟ್ ದರವನ್ನು ಫೋನ್‌ಪೇ, ಗೂಗಲ್ ಪೇ ಮಾಡುವ ಮೂಲಕ ಟಿಕೆಟ್ ಪಡೆದು ನಗದು ರಹಿತ ಪ್ರಯಾಣಕ್ಕೆ ಅನುಕೂಲವಾಗಿದೆ. ಈ ಕಾರ್ಯದಿಂದ ಪ್ರಯಾಣಿಕರಿಗೆ ಅನುಕೂಲವಾಗಿದೆ. ಚಿಲ್ಲರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಂತಾಗಿದೆ.ಫಕ್ಕಿರೇಶ ಕತ್ತಿ, ಪ್ರಯಾಣಿಕ