ಮಂಡ್ಯ ಕ್ಷೇತ್ರಕ್ಕೆ ೫೦ ಕೋಟಿ ರು. ಬಿಡುಗಡೆ: ಶಾಸಕ ಪಿ.ರವಿಕುಮಾರ್

KannadaprabhaNewsNetwork |  
Published : Sep 16, 2025, 12:03 AM IST
೧೫ಕೆಎಂಎನ್‌ಡಿ-೨ಮಂಡ್ಯ ನಗರಸಭೆ ಕಚೇರಿಯಲ್ಲಿರುವ ಶಾಸಕರ ಕೊಠಡಿಯಲ್ಲಿ ಪಿ.ರವಿಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಉದ್ದೇಶಿತ ಕನ್ನಡ ಭವನ ನಿರ್ಮಾಣ ಜಾಗದಿಂದ ಬ್ಯಾಸ್ಕೆಟ್‌ ಬಾಲ್ ಕ್ರೀಡೆಗೆ ತೊಂದರೆಯಾಗುವ ವಿಷಯ ನನಗೆ ತಿಳಿದಿಲ್ಲ. ಚಿಕ್ಕಮಂಡ್ಯ ಬಳಿ ಕನ್ನಡ ಭವನ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ನಗರದಿಂದ ದೂರವಿರುವ ಕಾರಣ ಅಲ್ಲಿಗೆ ಯಾರೂ ಹೋಗುವುದಿಲ್ಲವೆಂದು ನಗರದೊಳಗೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ೫೦ ಕೋಟಿ ರು. ಹಣ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ನಗರಸಭೆಯ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ಜಯಚಾಮಚರಾಜೇಂದ್ರ ಒಡೆಯರ್ ವೃತ್ತದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ೨ ಕೋಟಿ ರು., ಪ್ರಮುಖ ವೃತ್ತಗಳ ಅಭಿವೃದ್ಧಿ, ಕನ್ನಡಭವನ ನಿರ್ಮಾಣಕ್ಕೆ ೧ ಕೋಟಿ ರು. ಮುಖ್ಯ ರಸ್ತೆಗಳ ಫುಟ್‌ಪಾತ್ ಅಭಿವೃದ್ಧಿ, ನಗರ ಸೌಂದರ್ಯೀಕರಣ, ತಾಪಂ ಕಟ್ಟಡ ಕಾಮಗಾರಿಗೆ ೨.೫೦ ಕೋಟಿ ರು., ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣಕ್ಕೆ ೨ ಕೋಟಿ ರು., ಕೆರಗೋಡು ಶ್ರೀ ಪಂಚಲಿಂಗೇಶ್ವರಸ್ವಾಮಿ ದೇಗಲ ಅಭಿವೃದ್ಧಿಗೆ ೧ ಕೋಟಿ ರು. ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡಿರುವುದಾಗಿ ತಿಳಿಸಿದರು.

ಉದ್ದೇಶಿತ ಕನ್ನಡ ಭವನ ನಿರ್ಮಾಣ ಜಾಗದಿಂದ ಬ್ಯಾಸ್ಕೆಟ್‌ ಬಾಲ್ ಕ್ರೀಡೆಗೆ ತೊಂದರೆಯಾಗುವ ವಿಷಯ ನನಗೆ ತಿಳಿದಿಲ್ಲ. ಚಿಕ್ಕಮಂಡ್ಯ ಬಳಿ ಕನ್ನಡ ಭವನ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ನಗರದಿಂದ ದೂರವಿರುವ ಕಾರಣ ಅಲ್ಲಿಗೆ ಯಾರೂ ಹೋಗುವುದಿಲ್ಲವೆಂದು ನಗರದೊಳಗೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದರು.

ಮಂಡ್ಯ ನಗರದ ಬನ್ನೂರು ರಸ್ತೆ ಅಭಿವೃದ್ಧಿಗೆ ೬.೪೦ ಕೋಟಿ ರು. ಡಲ್ಫ್ ವತಿಯಿಂದ ಯೋಜನೆ ಮಂಜೂರಾಗಿದೆ. ಫುಟ್‌ಪಾತ್ ನಿರ್ಮಾಣ ಹಾಗೂ ಸೈಕಲ್‌ ಪಾಥ್, ವಿದ್ಯುತ್ ದೀಪಗಳ ಅಳವಡಿಕೆಗೆ ಕ್ರಮ ವಹಿಸಲಾಗುವುದು. ೨ ಕೋಟಿ ರು. ವೆಚ್ಚದಲ್ಲಿ ಎಪಿಎಂಸಿ ರಸ್ತೆ ಅಭಿವೃದ್ಧಿ ಪೌರಾಡಳಿತ ಇಲಾಖೆಯಿಂದ ೧೦ ಕೋಟಿ ರು. ವೆಚ್ಚದಲ್ಲಿ ನಗರವ್ಯಾಪ್ತಿಯ ಮೂಲ ಸೌಕರ್ಯಗಳ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ ಎಂದರು.

ಅದಕ್ಕಾಗಿ ಜಿಲ್ಲಾಧಿಕಾರಿಗಳು ಒಳಾಂಗಣ ಕ್ರೀಡಾಂಗಣದ ಪಕ್ಕದ ಜಾಗವನ್ನು ತೋರಿಸಿದ್ದರಿಂದ ಅದನ್ನು ಅಂತಿಮಗೊಳಿಸಿದ್ದರು. ಕನ್ನಡ ಭವನದಿಂದ ಬ್ಯಾಸ್ಕೆಟ್ ಬಾಲ್ ಕ್ರೀಡೆಗೆ ತೊಂದರೆಯಾಗುವುದರಿಂದ ಬೇರೆ ಜಾಗವನ್ನು ಹುಡುಕುವ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದರು.

ಬಿಜೆಪಿಯವರಿಗೆ ಅರಿಶಿನ-ಕುಂಕುಮವೇ ಮುಖ್ಯವಾಗಿದೆ. ಗಲಾಟೆ ನಡೆದಾಗ ಶಾಂತಿ ಬಯಸುವುದಕ್ಕಿಂದಲೂ ಪ್ರಚೋದನೆ ನೀಡುವುದು ಅವರ ಕೆಲಸ. ಧರ್ಮದ ವಿಚಾರದಲ್ಲಿ ಅಡ್ಡಿಪಡಿಸುವುದೇ ಬಿಜೆಪಿಯ ಧರ್ಮವಾಗಿದೆ ಎಂದು ಕುಟುಕಿದರು.

ಬಾನು ಮುಷ್ತಾಕ್ ದಸರಾ ಉದ್ಘಾಟನೆಯನ್ನು ಪ್ರಶ್ನಿಸಿ ಪ್ರತಾಪ್‌ಸಿಂಹ ಹೈಕೋರ್ಟ್‌ಗೆ ಸಲ್ಲಿಸಿದ್ದ ಅಜಿಯನ್ನು ವಜಾಗೊಳಿಸಿರುವುದು ಪ್ರಜಾಪ್ರಭುತ್ವಕ್ಕೆ ಸಂದ ಜಯ. ಈ ಸಮಾಜದಲ್ಲಿರುವವರೆಲ್ಲರೂ ಸಮಾನರು. ದಸರಾ ಉದ್ಘಾಟನೆಯನ್ನು ಹೃದಯವೈಶಾಲ್ಯದಿಂದ ನೋಡುವ ಮನೋಭಾವವನ್ನು ಬಿಜೆಪಿಯವರು ಬೆಳೆಸಿಕೊಳ್ಳಬೇಕು. ನ್ಯಾಯಾಲಯ ಕೂಡ ಇತರರಿಗೆ ಅನ್ಯಾಯವಾಗದಂತೆ ನ್ಯಾಯಯುತವಾಗಿ ತೀರ್ಪು ನೀಡಿದೆ ಎಂದರು.

ಮಂಡ್ಯ ನಗರದ ಸುತ್ತಮುತ್ತಲಿನ ಪಂಚಾಯ್ತಿಗಳನ್ನು ನಗರಸಭೆಗೆ ಸೇರಿಸಿಕೊಂಡು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಬೇಕಿದೆ. ಪಂಚಾಯ್ತಿಗಳನ್ನು ಸೇರಿಸಿಕೊಳ್ಳುವ ಸಂಬಂಧ ಸರ್ಕಾರದ ಹಂತದಲ್ಲಿ ಮಾತುಕತೆ ನಡೆಯುತ್ತಿರುವುದಾಗಿ ಹೇಳಿದರು.

ಮುಡಾ ಅಧ್ಯಕ್ಷ ನಹೀಂ, ಸದಸ್ಯ ಶ್ರೀಧರ್ ಹಾಜರಿದ್ದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ