ಸಾಮಾಜಿಕ ಲೆಕ್ಕ ಪರಿಶೋಧನ ಸಭೆಯಲ್ಲಿ ಮಾಹಿತಿ । ಒಟ್ಟು 53.54 ಲಕ್ಷ ಕಾಮಗಾರಿ ಪೂರ್ಣ
ಸಭೆ ಅಧ್ಯಕ್ಷತೆ ವಹಿಸಿದ್ದ ಗ್ರಾಮದ ಹಿರಿಯ ಓಬಳಪ್ಪ ಮಾತನಾಡಿ, ಸರ್ಕಾರ ಗ್ರಾಮೀಣ ಜನ ಮತ್ತು ರೈತರ ಏಳಿಗೆಗಾಗಿ ಗ್ರಾಪಂ ಮೂಲಕ ಹಲವಾರು ಯೋಜನೆ ನೀಡಿದ್ದು, ಅವುಗಳನ್ನು ಜನ ಸಮರ್ಪಕವಾಗಿ ಬಳಸಿ ಆರ್ಥಿಕವಾಗಿ ಸಧೃಡರಾಗಬೇಕು. ಜೊತೆಗೆ ಯೋಜನೆಗಳ ಅರಿವಿರದವರನ್ನು ಗ್ರಾಪಂಗೆ ಕರೆ ತಂದು ಅರಿವು ಮೂಡಿಸಿ ಅವಕಾಶ ದೊರಕಿಸಿದಾಗ ಮಾತ್ರ ಮಹಾತ್ಮ ಗಾಂಧೀಜಿ ಆಶಯಗಳಿಗೆ ಬೆಲೆ ಸಿಕ್ಕಂತಾಗುತ್ತದೆ ಎಂದರು.ಗ್ರಾಪಂ ಅಧ್ಯಕ್ಷ ಬ್ಯಾಗಡೇಹಳ್ಳಿ ರುದ್ರಪ್ಪ ಮಾತನಾಡಿ, ಗ್ರಾಮಸ್ಥರು ಪಂಚಾಯ್ತಿಗೆ ಬಾಕಿಇರುವ ತೆರಿಗೆ ಪಾವತಿಸಿದರೆ ನಿಮ್ಮ ಗ್ರಾಮಗಳ ಅಭಿವೃದ್ಧಿ ಪಡಿಸಲು ಸಾಧ್ಯ. ಎಲ್ಲದಕ್ಕೂ ಸರ್ಕಾರ ಮತ್ತು ಕರ್ತವ್ಯ ನಿರ್ವಹಿಸುವ ಅಧಿಕಾರಿಗಳನ್ನು ದೂರಬಾರದು. ಅಭಿವೃದ್ಧಿ ಕಾರ್ಯಕ್ಕೆ ಸದಸ್ಯರ ಜೊತೆ ಎಲ್ಲರು ಕೈಜೋಡಿಸಬೇಕು ಎಂದರು.ಗ್ರಾ.ಪಂ ಉಪಾಧ್ಯಕ್ಷ ಹುಲ್ಲೇಹಳ್ಳಿ ಲಕ್ಷ್ಮಣ್ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಲು ಸಂಕಲ್ಪಿಸಿದ್ದೇವೆ. ನಾವೆಲ್ಲರು ಮಹಿಳೆ ಯರಿಗೆ, ಎಸ್ಸಿ, ಎಸ್ಟಿ, ವಿಶೇಷವಾಗಿ ವಿಕಲಚೇತನರು ಮತ್ತು ವಯೋವೃದ್ದರಿಗೆ ಸಾಮಾಜಿಕ ನ್ಯಾಯ ಒದಗಿಸಲು ಬದ್ದ. ಈ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸುವ ಮೂಲಕ ಲಭ್ಯ ಸಂಪನ್ಮೂಲ ಒಗ್ಗೂಡಿಸಿ, ಎಲ್ಲರ ಅಭಿಪ್ರಾಯ ಆಲಿಸಿ ಪಂಚಾಯ್ತಿ ಸಮಗ್ರ ಯೋಜನೆ ತಯಾರಿಸಲು ಧೃಡವಾಗಿ ನಿರ್ಧರಿಸಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರದ ವಿಶೇಷ ಯೋಜನೆಗಳಡಿ ಉತ್ತಮ ಕಾರ್ಯಕ್ರಮ ನೀಡಲು ಶ್ರಮವಹಿಸ ಲಾಗುವುದು ಎಂದರು.ತಾಲೂಕು ತೋಟಗಾರಿಕೆ ಇಲಾಖೆ ಕಾರ್ತಿಕ್, ಕೃಷಿ ಇಲಾಖೆ ಲತಾ ರೈತರಿಗೆ ಇಲಾಖೆ ಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು. ಗ್ರಾಪಂ ಸದಸ್ಯರಾದ ನರಸಿಂಹ ಮೂರ್ತಿ, ಮೂರ್ತಿ, ಸ್ನೇಹ ಸುರೇಶ್, ಸೌಭಾಗ್ಯ ಮುದಿಯಪ್ಪ, ಧನಲಕ್ಷ್ಮಿ ಗೋಪಾಲ್, ನಾಗಮ್ಮ ಮಲ್ಲಾ ಭೋವಿ, ಶಾಂತಕುಮಾರ್, ಪಿಡಿಒ ಮಂಜುನಾಥ್, ಸಂತೋಷ್, ಮಂಜುನಾಥ್, ಕುಮಾರ್, ಮಹೇಶ್ ರಾಜಾಭೋವಿ ಸೇರಿದಂತೆ ಗ್ರಾಮಸ್ಥರು ಇದ್ದರು.
20ಬೀರೂರು1 ಬೀರೂರು ಹೋಬಳಿ ಹುಲ್ಲೇಹಳ್ಳಿಯಲ್ಲಿ ಮಂಗಳವಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೊದಲನೆ ಸುತ್ತಿನ ಸಾಮಾಜಿಕ ಲೆಕ್ಕಪರಿಶೋದನೆ ಗ್ರಾಮ ಸಭೆ ನಡೆಯಿತು. ಗ್ರಾಪಂ ಅಧ್ಯಕ್ಷ ರುದ್ರಪ್ಪ, ಉಪಾಧ್ಯಕ್ಷ ಲಕ್ಷ್ಮಣ್, ಪಿಡಿಒ ಮಂಜುನಾಥ್ ಇದ್ದರು.