ಸಿಕ್ಯಾಬ ಸಂಸ್ಥೆ ಮೆಡಿಕಲ್ ಕಾಲೇಜಿಗೆ 5 ರ್‍ಯಾಂಕ್‌

KannadaprabhaNewsNetwork |  
Published : Jun 13, 2026, 02:45 AM IST
ರ್ಯಾಂಕ್ ಪಡೆದ ವಿದ್ಯಾರ್ಥಿಗಳು | Kannada Prabha

ಸಾರಾಂಶ

ವಿಜಯಪುರ: ಕಳೆದ ತಿಂಗಳು ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ ಯುನಾನಿ ಸ್ನಾತಕೋತ್ತರ ಕೋರ್ಸಿನ ಅಂತಿಮ ವರ್ಷದ ಫಲಿತಾಂಶದಲ್ಲಿ ವಿಜಯಪುರದ ಸಿಕ್ಯಾಬ ಸಂಸ್ಥೆಯ ಲುಕ್ಮಾನ್ ಯುನಾನಿ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಸಂಶೋಧನಾ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು 5 ರ್‍ಯಾಂಕ್‌ ಪಡೆದು ಕಾಲೇಜಿನ ಮತ್ತು ವಿಶ್ವವಿದ್ಯಾಲಯದ ಘನತೆ ಹೆಚ್ಚಿಸಿದ್ದಾರೆ

ವಿಜಯಪುರ: ಕಳೆದ ತಿಂಗಳು ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ ಯುನಾನಿ ಸ್ನಾತಕೋತ್ತರ ಕೋರ್ಸಿನ ಅಂತಿಮ ವರ್ಷದ ಫಲಿತಾಂಶ ಪ್ರಕಟಗೊಂಡಿದ್ದು, ವಿಜಯಪುರದ ಸಿಕ್ಯಾಬ ಸಂಸ್ಥೆಯ ಲುಕ್ಮಾನ್ ಯುನಾನಿ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಸಂಶೋಧನಾ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು 5 ರ್‍ಯಾಂಕ್‌ ತಮ್ಮದಾಗಿಸಿಕೊಂಡು ಕಾಲೇಜಿನ ಮತ್ತು ವಿಶ್ವವಿದ್ಯಾಲಯದ ಘನತೆ ಹೆಚ್ಚಿಸಿದ್ದಾರೆ.

ಮೆಡಿಸಿನ್ ವಿಭಾಗದ ರ್‍ಯಾಂಕ್‌ಗಳು :

ಡಾ.ಮಹಮ್ಮದ್ ಸಂಜೀತ್ (71.92%) - ವಿ.ವಿ.ಗೆ ಪ್ರಥಮ ರ್‍ಯಾಂಕ್‌, ಡಾ.ಮೊಹಮ್ಮದಿ ಬೇಗಮ್. ಕೆ (71.75%) ವಿ.ವಿ.ಗೆ 2ನೆಯ ರ್‍ಯಾಂಕ್‌, ಡಾ.ಶಿಬಾ ಫಾತೀಮಾ(69.25%)- ವಿವಿಗೆ 5ನೆಯ ರ್‍ಯಾಂಕ್‌,

ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ರ್ಯಾಂಕುಗಳು : ಡಾ.ಶೇಖ ಸಬನಾಜ ನಾಸೀರ್ ಅಹ್ಮದ್ (69.18%) ವಿವಿಗೆ 5ನೆಯ ರ್‍ಯಾಂಕ್‌, ಡಾ.ಶಫಾ ಆರಾ ಅಂಜುಮ್ .ಎ (67.64%) ವಿವಿಗೆ 6ನೆಯ ರ್‍ಯಾಂಕ್‌ ಪಡೆದಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಿಕ್ಯಾಬ ಸಂಸ್ಥೆಯ ಅಧ್ಯಕ್ಷ ಎಸ್. ಎಸ್. ಪುಣೆಕರ್, ಪ್ರಧಾನ ಕಾರ್ಯದರ್ಶಿ ಎ.ಎಸ್. ಪಾಟೀಲ, ಪ್ರಾಚಾರ್ಯೆ ಡಾ.ಶಹನಾಜ್ ಬಾನು, ಡೀನ್ ಡಾ.ಅಕೀಲ್ ಖಾದ್ರಿ ಮತ್ತು ಸಮಸ್ತ ಬೋಧಕ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಾಠ ಸಮುದಾಯದ ಒಬ್ಬರಿಗೆ ಸಚಿವ ಸ್ಥಾನ ನಿಶ್ಚಿತ: ಸಚಿವ ಎಂ.ಬಿ. ಪಾಟೀಲ
ಕೆಪಿಟಿಸಿಎಲ್ ಖಾಸಗೀಕರಣ ಹೆಸ್ಕಾಂ ಸಿಬ್ಬಂದಿ ವಿರೋಧ