ಬಸವನಾಡಿನ ಯುವಕನಿಗೆ 6 ಚಿನ್ನದ ಪದಕ

KannadaprabhaNewsNetwork | Published : Dec 22, 2024 1:31 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಈ ಬಾರಿ ಸಾಧನೆಗೈದ 7 ಜನರಿಗೆ 18 ಚಿನ್ನದ ಪದಕ ಪ್ರದಾನ ಮಾಡಲಾಯಿತು. ಉಳಿದಂತೆ ಪಿಹೆಚ್‌ಡಿಯಲ್ಲಿ 5, ಎಂಸಿಹೆಚ್ ನಲ್ಲಿ 1, ಎಫ್‌ಪಿಡಿ ನಲ್ಲಿ 2, ಎಫ್‌ಯುಜಿವೈನಲ್ಲಿ 1, ಪಿಜಿನಲ್ಲಿ 16, ಎಂಎಸ್‌ಸಿ ಮೆಡಿಕಲ್ ಕೋರ್ಸ್‌ನಲ್ಲಿ 6, ಮಾಸ್ಟರ್ ಆಫ್ ಹಾಸ್ಪಿಟಲ್ ಅಡ್ಮಿನಿಷ್ಟ್ರೇಷನ್ ನಲ್ಲಿ 2, ಎಂಬಿಬಿಎಸ್‌ನಲ್ಲಿ 165, ಹಾಗೂ ಯುಜಿನಲ್ಲಿ ಇಬ್ಬರಿಗೆ ಪದವಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ: ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಈ ಬಾರಿ ಸಾಧನೆಗೈದ 7 ಜನರಿಗೆ 18 ಚಿನ್ನದ ಪದಕ ಪ್ರದಾನ ಮಾಡಲಾಯಿತು. ಉಳಿದಂತೆ ಪಿಹೆಚ್‌ಡಿಯಲ್ಲಿ 5, ಎಂಸಿಹೆಚ್ ನಲ್ಲಿ 1, ಎಫ್‌ಪಿಡಿ ನಲ್ಲಿ 2, ಎಫ್‌ಯುಜಿವೈನಲ್ಲಿ 1, ಪಿಜಿನಲ್ಲಿ 16, ಎಂಎಸ್‌ಸಿ ಮೆಡಿಕಲ್ ಕೋರ್ಸ್‌ನಲ್ಲಿ 6, ಮಾಸ್ಟರ್ ಆಫ್ ಹಾಸ್ಪಿಟಲ್ ಅಡ್ಮಿನಿಷ್ಟ್ರೇಷನ್ ನಲ್ಲಿ 2, ಎಂಬಿಬಿಎಸ್‌ನಲ್ಲಿ 165, ಹಾಗೂ ಯುಜಿನಲ್ಲಿ ಇಬ್ಬರಿಗೆ ಪದವಿ ಪ್ರದಾನ ಮಾಡಲಾಯಿತು. ಆರು ಚಿನ್ನದ ಪದಕ ಪಡೆದ ಬಸವನಾಡಿನ ಯುವಕ, ಐದು ಚಿನ್ನದ ಪದಕ ಮತ್ತು ಎರಡು ನಗದು ಪುರಸ್ಕಾರ ಪಡೆದ ದೆಹಲಿಯ ವೈದ್ಯ ದಂಪತಿಯ ಪುತ್ರಿ.

ಘಟಿಕೋತ್ಸವದಲ್ಲಿ ಇಬ್ಬರು ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ನಗರದ ಉದ್ಯಮಿ ಪುತ್ರ ಶುಭಂ ಹಿಮಾಂಶು ಶಹಾ ಆರು ಚಿನ್ನದ ಪದಕ ಪಡೆದರೆ, ಇಶಾ ಶೈಲೇಂದ್ರ ದೀಕ್ಷಿತ ಐದು ಚಿನ್ನದ ಪದಕ ಮತ್ತು ಎರಡು ನಗದು ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ.ಶುಭಂ ಹಿಮಾಂಶು ಶಹಾ ಸಂತಸ ವ್ಯಕ್ತಪಡಿಸಿದ್ದಾರೆ. ಎಂಬಿಬಿಎಸ್ ಗಾಗಿ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಸೇರಿದೆ. ಆರಂಭದಲ್ಲಿ ಸಾಧನೆ ಮಾಡಬಹುದು ಎಂದುಕೊಂಡಿದ್ದೆ. ಆದರೆ, ಚಿನ್ನದ ಪದಕ ನಿರೀಕ್ಷಿಸಿರಲಿಲ್ಲ. ನನ್ನ ಈ ಸಾಧನೆಗೆ ತಂದೆ ಹಿಮಾಂಶು ಮತ್ತು ತಾಯಿ ದೀಪಾ ಬೆನ್ನೆಲುಬಾಗಿ ನಿಂತಿದ್ದಾರೆ. ಎಲ್ಲ ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಸಂಪೂರ್ಣ ಸಹಕಾರ ನೀಡಿದ್ದಾರೆ. ಮುಂದೆ ಬೆಳಗಾವಿಯಲ್ಲಿ ರೇಡಿಯಾಲಜಿ ವಿಭಾಗದಲ್ಲಿ ಎಂ.ಡಿ ಮಾಡುವ ಗುರಿ ಹೊಂದಿದ್ದಾಗಿ ತಿಳಿಸಿದರು.ಇಶಾ ದೀಕ್ಷಿತ ಮಾತನಾಡಿ, ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ ಆರು ತಿಂಗಳ ನಂತರ ಈಗ ಪದವಿ ಪಡೆಯಲು ಬಂದಿದ್ದೇನೆ. ತಂದೆ ಡಾ.ಶೈಲೇಂದ್ರ ದೀಕ್ಷಿತ ಫಿಜಿಶಿಯನ್ ಆಗಿದ್ದು, ತಾಯಿ ಡಾ.ಪ್ರೀತಿ ಶರ್ಮಾ ಜನರಲ್ ಪ್ರ್ಯಾಕ್ಟಿಶನರ್ ಆಗಿದ್ದಾರೆ. ನಾನು ಮುಂದೆ ರೇಡಿಯಾಲಜಿ ವಿಭಾಗದಲ್ಲಿ ಎಂ.ಡಿ. ಓದುವ ಆಸೆ ಇದೆ. ಈ ಪದಕ ಮತ್ತು ಪ್ರಶಸ್ತಿ ನಿರೀಕ್ಷಿಸಿಲಿಲ್ಲ. ಕಷ್ಟಪಟ್ಟು ಓದಿದರೆ ಉತ್ತಮ ಸಾಧನೆ ಮಾಡಬಹುದು ಎಂದುಕೊಂಡಿದ್ದೆ. ಅದು ಫಲ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

Share this article