ಕನ್ನಡದಲ್ಲಿ 125 ಅಂಕ ಪಡೆದ ಎಸ್‌ವಿಕೆ ಶಾಲೆ 6 ಮಕ್ಕಳು

KannadaprabhaNewsNetwork | Published : May 16, 2025 1:59 AM
ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಸಂತಕುಮಾರಿ ಸರ್ಕಾರಿ ಬಾಲಿಕಾ ಪ್ರೌಢಶಾಲೆಯ 6 ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕಗಳಿಸಿ ಸಾಧನೆಗೈದಿದ್ದು 35ಕ್ಕೂ ಅಧಿಕ ಮಕ್ಕಳು ನೂರಕ್ಕಿಂತ ಅಧಿಕ ಅಂಕಗಳಿಸಿ ಅಮೋಘ ಸಾಧನೆಗೈಯುವ ಮೂಲಕ ಗಮನ ಸೆಳೆದಿದ್ದಾರೆ.
Follow Us

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಸಂತಕುಮಾರಿ ಸರ್ಕಾರಿ ಬಾಲಿಕಾ ಪ್ರೌಢಶಾಲೆಯ 6 ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕಗಳಿಸಿ ಸಾಧನೆಗೈದಿದ್ದು 35ಕ್ಕೂ ಅಧಿಕ ಮಕ್ಕಳು ನೂರಕ್ಕಿಂತ ಅಧಿಕ ಅಂಕಗಳಿಸಿ ಅಮೋಘ ಸಾಧನೆಗೈಯುವ ಮೂಲಕ ಗಮನ ಸೆಳೆದಿದ್ದಾರೆ. ವಸಂತಕುಮಾರಿ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸುಕನ್ಯಾನಾಯಕ್, ಲಿಖಿತ, ವಂದನಾ, ಎಸ್.ಅಶ್ವಿನಿ, ರಮ್ಯಶ್ರೀ , ಅಶ್ವಿನಿ ಎಂ 125ಕ್ಕೆ 125 ಅಂಕಗಳಿಸಿದ ವಿದ್ಯಾರ್ಥಿಗಳು. ಎಂ ಲಲಿತ (123), ರಂಜಿತಾ, ನಿಶಾ, ತೇಜಸ್ವಿನಿ, ಪೂಜಾ, ಕಾವ್ಯ, ಸಹನಾ ಎಂಬ ವಿದ್ಯಾರ್ಥಿಗಳು ಕ್ರಮವಾಗಿ 121 ಅಂಕಗಳಿಸಿ ಸಾಧನೆಗೈದಿದ್ದಾರೆ. ಉಳಿದಂತೆ ವಿದ್ಯಾ (119), ಗೌರಮ್ಮ (117), ಅರ್ಚನ, ಪೂಜಾ ಕ್ರಮವಾಗಿ ( (116 ಅಂಕಗಳು), ಚೈತ್ರ ವಡಗೆರೆ, ತನು, ಅಮೃತ , ಶ್ರೇಯಾ, ಕ್ರಮವಾಗಿ (115 ಅಂಕಗಳು), ಅನು ಮತ್ತು ರಮ್ಯ (114), ರಶ್ಮಿ, ತನು ( 112), ದಿವ್ಯಾ (109), ಅರ್ಷಿತ, ಶ್ರೀರಕ್ಷಾ (108 ಅಂಕ), ವರಲಕ್ಷ್ಮಿ, ನಂದಿನಿ, ಶ್ರೀಲಕ್ಷ್ಮಿ (105 ಅಂಕಗಳು), ರೇಖಾ ಮತ್ತು ಸ್ಪೂರ್ತಿಗೆ ಕ್ರಮವಾಗಿ (104), ಮನು (102), ಇಂಚರ (100) ಅಂಕಗಳಿಸಿದ್ದಾರೆ.

ಕನ್ನಡದಲ್ಲಿ ಹೆಚ್ಚು ಅಂಕಗಳಿಸಿ ಸಾಧನೆ ಮಾಡಲು ಕನ್ನಡ ಭಾಷಾ ಶಿಕ್ಷಕರಾದ ದೊರೆಸ್ವಾಮಿ ಮತ್ತು ಭಾನು ರೇಖಾ ಅವರು ಆಗಿಂದಾಗ್ಗೆ ವಿಶೇಷ ತರಗತಿ ನಡೆಸಿ ವಿದ್ಯಾರ್ಥಿಗಳಲ್ಲಿ ಹೆಚ್ಚು ಆಸಕ್ತಿ ಮೂಡಿಸಿ ಪಾಠ, ಪ್ರವಚನಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದದ್ದು ಪ್ರಮುಖ ಕಾರಣ ಎನ್ನಲಾಗಿದೆ.

ರಮ್ಯಶ್ರೀ ಉನ್ನತ ದರ್ಜೆಯಲ್ಲಿ ತೇರ್ಗಡೆ:

ವಸಂತಕುಮಾರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರಮ್ಯಶ್ರೀ ಎಂಬ ವಿದ್ಯಾರ್ಥಿನಿ 625 ಅಂಕಗಳಿಗೆ 609 ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಉಳಿದಂತೆ ಕಾವ್ಯ (595), ಸುಕನ್ಯಾನಾಯಕ್ (583), ಎಂ ಅಶ್ವಿನಿ (571), ಗೌರಮ್ಮ (562), ನಿಶಾ ( 550), ಅಮೃತ (540), ಪೂಜಾ (540), ವಂದನಾ ( 535), ಸಹನಾ (530), ರಮ್ಯ (524), ವಿದ್ಯಾ (522), ರಂಜಿತಾ (517), ಚೈತ್ರ ವಡಗೆರೆ (509), ಲಲಿತ (501) ಅಂಕಗಳಿಸಿ ಉತ್ತಮ ಸಾಧನೆ ಮಾಡಿದ್ದು ಸಾಧಕ ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳ, ಉಪ ಪ್ರಾಂಶುಪಾಲ ವಿಶ್ವನಾಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.