ಉತ್ತರ ಕನ್ನಡದಲ್ಲಿ 2023ರಲ್ಲಿ 676 ಆತ್ಮಹತ್ಯೆ

KannadaprabhaNewsNetwork | Published : Dec 31, 2023 1:30 AM

ಸಾರಾಂಶ

ಅನಿಸಿದ್ದು ಕೈಗೂಡದಿದ್ದಾಗ, ಬೇಡವಾದದ್ದು ಒಕ್ಕರಿಸಿಕೊಂಡಾಗ ಜೀವನವೇ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಪ್ರೇರಣೆಯಾಗಿದೆ. ತಾಳಿದರೆ ಬಾಳಬಹುದಿತ್ತು. ಆದರೆ, ತಾಳುವ ತಾಳ್ಮೆ ಕಳೆದುಕೊಂಡವರು ಇಹಲೋಕ ತ್ಯಜಿಸಿದ್ದಾರೆ.

ಶಿರಸಿ:

ಕಳೆದು ಹೋಗುತ್ತಿರುವ ೨೦೨೩, ಹದಿಹರೆಯದವರನ್ನೇ ಹೆಚ್ಚಾಗಿ ತನ್ನೊಂದಿಗೆ ಕೊಂಡೊಯ್ದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರ್ಷ ದಾಖಲೆಯ ಪ್ರಮಾಣದಲ್ಲಿ ಆತ್ಮಹತ್ಯೆ ಪ್ರಕರಣಗಳು ನಡೆದಿದ್ದು, ಒಟ್ಟೂ ೬೭೬ ಜನ ಸ್ವ-ಇಚ್ಛೆಯಿಂದ ಇಹಲೋಕ ತ್ಯಜಿಸಿದ್ದಾರೆ.ಹೌದು! ಹುಟ್ಟು-ಸಾವು ಎಂದೂ ಬಲ್ಲವರಿಲ್ಲ. ಆದರೆ, ಆತ್ಮಹತ್ಯೆ ಪ್ರಕರಣಗಳು ಇದಕ್ಕೆ ವಿಭಿನ್ನ. ಅನಿಸಿದ್ದು ಕೈಗೂಡದಿದ್ದಾಗ, ಬೇಡವಾದದ್ದು ಒಕ್ಕರಿಸಿಕೊಂಡಾಗ ಜೀವನವೇ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಪ್ರೇರಣೆಯಾಗಿದೆ. ತಾಳಿದರೆ ಬಾಳಬಹುದಿತ್ತು. ಆದರೆ, ತಾಳುವ ತಾಳ್ಮೆ ಕಳೆದುಕೊಂಡವರು ಇಹಲೋಕ ತ್ಯಜಿಸಿದ್ದಾರೆ. ಹದಿ ಹರೆಯದಲ್ಲೇ ಲವ್ ಬಲೆಗೆ ಬಿದ್ದು ನಿರಾಶರಾದವರು, ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬಂದಿಲ್ಲ ಎಂದು ಕ್ಷಣಾರ್ಧದಲ್ಲಿ ಆವೇಶಕ್ಕೆ, ಜಿಗುಪ್ಸೆಯ ಕೈಗೆ ಬುದ್ಧಿ ಕೊಟ್ಟು ಆತ್ಮಹತ್ಯೆ ಮಾಡಿಕೊಂಡವರು ಅಧಿಕವಾಗಿದೆ. ಇನ್ನೊಂದೆಡೆ ಗಂಡ-ಹೆಂಡತಿಯ ಜಗಳ ಆತ್ಮಹತ್ಯೆಯಲ್ಲಿ ಅಂತ್ಯವಾದ ಘಟನೆಗಳೂ ಜಿಲ್ಲೆಯಲ್ಲಿ ಜಾಸ್ತಿ ನಡೆದಿವೆ.ಇನ್ನೊಂದೆಡೆ ಮಾಡಿದ ಸಾಲ ಜಾಸ್ತಿಯಾಗಿ, ಸಾಲ ಕೊಟ್ಟ ಸಂಸ್ಥೆಯ ಸಿಬ್ಬಂದಿ ಮನೆ ಬಾಗಿಲಿಗೆ ಬಂದಿದ್ದರಿಂದ ಕಂಗಾಲಾದ ರೈತ ಆತ್ಮಹತ್ಯೆಯೂ ನಡೆದಿದೆ. ಕೇವಲ ಸಾವಿರಾರು ರೂಪಾಯಿಗಳ ಸಾಲವೇ ಮರ್ಯಾದಿಗೆ ಅಂಜಿಸಿ ಆತ್ಮಹತ್ಯೆಯೆಡೆಗೆ ಸಾಗುವಂತೆ ಮಾಡಿದೆ.ಎಲ್ಲೆಲ್ಲಿ ಎಷ್ಟೆಷ್ಟು ಆತ್ಮಹತ್ಯೆ?

ಆತ್ಮಹತ್ಯೆಯ ಕೆಲ ಪ್ರಕರಣಗಳಲ್ಲಿ ಅನಾರೋಗ್ಯಕ್ಕೆ ಒಳಗಾದವರು ಈ ಘಟನೆ ಮಾಡಿಕೊಂಡವರಿದ್ದಾರೆ. ಗಂಭೀರ ಸ್ವರೂಪದ ಕಾಯಿಲೆಗೆ ಒಳಗಾಗಿ ಹೊರ ಬರಲಾರದೇ, ಇನ್ನೊಂದೆಡೆ ನೋವು ತಾಳಲಾರದೇ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಾಸ್ತವವಾಗಿ ಪೊಲೀಸ್ ದಾಖಲೆ ಪ್ರಕಾರ ೬೭೬ ಜನ ಆತ್ಮಹತ್ಯೆ ಮಾಡಿಕೊಂಡಿದ್ದರೂ ಸತ್ತವರ ಸಂಖ್ಯೆ ಜಾಸ್ತಿ ಇದೆ. ಏಕೆಂದರೆ ನೀರಿನಲ್ಲಿ ಮುಳುಗಿ ಸತ್ತ ಪ್ರಕರಣಗಳನ್ನೂ ಪೊಲೀಸ್ ಇಲಾಖೆ ಆತ್ಮಹತ್ಯೆ ಎಂದೇ ಪರಿಗಣಿಸುತ್ತದೆ. ಒಂದು ಘಟನೆಯಲ್ಲಿ ಒಬ್ಬರಿಗಿಂತ ಜಾಸ್ತಿ ಜನ ಮುಳುಗಿ ಸತ್ತರೂ ಒಂದೇ ಎಫ್‌ಐಆರ್‌ ದಾಖಲಾಗುತ್ತದೆ. ಹೀಗಾಗಿ ಸಾವಿಗೀಡಾದವರ ಸಂಖ್ಯೆ ದಾಖಲಾಗಿದ್ದಕ್ಕಿಂತ ಜಾಸ್ತಿ ಇದೆ.ಶಿರಸಿ ತಾಲೂಕೇ ಮುಂಚೂಣಿ:ಜಿಲ್ಲೆಯ ಒಟ್ಟೂ ೨೫ ಠಾಣೆಗಳಿಂದ ೬೭೬ ಪ್ರಕರಣಗಳು ದಾಖಲಾಗಿದ್ದರೂ ಶಿರಸಿ ತಾಲೂಕಿನಲ್ಲಿಯೇ ೧೧೪ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಇದರಲ್ಲಿ ಗ್ರಾಮೀಣ ಠಾಣೆಯಲ್ಲಿ ೫೪ ಆತ್ಮಹತ್ಯೆ ಆಗಿದ್ದರೆ, ನಗರ ಠಾಣೆ ೨೧, ಮಾರುಕಟ್ಟೆ ಠಾಣೆಯಲ್ಲಿ ೧೭ ಹಾಗೂ ಬನವಾಸಿ ೨೨ ಪ್ರಕರಣ ದಾಖಲಾಗಿದೆ. ಠಾಣೆಸಂಖ್ಯೆ

ಅಂಬಿಕಾನಗರ06

ಅಂಕೋಲಾ50ಬನವಾಸಿ22

ಭಟ್ಕಳ ಗ್ರಾಮೀಣ26

ಭಟ್ಕಳ ನಗರ13

ಚಿತ್ತಾಕುಲ15

ಶಿರಸಿ ಮಾರ್ಕೆಟ್17ಶಿರಸಿ ಗ್ರಾಮೀಣ54

ಮುಂಡಗೋಡ 38

ಹೊನ್ನಾವರ 70

ಗೋಕರ್ಣ21

ಮಂಕಿ 25

ಮುರ್ಡೇಶ್ವರ 35ಸಿದ್ದಾಪುರ24

ಯಲ್ಲಾಪುರ52

ದಾಂಡೇಲಿ ಗ್ರಾಮೀಣ 12

ದಾಂಡೇಲಿ ನಗರ18

ಹಳಿಯಾಳ38

ಜೊಯಿಡಾ12

ಕದ್ರಾ04ಕಾರವಾರ ಗ್ರಾಮೀಣ25

ಕಾರವಾರ ನಗರ48

ಮಲ್ಲಾಪುರ08

ಶಿರಸಿ ನಗರ 21

ಬನವಾಸಿ22

Share this article