ಜಿಲ್ಲೆಯಲ್ಲಿ ಶೇ.69 ರಷ್ಟು ಹೆಚ್ಚುವರಿ ಮಳೆ : ಬಿತ್ತನೆಯಲ್ಲಿ ಶೇ. 30 ರಷ್ಟು ಪ್ರಗತಿ

KannadaprabhaNewsNetwork | Published : May 22, 2025 12:50 AM
ಚಿಕ್ಕಮಗಳೂರು, ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗೂ ಮೀರಿ ಅಂದರೆ ಶೇ. 69 ರಷ್ಟು ಹೆಚ್ಚುವರಿ ಮಳೆಯಾಗಿದೆ. ಪೂರ್ವ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಗುರಿ 9,155 ಹೆಕ್ಟೇರ್‌, ಈವರೆಗೆ 2,714 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಅಂದರೆ, ಶೇ. 30 ರಷ್ಟು ಬಿತ್ತನೆಯಾಗಿದೆ.
Follow Us

ಪೂರ್ವ ಮುಂಗಾರಿನ ಬಿತ್ತನೆಯ ಗುರಿ 9,155 ಹೆಕ್ಟೇರ್‌ । ಈವರೆಗೆ 2,714 ಹೆಕ್ಟೇರ್‌ನಲ್ಲಿ ಬಿತ್ತನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗೂ ಮೀರಿ ಅಂದರೆ ಶೇ. 69 ರಷ್ಟು ಹೆಚ್ಚುವರಿ ಮಳೆಯಾಗಿದೆ. ಪೂರ್ವ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಗುರಿ 9,155 ಹೆಕ್ಟೇರ್‌, ಈವರೆಗೆ 2,714 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಅಂದರೆ, ಶೇ. 30 ರಷ್ಟು ಬಿತ್ತನೆಯಾಗಿದೆ.

ತರೀಕೆರೆ, ಅಜ್ಜಂಪುರ, ಕಡೂರು ಹಾಗೂ ಚಿಕ್ಕಮಗಳೂರು ತಾಲೂಕಿನ ಕೆಲವು ಭಾಗಗಳಲ್ಲಿ ಪೂರ್ವ ಮುಂಗಾರಿನಲ್ಲಿ ಹತ್ತಿ, ಎಳ್ಳು, ಅಲಸಂದೆ, ಹೆಸರು, ಉದ್ದು, ನೆಲಗಡಲೆ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಮೇ ಮಾಹೆಯ ಅಂತ್ಯದೊಳಗೆ ನಿಗದಿತ ಗುರಿ ಮುಟ್ಟಲಾಗುವುದು.852.6 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು:ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ 852.6 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ದಾಸ್ತಾನಿರಿಸಿ ರೈತರಿಗೆ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ಎಚ್.ಎಲ್.ಸುಜಾತಾ ತಿಳಿಸಿದ್ದಾರೆ.

ಈಗಾಗಲೇ ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಅಲಸಂದೆ, ನೆಲಗಡಲೆ, ಸೂರ್ಯಕಾಂತಿ ಬೆಳೆಗಳು ಸೇರಿ ದಂತೆ ರೈತರಿಗೆ ಬಿತ್ತನೆಗೆ ಬೇಕಾಗುವ ಬಿತ್ತನೆ ಬೀಜವನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿಡಲಾಗಿದ್ದು, ರೈತರಿಗೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಏಪ್ರಿಲ್ ಹಾಗೂ ಮೇ ತಿಂಗಳ ರಸಗೊಬ್ಬರ ಬೇಡಿಕೆ 37,237 ಮೆಟ್ರಿಕ್ ಟನ್ ಆಗಿದ್ದು, ಜಿಲ್ಲೆಯಲ್ಲಿ ಈಗಾಗಲೇ 41,151 ಮೆಟ್ರಿಕ್ ಟನ್‌ನಷ್ಟು ದಾಸ್ತಾನು ಇದೆ. ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲೆ ಯಲ್ಲಿ ಹಲವಾರು ಕ್ರಮಗಳನ್ನು ವಹಿಸಲಾಗಿರುತ್ತದೆ. ಪ್ರತಿ ತಿಂಗಳ 5 ರಂದು ಗುಣ ನಿಯಂತ್ರಣ ಸಪ್ತಾಹ ಏರ್ಪಡಿಸಿ ಕೃಷಿ ಪರಿಕರ ಮಾರಾಟ ಮಳಿಗೆಗಳನ್ನು ಪರಿಶೀಲಿಸಲಾಗುತ್ತಿದೆ. ಇಲಾಖೆ ಅಧಿಕಾರಿಗಳು ವಿವಿಧ ಕೃಷಿ ಪರಿಕರ ಮಾರಾಟಗಾರರ ಮಳಿಗೆಗಳಿಂದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟ ನಾಶಕ ಮಾದರಿ ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.ದರಪಟ್ಟಿ-ದಾಸ್ತಾನು ಫಲಕ ಅಳವಡಿಸಿ

ಜಿಲ್ಲೆಯ ರಸಗೊಬ್ಬರ ಮಾರಾಟಗಾರರು ರಸಗೊಬ್ಬರಗಳನ್ನು ಚೀಲದ ಮೇಲೆ ಮುದ್ರಿತವಾದ ಗರಿಷ್ಠ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು. ಕಡ್ಡಾಯವಾಗಿ ರಸಗೊಬ್ಬರಗಳ ದರಪಟ್ಟಿ ಮತ್ತು ದೈನಂದಿನ ದಾಸ್ತಾನನ್ನು ತಮ್ಮ ಮಾರಾಟ ಮಳಿಗೆಗಳ ಮುಂದೆ ಸಾರ್ವಜನಿಕವಾಗಿ ಕಾಣುವಂತೆ ಫಲಕ ಪ್ರದರ್ಶಿಸಬೇಕು ಎಂದು ಸೂಚಿಸಿದ್ದಾರೆ.

ಜಿಲ್ಲೆಗೆ ಹಂಚಿಕೆಯಾದ ರಸಗೊಬ್ಬರವನ್ನು ಅಂತರ ಜಿಲ್ಲೆಗೆ ಮಾರಾಟ ಮಾಡಬಾರದು. ರಸಗೊಬ್ಬರಗಳ ಜೊತೆಗೆ ಇತರೆ ಕೃಷಿ ಪರಿಕರಗಳ ಜೊತೆ ಲಿಂಕ್ ಮಾಡಿ ಮಾರಾಟ ಮಾಡಬಾರದು. ಪಾಯಿಂಟ್ ಆಫ್ ಸೇಲ್ (ಪಿಒಎಸ್) ಮುಖಾಂತರ ರಸಗೊಬ್ಬರಗಳ ಮಾರಾಟ ಮಾಡುವುದು ಕಡ್ಡಾಯ. ತಪ್ಪಿದ್ದಲ್ಲಿ ರಸಗೊಬ್ಬರ (ನಿರವಯವ, ಸಾವಯವ ಅಥವಾ ಮಿಶ್ರಿತ) (ನಿಯಂತ್ರಣ) ಆದೇಶ, 1985 ರ ನಿಯಮಾವಳಿಗಳ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.--- ಬಾಕ್ಸ್‌ ----ರಸಗೊಬ್ಬರ ವಿತರಣೆಗೆ ಸಹಾಯವಾಣಿಚಿಕ್ಕಮಗಳೂರು ಜಿಲ್ಲೆಯಲ್ಲಿ ರಸಗೊಬ್ಬರಗಳ ಸಮರ್ಪಕ ಸರಬರಾಜು, ದಾಸ್ತಾನು ಮತ್ತು ವಿತರಣೆಗೆ ಸಹಾಯ ವಾಣಿಗಳನ್ನು ಆರಂಭಿಸಲಾಗಿದೆ. ರೈತರು ರಸಗೊಬ್ಬರಗಳನ್ನು ಖರೀದಿಸುವ ಸಂದರ್ಭದಲ್ಲಿ ಮಾರಾಟಗಾರರು ಅಧಿಕೃತ ರಶೀದಿಗಳನ್ನು ನೀಡದಿದ್ದರೆ ಅಥವಾ ಎಂಆರ್.ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದರೆ ಇಲ್ಲವೇ ಬೇರೆ ಯಾವುದೇ ರೀತಿ ಕಾನೂನು ಉಲ್ಲಂಘನೆ ಮಾಡುತ್ತಿದ್ದರೆ, ಸಹಾಯವಾಣಿ ಮೊಬೈಲ್ ಸಂಖ್ಯೆಗಳಿಗೆ ದೂರು ನೀಡುವಂತೆ ಜಂಟಿ ಕೃಷಿ ನಿರ್ದೇಶಕಿ ಎಚ್.ಎಲ್.ಸುಜಾತಾ ಕೋರಿದ್ದಾರೆ.

ಸಹಾಯವಾಣಿ ಮೊ. ಸಂಖ್ಯೆ ಚಿಕ್ಕಮಗಳೂರು- 8277930894, ಮೂಡಿಗೆರೆ- 8277930914, ಕೊಪ್ಪ- 8277930913, ಶೃಂಗೇರಿ- 8277928494,, ನರಸಿಂಹರಾಜಪುರ- 8277930921, ತರೀಕೆರೆ- 8277930923, ಕಡೂರು- 827793 0937, ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಹಾಯಕ ಕೃಷಿ ನಿರ್ದೇಶಕರು (ಉ ಮತ್ತು ಮೌ)-8277930896 ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ)- 8277930893 ಇವರನ್ನು ದೂರುಗಳಿದ್ದಾಗ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

--- ಬಾಕ್ಸ್‌ --

ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ವಿವಿಧ ಕೃಷಿ ಪರಿಕರಗಳನ್ನು (ಒಟ್ಟು 11.77 ಲಕ್ಷ ಮೌಲ್ಯದ) ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ಮಾರಾಟಗಾರರಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ 7.31 ಲಕ್ಷ ಮೌಲ್ಯದ ರಸಗೊಬ್ಬರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ಪ್ರಸಕ್ತ ಸಾಲಿನಲ್ಲಿ ಕೃಷಿ ಪರಿಕರ ಮಾರಾಟಗಾರರು ಕೃಷಿ ಪರಿಕರಗಳಿಗೆ ಸಂಬಂಧಿಸಿದ ನಿಯಮ ಮೀರಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸ ಲಾಗುವುದು.- ಎಚ್.ಎಲ್.ಸುಜಾತಾ

ಜಂಟಿ ಕೃಷಿ ನಿರ್ದೇಶಕಿ21 ಕೆಸಿಕೆಎಂ 4