ವಿಶ್ವಕರ್ಮ ಸಮಾಜ ಬಾಂಧವರಿಗೆ 6ನೇ ವರ್ಷದ ಕ್ರಿಕೆಟ್ ಪಂದ್ಯಾಟ

KannadaprabhaNewsNetwork |  
Published : Apr 10, 2025, 01:16 AM IST
ವಿಶ್ವಕರ್ಮ ಸಮಾಜ ಬಾಂಧವರಿಗಾಗಿ 6ನೇ ವರ್ಷದ ವಿಶ್ವಕರ್ಮ ಟ್ರೋಪಿ 2025 ಕ್ರಿಕೆಟ್ ಪಂದ್ಯಾಟ | Kannada Prabha

ಸಾರಾಂಶ

ಬಡ ವಿದ್ಯಾರ್ಥಿ ವೇತನ ಹಾಗು ಪ್ರತಿಭಾ ಪುರಸ್ಕಾರ ಸಹಾಯಾರ್ಥ ವಿಶ್ವಕರ್ಮ ಸಮಾಜ ಬಾಂಧವರಿಗಾಗಿ ಸುರತ್ಕಲ್‌ ಗೋವಿಂದಾಸ್ ಕಾಲೇಜಿನ ಕ್ರೀಡಾಂಗದಲ್ಲಿ 6ನೇ ವರ್ಷದ ವಿಶ್ವಕರ್ಮ ಟ್ರೋಫಿ 2025 ಕ್ರಿಕೆಟ್ ಪಂದ್ಯಾಟ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಬ್ರಾಹ್ಮಣ ಯುವ ಬಳಗ ಕಾಟಿಪಳ್ಳ ಕೃಷ್ಣಾಪುರದ ಆಶ್ರಯದಲ್ಲಿ ಬಡ ವಿದ್ಯಾರ್ಥಿ ವೇತನ ಹಾಗು ಪ್ರತಿಭಾ ಪುರಸ್ಕಾರ ಸಹಾಯಾರ್ಥ ವಿಶ್ವಕರ್ಮ ಸಮಾಜ ಬಾಂಧವರಿಗಾಗಿ ಸುರತ್ಕಲ್‌ ಗೋವಿಂದಾಸ್ ಕಾಲೇಜಿನ ಕ್ರೀಡಾಂಗದಲ್ಲಿ 6ನೇ ವರ್ಷದ ವಿಶ್ವಕರ್ಮ ಟ್ರೋಫಿ 2025 ಕ್ರಿಕೆಟ್ ಪಂದ್ಯಾಟ ನಡೆಯಿತು.

ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್ ವಿ ರಾಘವೇಂದ್ರ ರಾವ್ ಹೊಸಬೆಟ್ಟು ಉದ್ಘಾಟಿಸಿದರು. ಎಸ್ ಕೆ ಜಿ ಕೋ ಆಪರೇಟಿವ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಆಚಾರ್ಯ ಕೃಷ್ಣಾಪುರ ಅಧ್ಯಕ್ಷತೆ ವಹಿಸಿದ್ದರು.

ಕುಳಾಯಿ ಶ್ರೀ ಕಾಳಿಕಾಂಬ ದೇವಸ್ಥಾನದ ಉಪಾಧ್ಯಕ್ಷ ಚಂದ್ರಶೇಖರ ಆಚಾರ್ಯ, ಸತೀಶ್ ಆಚಾರ್ಯ ಪಡುಬಿದ್ರಿ, ಧನೇಶ್ ಆಚಾರ್ಯ ಚೊಕ್ಕಬೆಟ್ಟು, ಸುಧಾಕರ್ ಆಚಾರ್ಯ ಕುತ್ತೆತ್ತೂರು ಮತ್ತಿತರರು ಇದ್ದರು.

ದ.ಕ., ಉಡುಪಿ ಜಿಲ್ಲೆಗಳ 20 ತಂಡಗಳು ಭಾಗವಹಿಸಿದ್ದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸುರತ್ಕಲ್ ಗೋವಿಂದ ಕಾಲೇಜಿನ ಪ್ರಾಚಾರ್ಯ ಪ್ರೊ. ಹರೀಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಹಿಂದುಳಿದ ವರ್ಗಗಳ ಮೋರ್ಚಾದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಉದಯ. ಜಿ. ಆಚಾರ್ಯ, ಪ್ರಶಾಂತ್ ಮುಡೈಕೋಡಿ, ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಧರ್ಮ ಪ್ರಸಾರ ಪ್ರಮುಖ ಎ.ಪಿ ಮೋಹನ್ ಕಾಟಿಪಳ್ಳ, ಸೇವಾ ಚಾರಿಟೇಬಲ್ ಟ್ರಸ್ಟ್‌ನ ಜಯಂತ್ ಆಚಾರ್ಯ, ಎನ್‌ಎಂಪಿಎನ ರಾಜೇಶ್ ಆಚಾರ್ಯ, ಎಂಆರ್‌ಪಿಎಲ್‌ನ ಯುವ ಬಳಗದ ಅಧ್ಯಕ್ಷ ರಾಟೆ ಉದಯ ಆಚಾರ್ಯ ಮಂಗಳಪೇಟೆ, ಕೋಶಾಧಿಕಾರಿ ರಾಜೇಶ್ ಆಚಾರ್ಯ ಕೋಟೆ ಉಪಸ್ಥಿತರಿದ್ದರು.

ಸಾಧಕರ ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧಕ ಪವರ್ ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ವಿಶ್ವಕರ್ಮ ಕ್ರಿಕೆಟರ್ ಕುಳಾಯಿ ತಂಡ ಪ್ರಥಮ ರು. 25025 ಬಹುಮಾನ, ಎಸ್‌ಕೆಸಿ ಬ್ರದರ್ಸ್ ಬೆಳುವಾಯಿ ತಂಡ ದ್ವಿತೀಯ ರು. 15025 ಬಹುಮಾನ ಮತ್ತು ಟ್ರೋಫಿ ಪಡೆದುಕೊಂಡಿದೆ.

ಗಣೇಶ್ ಆಚಾರ್ಯ ಪ್ರಾರ್ಥಿಸಿದರು, ವಸಂತ್ ಆಚಾರ್ಯ ಕೃಷ್ಣಾಪುರ ಸ್ವಾಗತಿಸಿದರು, ಪ್ರಶಾಂತ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ್ ಆಚಾರ್ಯ ಕಾಟಿಪಳ್ಳ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ಯೂರಿಯಾ ಕದ್ದು ತಮಿಳ್ನಾಡಿಗೆ ಸಾಗಣೆ ದಂಧೆ ಪತ್ತೆ
ಗೃಹಲಕ್ಷ್ಮಿ ಸ್ಕೀಂ ₹5000 ಕೋಟಿ ಹಗರಣ: ಬಿಜೆಪಿ