ತರಕಾರಿ ವರ್ತಕರ ಸಂಘದಿಂದ ಶಿವಕುಮಾರ ಸ್ವಾಮಿಗಳ 6ನೇ ಪುಣ್ಯಸ್ಮರಣೆ

KannadaprabhaNewsNetwork | Published : Jan 22, 2025 12:33 AM

ಸಾರಾಂಶ

ನಡೆದಾಡುವ ದೇವರು ಶಿವಕುಮಾರಸ್ವಾಮೀಜಿಗಳ ೬ನೇ ಪುಣ್ಯಸ್ಮರಣೆಯ ಆಚರಣೆಯು ನಮ್ಮ ಸೌಭಾಗ್ಯವೆಂದು ವರ್ತಕ ದೇವರಾಜ್ ತಿಳಿಸಿದರು. ಪ್ರತಿದಿನ ೧೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಜತೆಗೆ ಮಠಕ್ಕೆ ಭೇಟಿ ನೀಡುವ ಸಾವಿರಾರು ಜನರಿಗೆ ನಿರಂತರ ಅನ್ನದಾಸೋಹ ನೀಡಲು ಸಾಮಾನ್ಯರಿಂದ ಸಾಧ್ಯವೇ ಇಲ್ಲ. ಇಂತಹ ಪೂಜ್ಯನೀಯ ಕಾರ್ಯವನ್ನು ಮಾಡಿದ ಮಹಾನ್ ಕಾಯಕಯೋಗಿ ಶಿವಕುಮಾರಸ್ವಾಮೀಜಿಗಳ ಸ್ಮರಣೆ ಜತೆಗೆ ಅನ್ನಸಂತರ್ಪಣೆ ಕಾರ್ಯದ ಮೂಲಕ ಗೌರವ ನಮನ ಸಲ್ಲಿಸುತ್ತೇವೆ ಎಂದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಲಕ್ಷಾಂತರ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಹಾಗೂ ಅನ್ನ ದಾಸೋಹದ ಮೂಲಕ ಮೌಲ್ಯಯುತ ಜೀವನ ರೂಪಿಸಿಕೊಳ್ಳಲು ದಾರಿ ತೋರುತ್ತಾ, ಅತ್ತ್ಯುತ್ತಮ ಬದುಕಿಗೆ ಮಾರ್ಗದರ್ಶನ ನೀಡಿದ ನಡೆದಾಡುವ ದೇವರು ಶಿವಕುಮಾರಸ್ವಾಮೀಜಿಗಳ ೬ನೇ ಪುಣ್ಯಸ್ಮರಣೆಯ ಆಚರಣೆಯು ನಮ್ಮ ಸೌಭಾಗ್ಯವೆಂದು ವರ್ತಕ ದೇವರಾಜ್ ತಿಳಿಸಿದರು.

ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಆಯೋಜಿಸಿದ್ದ ಶಿವಕುಮಾರ ಸ್ವಾಮೀಜಿಗಳ ೬ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ನಮ್ಮ ದೇಶದಲ್ಲಿ ವರ್ಷದ ೩೬೫ ದಿನವೂ ಹತ್ತಿಸಿದ ಒಲೆಯನ್ನು ಆರಿಸದೇ ಅನ್ನದಾಸೋಹ, ಜ್ಞಾನದಾಸೋಹ, ವಿದ್ಯಾದಾಸೋಹ ನಡೆಸುವ ಏಕೈಕ ಮಠ ತುಮಕೂರಿನ ಶ್ರೀ ಸಿದ್ಧಗಂಗಾ ಮಠ. ಪ್ರತಿದಿನ ೧೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಜತೆಗೆ ಮಠಕ್ಕೆ ಭೇಟಿ ನೀಡುವ ಸಾವಿರಾರು ಜನರಿಗೆ ನಿರಂತರ ಅನ್ನದಾಸೋಹ ನೀಡಲು ಸಾಮಾನ್ಯರಿಂದ ಸಾಧ್ಯವೇ ಇಲ್ಲ. ಇಂತಹ ಪೂಜ್ಯನೀಯ ಕಾರ್ಯವನ್ನು ಮಾಡಿದ ಮಹಾನ್ ಕಾಯಕಯೋಗಿ ಶಿವಕುಮಾರಸ್ವಾಮೀಜಿಗಳ ಸ್ಮರಣೆ ಜತೆಗೆ ಅನ್ನಸಂತರ್ಪಣೆ ಕಾರ್ಯದ ಮೂಲಕ ಗೌರವ ನಮನ ಸಲ್ಲಿಸುತ್ತೇವೆ ಎಂದರು.

ಅರ್ಚಕ ಶಿವಕುಮಾರ ಆರಾಧ್ಯ ಪೂಜಾ ಕೈಂಕರ್ಯ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಭಕ್ತರು ದಾಸೋಹ ಸ್ವೀಕರಿಸಿದರು.

ಮಹಿಳೆಯರು ಹಸಿರು ಬಣ್ಣದ ಸೇರೆಯನ್ನುಟ್ಟು, ಹಣೆಗೆ ವಿಭೂತಿ ಧರಿಸಿ, ಪುಷ್ಪ ನಮನ ಸಲ್ಲಿಸಿ, ಗೌರವ ಸಮರ್ಪಿಸಿದರು ಹಾಗೂ ಅವರುಗಳ ಉಡುಗೆ ತೊಡುಗೆ ಗಮನ ಸೆಳೆಯುವ ಜತೆಗೆ ಆಕರ್ಷಕವಾಗಿತ್ತು.

ಕವರ್‌ ಡೆಕ್ ಹಾಗೂ ಕೋಟೆ ಮುಖ್ಯ ರಸ್ತೆಯ ತರಕಾರಿ, ಹೂ, ಹಣ್ಣು, ವೀಳ್ಯದೆಲೆ, ಕಾಯಿ, ಬಾಳೆಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಅಂಗಡಿಗಳ ಮಾಲೀಕರಾದ ರಾಜಣ್ಣ, ಸುರೇಶ್, ಉಮೇಶ್, ಎಚ್.ಆರ್.ಉಮೇಶ್, ಕುಮಾರ್, ಉಮೇಶ್, ಸಂತೋಷ, ಪುಟ್ಟ, ವಿನಯ್, ಅಂಬಿಕಾ, ಜೆ.ಮಂಜುಳ, ಭಾಗ್ಯಮ್ಮ ಸಿದ್ಧರಾಜು, ರಾಧಮ್ಮ, ಕಲಾ, ಭಾಗ್ಯಮ್ಮ, ಮಂಜುಳ, ಅಶ್ವಿನಿ, ನಾಗರತ್ನ, ಜವರಮ್ಮ, ಲಕ್ಷ್ಮಿ, ಪಾರ್ವತಿ, ನಂದಿನಿ, ಪ್ರಭಾ, ಗೀತಾ, ಲಕ್ಷ್ಮೀ, ಚಂದ್ರಕಲಾ, ವಿಜಯಾ, ಲೀಲಾವತಿ, ಲತಾ, ವನಜಾಕ್ಷಿ, ಇತರರು ಇದ್ದರು.

Share this article