ಲಕ್ಷ್ಮೇಶ್ವರ: ಪಟ್ಟಣದ ಜನ್ನತ ನಗರದಲ್ಲಿ ಬೀದಿನಾಯಿಗಳ ದಾಳಿಗೆ 7 ಕುರಿಗಳು ಸಾವಿಗೀಡಾಗಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಕಳೆದ 2 ತಿಂಗಳ ಹಿಂದೆ ಜನ್ನತ ನಗರದಲ್ಲಿನ ಮನೆಯ ಮುಂದೆ ಕಟ್ಟಿದ್ದ 4 ಕುರಿಗಳ ಮೇಲೆ ಬೀದಿನಾಯಿಗಳು ಇದೇ ರೀತಿ ದಾಳಿ ಮಾಡಿ ತಿಂದು ಹಾಕಿದ್ದವು. ಅದು ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿರುವುದು ಪುರಸಭೆಯ ನಿರ್ಲಕ್ಷ್ಯ ತೋರಿಸುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಬೀದಿನಾಯಿಗಳನ್ನು ಹಿಡಿದು ಬೇರೆ ಕಡೆ ಸಾಗಿಸಬೇಕು. ಇಲ್ಲವಾದಲ್ಲಿ ಪುರಸಭೆಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಝಾಕೀರ್‌ಹುಸೇನ ಹವಾಲ್ದಾರ ಎಚ್ಚರಿಸಿದ್ದಾರೆ. ತಾಯಿ ಪಾರ್ವತಿ ಮಕ್ಕಳ ಬಳಗದ ಕಾಲೇಜು ಸಾಧನೆ
ಲಕ್ಷ್ಮೇಶ್ವರ: ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಂಸ್ಥೆಯ ಜಗದ್ಗುರು ವೀರಗಂಗಾಧರ ಪಪೂ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಜಿಲ್ಲೆಗೆ ಎರಡನೇ ಸ್ಥಾನ ಪಡೆದು ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ.ಕಲಾ ವಿಭಾಗದಲ್ಲಿ ರೋಹಿಣಿ ಬೆಟಗೇರಿ, 584 ಅಂಕ(ಶೇ. 97.33), ನಂದಿತಾ ಬಡಿಗೇರ, 580(96.66), ಗೀತಾ ಹಿರೇಮಠ, 570(ಶೇ. 95) ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸಹನಾ ಶೀಶನಳ್ಳಿ, ಅಂಕ 555(ಶೇ. 92.50) ನಂದಿತಾ ನಾಗಲೋಟಿ, 551(ಶೇ. 91.83) ಹಾಗೂ ಜ್ಯೋತಿ ಬಕ್ಸದ, 537(ಶೇ. 89.50) ಅಂಕ ಗಳಿಸಿದ್ದಾರೆ ಎಂದು ಪ್ರಾಚಾರ್ಯೆ ಸರಸ್ವತಿ ಹಲ್ಲನ್ನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರು ಮತ್ತು ಕಾಲೇಜಿನ ಉಪನ್ಯಾಸಕ ವವರ್ಗ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.