ವಡ್ಡರಹಳ್ಳಿ ಡೇರಿ ಕಟ್ಟಡಕ್ಕೆ 75 ಸಾವಿರ ರು. ಮಂಜೂರಾತಿ ಪತ್ರ ಹಸ್ತಾಂತರಿ

KannadaprabhaNewsNetwork |  
Published : Feb 20, 2025, 12:47 AM IST
19ಕೆಎಂಎನ್ ಡಿ30 | Kannada Prabha

ಸಾರಾಂಶ

ಪಾಂಡವಪುರ ತಾಲೂಕು ಕೆ.ಬೆಟ್ಟಹಳ್ಳಿ ವಲಯ ವಡ್ಡರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ 75000 ರು. ಅನುದಾನದ ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿ ಆರ್.ಯಶವಂತ್ ಸಹಕಾರಿ ಸಂಘದ ಪದಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕು ಕೆ.ಬೆಟ್ಟಹಳ್ಳಿ ವಲಯ ವಡ್ಡರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ 75000 ರು. ಅನುದಾನದ ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿ ಆರ್.ಯಶವಂತ್ ಸಹಕಾರಿ ಸಂಘದ ಪದಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು. ಈ ವೇಳೆ ಡೇರಿ ಅಧ್ಯಕ್ಷ ಟಿ.ಸ್ವಾಮಿಗೌಡ, ಉಪಾಧ್ಯಕ್ಷ ಶಿವಪ್ಪ, ಡೈರಿ ಕಾರ್ಯದರ್ಶಿ ಗೋವಿಂದರಾಜು ಎಲ್ಲಾ ಕಮಿಟಿಯ ಸದಸ್ಯರು, ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು, ವಲಯದ ಮೇಲ್ವಿಚಾರಕರಾದ ಬಿ.ಎಂ.ನಾಗರಾಜ, ಸ್ಥಳೀಯ ಸೇವಾ ಪ್ರತಿನಿಧಿ ಮಂಗಳಗೌರಿ, ಊರಿನ ಗ್ರಾಮಸ್ಥರು ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

ನಾಳೆ ವಿಕಲಚೇತನರ ಉದ್ಯೋಗ ಮೇಳ

ಕನ್ನಡಪ್ರಭ ವಾರ್ತೆ ಮಂಡ್ಯ

ಸ್ವಾಭಿಮಾನಿ ಫೌಂಡೇಷನ್ ಮಂಡ್ಯ, ಆಶಾದೀಪ ಸಂಸ್ಥೆ ಇಳಕಲ್ಸ್, ದೀನಾಬಂಧು ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಟ್ರೈನ್ ಸಂಸ್ಥೆ ಬೆಂಗಳೂರು ನೇತೃತ್ವದಲ್ಲಿ ವಿಕಲಚೇತನರ ಉದ್ಯೋಗ ಮೇಳ ಫೆ.೨೧ರಂದು ನಗರದ ಗುರು ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಸಂಚಾಲಕ ಎನ್.ನಂದೀಶ್ ತಿಳಿಸಿದರು.

ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೆ ಮೇಳ ನಡೆಯಲಿದ್ದು ಸುಮಾರು ೨೦ ಕಂಪನಿಗಳು ಭಾಗವಹಿಸಲಿವೆ. ಚಾಮರಾಜನಗರ, ಮಂಡ್ಯ, ಮೈಸೂರು ಜಿಲ್ಲೆಗಳನ್ನೊಳಗೊಂಡಂತೆ ಮೇಳ ಆಯೋಜನೆ ಮಾಡಲಾಗಿದೆ. ಏಳನೇ ತರಗತಿಯಿಂದ ಪದವಿವರೆಗೆ ವ್ಯಾಸಂಗ ಮಾಡಿರುವ ವಿಕಲಚೇತನರಿಗೆ ಆದ್ಯತೆಯ ಮೇರೆಗೆ ಉದ್ಯೋಗವಕಾಶ ಕಲ್ಪಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಮ್ಮ ಸಂಸ್ಥೆಯಿಂದ ವಿಕಲಚೇತನರಿಗೆ ಉಚಿತವಾಗಿ ಕೌಶಲ್ಯಾಧಾರಿತ ತರಬೇತಿಯನ್ನು ದಿನಗಳವರೆಗೆ ನೀಡಿ ಅವರಿಗೆ ಉದ್ಯೋಗ ದೊರಕಿಸಿಕೊಡಲಾಗುತ್ತಿದೆ. ಕಂಪನಿಗಳಿಗೆ ಆಯ್ಕೆಯಾಗುವ ವೇಳೆಗೆ ಸಂಪೂರ್ಣ ಪರಿಣತಿ ಪಡೆದಿರುವಂತೆ ತರಬೇತಿ ನೀಡಲಾಗುವುದು ಎಂದರು.

ಇದುವರೆಗೂ ನಮ್ಮ ಸಂಸ್ಥೆಯಿಂದ ೩೨ ಮಂದಿ ವಿಕಲಚೇತನರಿಗೆ ಉದ್ಯೋಗವಕಾಶಗಳನ್ನು ದೊರಕಿಸಿಕೊಡಲಾಗಿದೆ. ಅರ್ಹ ವಿಕಲಚೇತನರು ಮೇಳದಲ್ಲಿ ಭಾಗವಹಿಸಿ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು.

ಗೋಷ್ಠಿಯಲ್ಲಿ ಕೆ..ಪಿ.ವನಿತಾ, ಎಂ.ಕೆ.ಮುರಳಿ, ಸುರೇಶ್, ಬಸವರಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ