ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಧ್ವಜರೋಹಣ ನೆರವೇರಿಸಿದರು. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಕೆ.ಮರಿಯಪ್ಪ, ವೈ.ಎಚ್.ನಾಗರಾಜ್, ಕಲಗೋಡು ರತ್ನಾಕರ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ:ಗುರುವಾರ ಬೆಳಗ್ಗೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ದೇಶದ 78 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ರವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಡಿ ಎಸ್.ಅರುಣ್, ಶಾಸಕ ಎಸ್ ಎನ್ ಚನ್ನಬಸಪ್ಪ, ರಾಜ್ಯ ಪ್ರಕೋಷ್ಟಗಳ ಸಂಯೋಜಕ ಎಸ್ ದತ್ತಾತ್ರಿ, ಮಾಜಿ ಶಾಸಕ ಕೆ ಜಿ ಕುಮಾರಸ್ವಾಮಿ, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಶಿವರಾಜ್, ಮಾಲತೇಶ್, ಜಿಲ್ಲಾ ವಕ್ತಾರ ಎಸ್ ಎಸ್ ಜ್ಯೋತಿಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ವಿನ್ಸೆoಟ್ ರೋಡ್ರಿಗಸ್, ಸುಮಾ ಭೂಪಲಂ, ಪ್ರಮುಖರಾದ ಜ್ಞಾನೇಶ್ವರ್, ರತ್ನಾಕರ್ ಶೆಣೈ, ಪಿ ರುದ್ರೇಶ್,ನಾಗರಾಜ್, ಮಂಜುನಾಥ್, ಸುರೇಖಾ ಮುರಳಿಧರ್ ಕಾರ್ಯಕರ್ತರು ಉಪಸ್ಥಿತರಿದ್ದರು.ಜೆಡಿಎಸ್ ಕಚೇರಿ:
ಶಿವಮೊಗ್ಗದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್, ಪ್ರಮುಖರಾದ ದೀಪಕ್‌ಸಿಂಗ್ ಸೇರಿದಂತೆ ಹಲವು ಕಾರ್ಯಕರ್ತರು ಇದ್ದರು.ಜಿಲ್ಲಾಧಿಕಾರಿ ಕಚೇರಿ:
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಧ್ವಜಾರೋಹಣ ನೆರವೇರಿಸಿದರು.ಪತ್ರಿಕಾ ಭವನ:
ಶಿವಮೊಗ್ಗ ಪತ್ರಿಕಾ ಭವನದಲ್ಲಿ ಗುರುವಾರ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.ಪ್ರಸ್ಟ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಹಿರಿಯ ಪತ್ರಕರ್ತರಾದ ಗೋಪಾಲ್ ಯಡಗೆರೆ, ನಾಗರಾಜ್ ನೇರಿಗೆ, ಜೇಸುದಾಸ್, ಗಿರೀಶ್ ಉಮ್ರಾಯ್, ರಾಮಚಂದ್ರ ಗುಣಾರಿ, ವಿ.ಸಿ ಪ್ರಸನ್ನ, ಶಿ.ಜು. ಪಾಷಾ, ಗಜೇಂದ್ರಸ್ವಾಮಿ, ಕಿರಣ್ ಕಂಕಾರಿ, ಭರತ್, ಶರತ್ ಭದ್ರಾವತಿ, ಮಲ್ಲಪ್ಪ ಸಂಕಿನ್, ಜೋಸಫ್ ಟೆಲ್ಲಿಸ್, ಲಿಯಾಕತ್ ಇದ್ದರು.
ಈಡಿಗ ಸಂಘದಿಂದ ಸ್ವಾತಂತ್ರೋತ್ಸವ:ಶಿವಮೊಗ್ಗದ ಜಿಲ್ಲಾ ಈಡಿಗ ಸಂಘದ ವತಿಯಿಂದ 78ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ಈಡಿಗ ಸಂಘದ ಅಧ್ಯಕ್ಷರಾದ ಡಾ.ಶ್ರೀಧರ್ ಹುಲ್ತಿಕೊಪ್ಪˌ ಖಜಾಂಚಿರೆಚ್.ರಾಮಪ್ಪˌ ನಿರ್ದೇಶಕರಾದ ಡಿ.ದೇವಪ್ಪˌˌ ಕ್ರುಷ್ಣಮೂರ್ತಿ, ಉದಯಕುಮಾರ್, ವೆಂಕಟೇಶಮೂರ್ತಿ, ಪರಶುರಾಂ, ಮಹೇಶ್ ಹಾಜರಿದ್ದರು.
ಮೆಟ್ರೋ ನರ್ಸಿಂಗ್ ಕಾಲೇಜು:ಗುರುವಾರ ಮೆಟ್ರೋ ನರ್ಸಿಂಗ್ ಕಾಲೇಜಿನಲ್ಲಿ ಹಾಗೂ ಮಲ್ಲೇಶ್ವರನಗರದಲ್ಲಿರುವ ರುದ್ರರಾಧ್ಯ ಯೋಗಭವನದಲ್ಲಿ ಆಯೋಜಿಸಿದ್ದ ಸ್ವತಂತ್ರೋತ್ಸವ ದಿನಾಚರಣೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಕೆ.ಇ.ಕಾಂತೇಶ್, ಮಲ್ಲೇಶ್ವರ ನಗರ ನಿವಾಸಿಗಳ ಸಂಘದ ಅಧ್ಯಕ್ಷ ಪ್ರಕಾಶ್ ಜೋಡಿಯಾಕ್, ಮೋಹನ್, ಪರೋಪಕರಂ ತಂಡದ ಶ್ರೀಧರ್, ಶಿವನಂದಪ್ಪ, ಅನಿಲ್ ಹೆಗಡೆ ಮತ್ತಿತರರು ಇದ್ದರು.
ಸೂಡಾ ಕಚೇರಿ:ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ನಿರ್ದೇಶಕರು, ಆಯುಕ್ತರು ಹಾಗೂ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.