ಉಡುಪಿ: ನವದೆಹಲಿಯ ಲಾಲ್ ಬಹೂದ್ದರ್ ಶಾಸ್ತ್ರಿ ವಿಶ್ವವಿದ್ಯಾಲಯದಲ್ಲಿ ನಡೆದ ದೆಹಲಿ ರಾಜ್ಯಮಟ್ಟದ ಶಾಸ್ತ್ರ ಸ್ಪರ್ಧೆಗಳಲ್ಲಿ ನವದೆಹಲಿಯ ಪೇಜಾವರ ಮಠದ ಶ್ರೀ ವೇದವ್ಯಾಸ ಗುರುಕುಲದ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಭಾಗವಹಿಸಿ, 8 ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡು ಸಮಗ್ರವಾಗಿ ದ್ವಿತೀಯ ಸ್ಥಾನಗಳಿಸಿದ್ದಾರೆ.ವೇದಾಂತ ಭಾಷಣ: ಸುಧಾಂಶು ಪ್ರಥಮ, ವ್ಯಾಕರಣ ಭಾಷಣ : ಆರ್ಯನ್ ದ್ವಿವೇದಿ ಪ್ರಥಮ, ಸಾಂಖ್ಯ ಭಾಷಣ : ಮಂಗಳ ಪಾಂಡೆ ಪ್ರಥಮ, ನ್ಯಾಯ ಶಾಸ್ರ್ತ ಭಾಷಣ : ಮಾನಸ ತಿವಾರಿ ದ್ವಿತೀಯ, ಮೀಮಾಂಸ ಭಾಷಣ : ಪ್ರತೀಕ್ ದ್ವಿತೀಯ, ಸಾಹಿತ್ಯ ಭಾಷಣ : ಜಿಜ್ಞಾಸು ತೃತೀಯ, ಧರ್ಮಶಾಸ್ತ್ರ ಭಾಷಣ : ವೈಭವ ಪಾಂಡೆ : ತೃತೀಯ ಮತ್ತು ಅಮರ ಕೋಶ ಕಂಠಪಾಠ : ಆರಾಧ್ಯ ತೃತೀಯ ಬಹುಮಾನಗಳನ್ನು ವಿಜೇತರಾಗಿದ್ದಾರೆ .