ಕೇಂದ್ರದಿಂದ ಜಿಲ್ಲೆಗೆ 9 ಸಾವಿರ ಕೋಟಿ ಬಂದಿದೆ: ರೇವಣ್ಣ ಶ್ಲಾಘನೆ

KannadaprabhaNewsNetwork |  
Published : Feb 28, 2024, 02:34 AM IST
27ಎಚ್ಎಸ್ಎನ್10 : ಪ್ರಧಾನಿ ಮೋದಿಜೀಯವರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನೈರುತ್ಯ ರೈಲ್ವೆಯ ೧೧೯೨.೮೬ ಕೋಟಿ ರೂ. ವಿವಿಧ ಯೋಜನೆಗಳ ಶಿಲನ್ಯಾಸ ಮತ್ತು ರಾಷ್ಟ್ರಕ್ಕೆ ಸಮರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ.ರೇವಣ್ಣ ಉದ್ಘಾಟಿಸಿದರು.  | Kannada Prabha

ಸಾರಾಂಶ

ಪ್ರಧಾನಿ ಮೋದಿಯವರ ಆಡಳಿತದ ಅವಧಿಯಲ್ಲಿ ಹಾಸನ ಜಿಲ್ಲೆಗೆ ೨ ಸಾವಿರ ಕೋಟಿ ರು. ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಹಾಸನ-ಬೇಲೂರು-ಚಿಕ್ಕಮಗಳೂರು ರೈಲ್ವೆ ಮಾರ್ಗ, ಹೊಳೆನರಸೀಪುರ, ಹಾಸನ, ಅರಸೀಕೆರೆ ರೈಲ್ವೆ ನಿಲ್ದಾಣ ಉನ್ನತೀಕರಣ ಸೇರಿದಂತೆ ಹಲವಾರು ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದು ಶಾಸಕ ಎಚ್.ಡಿ. ರೇವಣ್ಣ ಶ್ಲಾಘಿಸಿದರು.

ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಪ್ರಧಾನಿ ಮೋದಿಯವರಿಂದ ಮುಕ್ತ ಸಹಕಾರ

ಕನ್ನಡಪ್ರಭ ವಾರ್ತೆ, ಹೊಳೆನರಸೀಪುರ

ಪ್ರಧಾನಿ ಮೋದಿಯವರ ಆಡಳಿತದ ಅವಧಿಯಲ್ಲಿ ಹಾಸನ ಜಿಲ್ಲೆಗೆ ೨ ಸಾವಿರ ಕೋಟಿ ರು. ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಹಾಸನ-ಬೇಲೂರು-ಚಿಕ್ಕಮಗಳೂರು ರೈಲ್ವೆ ಮಾರ್ಗ, ಹೊಳೆನರಸೀಪುರ, ಹಾಸನ, ಅರಸೀಕೆರೆ ರೈಲ್ವೆ ನಿಲ್ದಾಣ ಉನ್ನತೀಕರಣ ಸೇರಿದಂತೆ ಹಲವಾರು ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದು ಶಾಸಕ ಎಚ್.ಡಿ. ರೇವಣ್ಣ ಶ್ಲಾಘಿಸಿದರು. ಪಟ್ಟಣದ ಹೇಮಾವತಿ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿದ್ದ ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ಅಡಿಯಲ್ಲಿ ಪ್ರಧಾನಿ ಮೋದಿಜೀಯವರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನೈರುತ್ಯ ರೈಲ್ವೆಯ ೧೧೯೨.೮೬ ಕೋಟಿ ರು. ವಿವಿಧ ಯೋಜನೆಗಳ ಶಿಲನ್ಯಾಸ ಮತ್ತು ರಾಷ್ಟ್ರಕ್ಕೆ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬ್ರಿಟಿಷರ ಆಳ್ವಿಕೆಯಲ್ಲಿ ಪ್ರಾರಂಭಗೊಂಡಿದ್ದ ಅರಸೀಕೆರೆ ಹೊಳೆನರಸೀಪುರ ರೈಲ್ವೆ ಮಾರ್ಗವನ್ನು ಕಾಂಗ್ರೆಸ್ ಆಡಳಿತದಲ್ಲಿ ರದ್ದು ಮಾಡಿದ್ದರು. ಆದರೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಧಾನಿಯಾದ ಸಂದರ್ಭದಲ್ಲಿ ಹೊಳೆನರಸೀಪುರ ಮಾರ್ಗದ ರೈಲ್ವೆ ಉಳಿಸಿಕೊಳ್ಳುವ ಜತೆಗೆ ಬ್ರಾಡ್ ಗೇಜ್ ಮಾಡುವ ಮೂಲಕ ಅವರು ತೋರಿದ ಕಾಳಜಿಯಿಂದಾಗಿ ಇಂದು ಹೊಳೆನರಸೀಪುರ ಮಾರ್ಗವಾಗಿ ೧೮ ರೈಲುಗಳು ದಿನನಿತ್ಯ ಸಂಚರಿಸುತ್ತಿದೆ ಎಂದು ತಿಳಿಸಿದರು. ಹಾಸನ ಜಿಲ್ಲೆಯಲ್ಲಿ ಕೈಗೊಂಡಿರುವ ಹಲವಾರು ರಾಷ್ಟ್ರೀಯ ಹೆದ್ದಾರಿಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ದಕ್ಷಿಣ ರೈಲ್ವೆ ವಿಭಾಗದ ಚೀಫ್ ಇಂಜಿನಿಯರ್ ಪ್ರದೀಪ್ ಪುರಿ, ಡೆ. ಚೀಫ್ ಇಂಜಿನಿಯರ್ ಗೂಟನ್ ಸಿಎಂಕೆ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ಪ್ರಾಂಶುಪಾಲ ದೇವರಾಜ್, ಉಪನ್ಯಾಸಕ ಗಿರೀಶ್, ಪದ್ಮಜ ಇತರರು ಇದ್ದರು. ಹೊಳೆನರಸೀಪುರ ಮಾವಿನಕೆರೆ ೩೯.೯೩ ಕೋಟಿ ರು. ವೆಚ್ಚದ ನಂ. ೭೯ ರೈಲ್ವೆ ಮೇಲ್ಸೇತುವೆ ಸಮರ್ಪಣೆ ಎಂಬ ಕಾರ್ಯಕ್ರಮವು ಹಾಸ್ಯಸ್ಪಧವಾಗಿದ್ದು, ಪಟ್ಟಣದ ಚನ್ನರಾಯಪಟ್ಟಣ ರಸ್ತೆಯ ಹಾಗೂ ಹಂಗರಹಳ್ಳಿ ರಸ್ತೆಯ ಮೇಲ್ಸೇತುವೆ ಕಾಮಗಾರಿ ಮುಗಿಯಲು ಇನ್ನೂ ಏಳೆಂಟು ತಿಂಗಳೇ ಬೇಕಿರುವಾಗ ಪ್ರಧಾನಿ ಮೋದೀಜೀಯವರಿಂದ ಸಮರ್ಪಣೆ ಎಂದು ಕಾರ್ಯಕ್ರಮವು ಜನರಿಗೆ ಕೇಂದ್ರ ಸರ್ಕಾರದ ಆಡಳಿತದ ಬಗ್ಗೆ ತಪ್ಪು ಸಂದೇಶ ನೀಡುವ ಜತೆಗೆ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅಪಾರ್ಥ ಕಲ್ಪಿಸುತ್ತದೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ