95 ಗ್ರಾಂ ಚಿನ್ನ, 250 ಗ್ರಾಂ ಬೆಳ್ಳಿ ಕಳ್ಳತನ

KannadaprabhaNewsNetwork |  
Published : May 18, 2024, 12:43 AM IST
ಕಳ್ಳತನ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೈಲಹೊಂಗಲ: ಮನೆಯ ತಿಜೋರಿಯಲ್ಲಿದ್ದ ₹4.66 ಲಕ್ಷ ಮೌಲ್ಯದ 95 ಗ್ರಾಂ ತೂಕದ ಬಂಗಾರದ ಆಭರಣ, 250 ಗ್ರಾಂ ತೂಕದ ಬೆಳ್ಳಿಯ ಆಭರಣ ಸೇರಿದಂತೆ ನಗದು ಹಣವನ್ನು ಹಾಡುಹಗಲೇ ಕಳ್ಳತನ ಮಾಡಿರುವ ಘಟನೆ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಾಯನಗೌಡ ಪಾಟೀಲ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.

ಕನ್ನಡಪ್ರಭ ವಾರ್ತೆ ಬೈಲಹೊಂಗಲಮನೆಯ ತಿಜೋರಿಯಲ್ಲಿದ್ದ ₹4.66 ಲಕ್ಷ ಮೌಲ್ಯದ 95 ಗ್ರಾಂ ತೂಕದ ಬಂಗಾರದ ಆಭರಣ, 250 ಗ್ರಾಂ ತೂಕದ ಬೆಳ್ಳಿಯ ಆಭರಣ ಸೇರಿದಂತೆ ನಗದು ಹಣವನ್ನು ಹಾಡುಹಗಲೇ ಕಳ್ಳತನ ಮಾಡಿರುವ ಘಟನೆ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಾಯನಗೌಡ ಪಾಟೀಲ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.

ಪತ್ನಿ ಅನ್ನಪೂರ್ಣ ಮಗನ ಜೊತೆಗೆ ಮೇ.16ರಂದು ದೇಶನೂರ ಗ್ರಾಮದ ದ್ಯಾಮವ್ವನ ಜಾತ್ರೆಗೆ ಹೋಗಿ ಸಂಜೆ ಬಂದು ನೋಡಿದಾಗ ಮನೆಯ ಮುಂದಿನ ಬಾಗಿಲಕ್ಕೆ ಹಾಕಿದ್ದ ಬೀಗ ಮುರಿದಿತ್ತು. ಒಳಗಡೆ ಹೋಗಿ ನೋಡಿದಾಗ ರೂಮ್‌ನಲ್ಲಿದ್ದ ತಿಜೋರಿ ಬಾಗಿಲು ಕೂಡ ತೆರೆದಿದ್ದು, ಅದರಲ್ಲಿದ್ದ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿದ್ದವು. ಬಳಿಕ ಪರಿಶೀಲಿಸಿದಾಗ 40 ಗ್ರಾಂ ತೂಕದ ಚಿನ್ನದ ಪಾಟ್ಲಿ, 15 ಗ್ರಾಂ ತೂಕದ ಚೈನ್‌, 5 ಗ್ರಾಂ ತೂಕದ ಸಣ್ಣ ಚೈನ್, 5 ಗ್ರಾಂ ತೂಕದ ಬಳೆಗಳು, 5 ಗ್ರಾಂ ತೂಕದ ಸುತ್ತುಂಗರ,ಕಿವಿಯೊಲೆ ಸೇರಿದಂತೆ ಒಟ್ಟು 95 ಗ್ರಾಂ ತೂಕದ ಚಿನ್ನದ ಆಭರಣಗಳು 250 ಗ್ರಾಂ ತೂಕದ ಬೆಳ್ಳಿ ಹಾಗೂ ₹1800 ನಗದನ್ನು ಕಳ್ಳತನವಾಗಿದೆ. ಈ ಬಗ್ಗೆ ಅನ್ನಪೂರ್ಣ ಪಾಟೀಲ ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಳಿಕ, ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ಸಿಸಿ ಕ್ಯಾಮೆರಾ ಮತ್ತು ಅಪರಿಚಿತ ವ್ಯಕ್ತಿಗಳ ಚಲನವಲನದ ಬಗ್ಗೆ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಘಟಣಾ ಸ್ಥಳಕ್ಕೆ ಹೆಚ್ಚುವರಿ ಎಸ್.ಪಿ.ಬಸರಗಿ, ಡಿವೈಎಸ್ಪಿ ಎಂ.ಪಾಂಡುರಂಗಯ್ಯ, ಪಿಎಸ್ಐಗಳಾದ ಗುರುರಾಜ ಕಲಬುರ್ಗಿ, ರಾಜು ಮಮದಾಪೂರ ಭೇಟಿ ನೀಡಿ ಪರಿಶೀಲಿಸಿದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ