ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ 970 ಮಿಲಿಯನ್ ಜನರು

KannadaprabhaNewsNetwork |  
Published : Oct 14, 2025, 01:03 AM IST
ವಿಜಯಪುರ | Kannada Prabha

ಸಾರಾಂಶ

ಪ್ರಪಂಚಾದ್ಯಂತ ಸುಮಾರು 970 ಮಿಲಿಯನ್ ಜನರು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಶೇ.52 ಮಹಿಳೆಯರು, ಶೇ.48 ಪುರುಷರು ಎಂದು ಬಿಎಲ್‌ಡಿಇ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯಕೀಯ ವಿಭಾಗದ ಸಹಪ್ರಾಧ್ಯಾಪಕ ಡಾ.ಮನೋವಿಜಯ ಬಿ.ಕಳಸಗೊಂಡ ಕಳವಳ ವ್ಯಕ್ತಪಡಿಸಿದರು.

  ವಿಜಯಪುರ :  ಪ್ರಪಂಚಾದ್ಯಂತ ಸುಮಾರು 970 ಮಿಲಿಯನ್ ಜನರು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಶೇ.52 ಮಹಿಳೆಯರು, ಶೇ.48 ಪುರುಷರು ಎಂದು ಬಿಎಲ್‌ಡಿಇ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯಕೀಯ ವಿಭಾಗದ ಸಹಪ್ರಾಧ್ಯಾಪಕ ಡಾ.ಮನೋವಿಜಯ ಬಿ.ಕಳಸಗೊಂಡ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ವತಿಯಿಂದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-2025 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮಾನಸಿಕ ಕಾಯಿಲೆಯು ಗಂಭೀರ ಕಾಯಿಲೆಯಾಗಿದ್ದು, ಅದರ ಕುರಿತು ಜನರಲ್ಲಿ ಅನೇಕ ತಪ್ಪು ನಂಬಿಕೆಗಳು ಮತ್ತು ಭ್ರಮೆಗಳಿವೆ. ಜನರ ದೃಷ್ಟಿಕೋನ ಬದಲಾಗುವುದು ಅತ್ಯವಶ್ಯಕ ಎಂದರು.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ಪ್ರೊ.ಜಿ.ಬಿ.ಸೋನಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನಸಿಕ ಆರೋಗ್ಯ ಎನ್ನುವುದು ವಿಶಾಲ ಹಾಗೂ ಸಂಕೀರ್ಣ ವಿಷಯವಾಗಿದೆ. ಇಂದಿನ ಯುವಜನತೆ ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. 

ಮನಸ್ಸನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು, ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯುವುದು ಮತ್ತು ಸಕಾರಾತ್ಮಕ ವ್ಯಕ್ತಿಗಳ ಸ್ನೇಹ ಮಾಡುವುದು ಮಾನಸಿಕ ಸ್ವಾಸ್ಥ್ಯಕ್ಕೆ ಸಹಕಾರಿ. ದೈಹಿಕ ಆರೋಗ್ಯದ ಕಡೆ ಗಮನಕೊಡುವುದು ಅಗತ್ಯ. ಪೋಷಕಾಂಶಯುಕ್ತ ಆಹಾರ ಸೇವನೆ ಮತ್ತು ಶಿಸ್ತಿನ ಜೀವನ ಶೈಲಿ ಅಳವಡಿಸಿಕೊಳ್ಳುವುದರಿಂದ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದರು. 

ಡಾ.ಕಲಾವತಿ ಎಚ್. ಕಾಂಬಳೆ ಮಾತನಾಡಿ, ಜನರಲ್ಲಿ ಮನೋ ಕಾಯಿಲೆ ನಿವಾರಣೆಗೆ ಕಾರ್ಯನಿರ್ವಹಿಸುವುದು ಅತ್ಯಗತ್ಯ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಸಮಾನವಾಗಿ ಮುಖ್ಯವಾಗಿದೆ. ದೈನಂದಿನ ಜೀವನದಲ್ಲಿ ಒತ್ತಡ ಹಾಗೂ ಆತಂಕ ಹೇಗೆ ನಿರ್ವಹಿಸಬೇಕು ಎಂಬ ಅರಿವು ಎಲ್ಲರಲ್ಲೂ ಬೆಳೆಯಬೇಕು ಎಂದು ತಿಳಿಸಿದರು.ಕಾರ್ಯಕ್ರಮವನ್ನು ಸ್ವಾತಿ ತಂಬಾಕು ನಿರೂಪಿಸಿದರು. ಅಮೃತಾ ಜಿರಗಾಳಮಠ ಮತ್ತು ಸೀಮಾ ಚಲವಾದಿ ಪ್ರಾರ್ಥನಾ ಗೀತೆ ಹಾಡಿದರು.

ರಾಣಿ ತಿಮ್ಮಗೌಡರ್ ಸ್ವಾಗತಿಸಿದರು. ಮಲ್ಲಮ್ಮ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಡಾ.ರಮೇಶ್ ಎಂ.ಸೋನಕಾಂಬಳೆ (ಸಹಪ್ರಾಧ್ಯಾಪಕರು, ಸಮಾಜ ಕಾರ್ಯ ವಿಭಾಗ) ಹಾಗೂ ಡಾ.ಕಲಾವತಿ ಎಚ್.ಕಾಂಬಳೆ (ಸಹಾಯಕ ಪ್ರಾಧ್ಯಾಪಕರು, ಸಮಾಜ ಕಾರ್ಯ ವಿಭಾಗ) ಅತಿಥಿ ಉಪನ್ಯಾಸಕರಾದ ಡಾ.ಎಸ್.ಎಸ್.ಮೈತ್ರಿ, ಶ್ರೀನಾಥ್ ಪಾಟೀಲ್ ಉಪಸ್ಥಿತರಿದ್ದರು. ಅತಿಥಿಗಳ ಕಿರು ಪರಿಚಯವನ್ನು ರಾಣಿ ತಿಮ್ಮಗೌಡರ್ ನೀಡಿದರು. 

ಇಂದಿನ ವಯಸ್ಕರು ಮದ್ಯಪಾನ ಮತ್ತು ತಂಬಾಕು ಸೇವನೆಯಂತಹ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಪ್ರತಿ ದಿನ ಪ್ರಪಂಚಾದ್ಯಂತ ಸುಮಾರು 3500 ಜನರು ತಂಬಾಕು ಬಳಕೆಯಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಮಾನಸಿಕ ಆರೋಗ್ಯದ ಅರಿವು ಬೆಳೆಸುವುದು ಸಮಯದ ಅಗತ್ಯವಾಗಿದೆ.

-ಡಾ.ಮನೋವಿಜಯ ಬಿ.ಕಳಸಗೊಂಡ, ಮನೋಲಯ ಆಸ್ಪತ್ರೆಯ ಮುಖ್ಯಸ್ಥರು.

PREV
Read more Articles on

Recommended Stories

ದೀಪಾವಳಿ ಹಬ್ಬ : ಕೆಎಸ್ಸಾರ್ಟಿಸಿಯಿಂದ 2500 ಹೆಚ್ಚುವರಿ ಬಸ್‌
ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ತಮಿಳುನಾಡು ಮಾದರಿ ಪರಿಶೀಲನೆ : ಸಿದ್ದರಾಮಯ್ಯ