ಯುವನಿಧಿ ಯೋಜನೆಗೆ 979 ಮಂದಿ ನೋಂದಣಿ

KannadaprabhaNewsNetwork |  
Published : Jan 12, 2024, 01:45 AM IST
11ಕೆಆರ್ ಎಂಎನ್‌ 3.ಜೆಪಿಜಿಯುವನಿಧಿ ಲೋಗೋ | Kannada Prabha

ಸಾರಾಂಶ

ರಾಮನಗರ: ಕಾಂಗ್ರಸ್ ನೇತೃತ್ವದ ರಾಜ್ಯ ಸರ್ಕಾರದ 5 ನೇ ಗ್ಯಾರಂಟಿ ಯೋಜನೆಯಾದ ಯುವ ನಿಧಿ ಅಡಿಯಲ್ಲಿ ಫಲಾನುಭವಿಗಳ ಖಾತೆಗೆ ನಾಳೆ (ಜ.12) ನೇರ ನಗದು ವರ್ಗಾವಣೆ ಆಗಲಿದ್ದು, ಜಿಲ್ಲೆಯಲ್ಲಿ ಗುರುವಾರದವರೆಗೆ ಒಟ್ಟು 979 ಮಂದಿ ನಿರುದ್ಯೋಗಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ರಾಮನಗರ: ಕಾಂಗ್ರಸ್ ನೇತೃತ್ವದ ರಾಜ್ಯ ಸರ್ಕಾರದ 5 ನೇ ಗ್ಯಾರಂಟಿ ಯೋಜನೆಯಾದ ಯುವ ನಿಧಿ ಅಡಿಯಲ್ಲಿ ಫಲಾನುಭವಿಗಳ ಖಾತೆಗೆ ನಾಳೆ (ಜ.12) ನೇರ ನಗದು ವರ್ಗಾವಣೆ ಆಗಲಿದ್ದು, ಜಿಲ್ಲೆಯಲ್ಲಿ ಗುರುವಾರದವರೆಗೆ ಒಟ್ಟು 979 ಮಂದಿ ನಿರುದ್ಯೋಗಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ಡಿ.26 ರಿಂದ ಜ. 11 ರವರೆಗೆ ಚನ್ನಪಟ್ಟಣ ತಾಲೂಕಿನಲ್ಲಿ 211, ಕನಕಪುರ ತಾಲೂಕಿನಲ್ಲಿ 317, ಮಾಗಡಿ ತಾಲೂಕಿನಲ್ಲಿ 200 ಹಾಗೂ ರಾಮನಗರ ತಾಲೂಕಿನಲ್ಲಿ 251 ಮಂದಿ ಸೇರಿದಂತೆ ಒಟ್ಟು 979 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಈಗ ಹೆಸರು ನೋಂದಣಿ ಮಾಡಿಕೊಂಡಿರುವ ಎಲ್ಲರ ಖಾತೆಗೆ ನೇರ ನಗದು ವರ್ಗಾವಣೆ ಆಗುವುದಿಲ್ಲ. ಪದವಿ ಮುಗಿಸಿ ಆರು ತಿಂಗಳಾಗಿರುವ ಹಾಗೂ ಸೂಕ್ತ ದಾಖಲಾತಿಗಳನ್ನು ಒದಗಿಸಿ ನೋಂದಾಣಿ ಆದವರ ಖಾತೆಗೆ ಮಾತ್ರ ನೇರ ನಗದು ವರ್ಗಾವಣೆ ಆಗಲಿದೆ.

ಅಲ್ಲದೆ, ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಾಯಿತ ಅಭ್ಯರ್ಥಿಗಳು ಪ್ರತಿ ತಿಂಗಳು ತಾನು ನಿರುದ್ಯೋಗಿ ಎಂದು ಕಡ್ಡಾಯವಾಗಿ ಸ್ವಯಂ ದೃಢೀಕರಣ ಮಾಡಬೇಕು. ಇಲ್ಲದಿದ್ದರೆ ನೇರ ನಗದು ವರ್ಗಾವಣೆ ಸ್ಥಗಿತಗೊಳ್ಳಲಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಎಂ.ಆರ್ .ಗೋವಿಂದರಾಜ್ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

ಜಿಲ್ಲೆಯಲ್ಲಿ 2023 ರಲ್ಲಿ ಪದವಿ ಅಥವಾ ಡಿಪ್ಲೋಮಾ ತೇರ್ಗಡೆಯಾದ ಇನ್ನೂ ಕೆಲಸಕ್ಕೆ ಸೇರದ, ಸ್ವಯಂ ಉದ್ಯೋಗವಿಲ್ಲದ ಅಥವಾ ಬೇರೆ ಕೋರ್ಸ್‌ಗಳಿಗೆ ದಾಖಲಾಗದ

ನಿರುದ್ಯೋಗಿಗಳು ಯುವನಿಧಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದ್ದು, ಪದವಿ ಮುಗಿಸಿದವರಿಗೆ ಮಾಸಿಕ 3000 ರು. ಮತ್ತು ಡಿಪ್ಲೋಮಾ ಮಾಡಿದವರಿಗೆ 1500 ರು. ನೀಡಲಾಗುತ್ತದೆ. ಈ ಕಾರ್ಯಕ್ಕೆ ನಾಳೆ (ಜ.12) ರಾಷ್ಟ್ರೀಯ ಯುವ ದಿನ ಹಾಗೂ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಶಿವಮೊಗ್ಗ ನಗರದ ಫ್ರೀಡಂ ಪಾರ್ಕಿನಲ್ಲಿ ಧಿಕೃತವಾಗಿ ಚಾಲನೆ ದೊರೆಯುತ್ತಿದೆ.

11ಕೆಆರ್ ಎಂಎನ್‌ 3.ಜೆಪಿಜಿ

ಯುವನಿಧಿ ಲೋಗೋ

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ