
ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ।ಇಂದಿರಾಗಾಂಧಿ ಬಡಾವಣೆ ಹಾಗೂ ಹಕ್ಕಿಪಿಕ್ಕಿ ಜನಾಂಗದ ಕಾಲೋನಿಗೆ ಭೇಟಿ
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಈವರೆಗೆ ಶೇ.98.16 ರಷ್ಟು ಮತದಾರರಿಗೆ ಎನುಮೆರೇಶನ್ ಫಾರಂ (ಗಣತಿ ನಮೂನೆ) ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ತಿಳಿಸಿದರು.
ಬುಧವಾರ ಚಿಕ್ಕಮಗಳೂರು ನಗರದ ಇಂದಿರಾಗಾಂಧಿ ಬಡಾವಣೆ ಹಾಗೂ ಹಕ್ಕಿಪಿಕ್ಕಿ ಜನಾಂಗದ ಕಾಲೋನಿಗೆ ಭೇಟಿ ನೀಡಿ ಎಸ್‌ಐಆರ್ ಕಾರ್ಯ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು ಜಿಲ್ಲೆಯಲ್ಲಿರುವ ಒಟ್ಟು 9.60 ಲಕ್ಷ ಮತದಾರರ ಪಟ್ಟಿಯ ಆಧಾರದ ಮೇಲೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಣೆ ನಡೆಯುತ್ತಿದೆ. ಬುಧವಾರದ ಮಾಹಿತಿ ಪ್ರಕಾರ ಈಗಾಗಲೇ ಜಿಲ್ಲೆಯ ಶೇ.98.16ರಷ್ಟು ಮತದಾರರಿಗೆ ಅಂದರೆ ಒಟ್ಟು 9,42,563 ಜನರಿಗೆ ಗಣತಿ ನಮೂನೆ ತಲುಪಿಸಲಾಗಿದೆ. ಇನ್ನುಳಿದ 17,668 ಗಣತಿ ನಮೂನೆ ವಿತರಿಸಲು ಬಿಎಲ್‌ಒಗಳು ಶ್ರಮಿಸುತ್ತಿದ್ದು, ಭೌಗೋಳಿಕ ವಾಗಿ ಅತ್ಯಂತ ದೂರದಲ್ಲಿರುವ ಮನೆಗಳಿಗೂ ಸಹ ಖುದ್ದಾಗಿ ತೆರಳಲಾಗುತ್ತಿದೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರೊಂದಿಗೂ ಸಭೆ ನಡೆಸಿ ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ವಿವರಿಸಿದರು.ಶೇ.54ಕ್ಕೂ ಹೆಚ್ಚು ಡಿಜಿಟಲೀಕರಣ ಪೂರ್ಣ: ಕಳೆದ ಒಂದು ವಾರದಿಂದ ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆ ಗಳನ್ನು ಸಂಗ್ರಹಿಸಿ ಬಿಎಲ್‌ಒ ಆಪ್ ಮೂಲಕ ಡಿಜಿಟಲೀಕರಣಗೊಳಿಸುವ ಕಾರ್ಯ ವೇಗವಾಗಿ ನಡೆಯುತ್ತಿದೆ. ಇಲ್ಲಿವರೆಗೆ ಶೇ. 54 ರಷ್ಟು ಅಂದರೆ 5,21,412 ಮತದಾರರ ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ತಿಳಿಸಿದರು.
ಸ್ವೀಪ್ ಚಟುವಟಿಕೆಗಳ ಭಾಗವಾಗಿ ಇಂದಿರಾಗಾಂಧಿ ಬಡಾವಣೆ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ನಿವಾಸಿಗಳ ಮನೆಗಳಿಗೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಭೇಟಿ ನೀಡಿದರು.
ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜು ಮೊದಲಾದವರಿದ್ದರು.
ಡಿಜಿಟಲೀಕರಣ ಪೂರ್ಣಗೊಳಿಸಿದ ಬಿಎಲ್‌ಒಗಳಿಗೆ ಸನ್ಮಾನ
ಒಂದು ಸಾವಿರಕ್ಕೂ ಹೆಚ್ಚು ಮತದಾರರಿರುವ ಮತಗಟ್ಟೆಗಳಲ್ಲಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಡಿಜಿಟೈಸೇಶನ್ ಕಾರ್ಯ ಪೂರ್ಣ ಗೊಳಿಸಿದ ಬಿಎಲ್‌ಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿಶೇಷ ಚೇತನರಾದ ಯಲ್ಲಮ್ಮ ಅವರಿಗೆ ಹಂಚಿಕೆ ಮಾಡಿದ ಮತಗಟ್ಟೆ ಹಿಂದುಳಿದ ಪ್ರದೇಶ. ಇಂತಹ ಅನೇಕ ಸವಾಲುಗಳ ನಡುವೆಯೂ ಅವರು ಯಾವುದೇ ಹಂತದಲ್ಲೂ ತಾಲೂಕು ಕಚೇರಿ ಸಿಬ್ಬಂದಿಯ ಸಹಾಯ ಅವಲಂಬಿಸದೆ, ಸಂಪೂರ್ಣ ಡಿಜಿಟೈಸೇಶನ್ ಹಾಗೂ ಎಸ್‌ಐಆರ್ ಕಾರ್ಯವನ್ನು ಸ್ವತಃ ಜವಾಬ್ದಾರಿ. ಸಮಯೋಚಿತ ಮತ್ತು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ನಟೇಶ್, ತಹಸೀಲ್ದಾರರಾದ ವಿನಾಯಕ ಸಾಗರ್, ರೇಷ್ಮಾ ಶೆಟ್ಟಿ, ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜು ಇದ್ದರು.