ಎಂ.ಸಿ.ಸಿ.ಬ್ಯಾoಕಿನ ಬೆಳ್ಮಣ್ ಶಾಖೆಯಲ್ಲಿ 9ನೇ ಎಟಿಎಮ್ ಉದ್ಘಾಟನೆ

KannadaprabhaNewsNetwork |  
Published : Aug 10, 2025, 01:37 AM IST
ಎಂಸಿಸಿ ಬ್ಯಾಂಕಿನ ಬೆಳ್ಮಣ್‌ ಶಾಖೆಯ ಎಟಿಎಂ ಉದ್ಘಾಟನಾ ಸಮಾರಂಭ  | Kannada Prabha

ಸಾರಾಂಶ

ಎಂಸಿಸಿ ಬ್ಯಾಂಕ್ ಲಿಮಿಟೆಡ್ ತನ್ನ ಗ್ರಾಹಕ ಸೇವೆ ಮತ್ತು ಬ್ಯಾಂಕಿಂಗ್ ಶ್ರೇಷ್ಟತೆಯ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲಾಗಿ ಇತ್ತೀಚೆಗೆ ಬೆಳ್ಮಣ್ ಶಾಖೆಯಲ್ಲಿ ತನ್ನ 9 ನೇ ಎಟಿಎಂನ್ನು ತೆರೆದಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಎಂಸಿಸಿ ಬ್ಯಾಂಕ್ ಲಿಮಿಟೆಡ್ ತನ್ನ ಗ್ರಾಹಕ ಸೇವೆ ಮತ್ತು ಬ್ಯಾಂಕಿಂಗ್ ಶ್ರೇಷ್ಟತೆಯ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲಾಗಿ ಇತ್ತೀಚೆಗೆ ಬೆಳ್ಮಣ್ ಶಾಖೆಯಲ್ಲಿ ತನ್ನ 9 ನೇ ಎಟಿಎಂನ್ನು ತೆರೆದಿದೆ.

ಬೆಳ್ಮಣ್‌ನ ಮಾನ್ಯ ಡೆವಲಪರ್ಸ್ ಮತ್ತು ಹೋಟೆಲ್ ಸೂರಜ್ ಇನ್‌ ಮಾಲೀಕ ಶೋಧನ್ ಕುಮಾರ್ ಶೆಟ್ಟಿ ಅವರು ಎಟಿಎಂನ್ನು ಉದ್ಘಾಟಿಸಿದರು.

ಬೆಳ್ಮಣ್‌ನ ಸೇಂಟ್ ಜೋಸೆಫ್ ಚರ್ಚ್‌ ಧರ್ಮಗುರು ರೆ.ಫಾ. ಫ್ರೆಡ್ರಿಕ್ ಮಸ್ಕರೇನ್ಹಸ್ ಅವರು ಆಶೀರ್ವಚನದಲ್ಲಿ, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೋಲಿಸಬಹುದಾದ ಬ್ಯಾಂಕಿಂಗ್ ಮಾನದಂಡಗಳನ್ನು ಕಾಯ್ದುಕೊಳ್ಳಲು ಮತ್ತು ಗ್ರಾಹಕಸ್ನೇಹಿ ಸೇವೆಯನ್ನು ನೀಡುತ್ತಿರುವುದಕ್ಕೆ ಎಂಸಿಸಿ ಬ್ಯಾಂಕ್‌ನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಂಸಿಸಿ ಬ್ಯಾಂಕ್ ಅಧ್ಯಕ್ಷ, ಸಹಕಾರ ರತ್ನ ಅನಿಲ್ ಲೋಬೊ ಮಾತನಾಡಿ, ಬೆಳ್ಮಣ್‌ ಶಾಖೆಯಲ್ಲಿ 5 ಕೋಟಿ ರು. ವಹಿವಾಟು ದಾಟಿದೆ. ಬ್ರಹ್ಮಾವರ ಶಾಖೆ ಒಂದು ವರ್ಷದೊಳಗೆ 10 ಕೋಟಿ ರು. ವಹಿವಾಟು ಸಾಧಿಸಿರುವುದು ಮತ್ತು ಬೈಂದೂರು ಶಾಖೆ ಇತ್ತೀಚೆಗೆ 100 ಕ್ಕೂ ಹೆಚ್ಚು ಹೊಸ ಖಾತೆಗಳೊಂದಿಗೆ ತೆರೆದಿರುವುದು ಇತರ ಶಾಖೆಗಳಲ್ಲಿನ ಗಮನಾರ್ಹ ಬೆಳವಣಿಗೆಯನ್ನು ಶ್ಲಾಘಿಸಿದರು.

ಎಟಿಎಂನಿoದ ಮೊದಲ ನಗದು ಹಿಂಪಡೆಯುವಿಕೆಯನ್ನು ಫ್ರೆಡ್ರಿಕ್ ವಿನ್ಸೆಂಟ್ ಅಂದ್ರಾದೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಫ್ರಾನ್ಸಿಸ್ ಡಿ ಸೋಜಾ, ಸೇಂಟ್ ಜೋಸೆಫ್ ಅರ್ಥ್ ಮೂವರ್ಸ್ ಮತ್ತು ಸೇಂಟ್ ಜೋಸೆಫ್ ಪ್ಯೂಯೆಲ್ಸ್ ಮಾಲೀಕ ಡೊಮಿನಿಕ್ ಆಂದ್ರಾದೆ, ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕರಾದ ಡಾ. ಫ್ರೀಡಾ ಡಿಸೋಜಾ, ಡಾ. ಜೆರಾಲ್ಡ್ ಪಿಂಟೊ, ಮಹಾ ಪ್ರಬಂಧಕ ಸುನಿಲ್ ಮಿನೇಜಸ್, ಉಪ ಮಹಾಪ್ರಬಂಧಕ ರಾಜ್ ಎಫ್. ಮಿನೇಜಸ್ ಮತ್ತಿತರರಿದ್ದರು. ಬೆಳ್ಮಣ್‌ ಶಾಖೆಯ ಶಾಖಾ ವ್ಯವಸ್ಥಾಪಕಿ ಶೈನಿ ಲಸ್ರಾದೊ ಸ್ವಾಗತಿಸಿದರು. ಡೀಲ್ ಮತ್ತು ಆಲ್ವಿನ್ ಡಿಸೋಜಾ ಪ್ರಾರ್ಥಿಸಿದರು. ರಿತೇಶ್‌ ಡಿಸೋಜಾ ನಿರೂಪಿಸಿ ವಂದಿಸಿದರು.

-----------------

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ