ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಅ.4ರಿಂದ ಶ್ರೀರಂಗಪಟ್ಟಣ ದಸರಾ: ಎನ್.ಚಲುವರಾಯಸ್ವಾಮಿ

KannadaprabhaNewsNetwork | Published : Aug 14, 2024 12:49 AM

ದಸರಾದಲ್ಲಿ ಕಾರ್ಯಕ್ರಮಗಳು ಜನಾಕರ್ಷಿತವಾಗಿರಲಿ ಹಾಗೂ ಯಾವುದೇ ಲೋಪವಿಲ್ಲದಂತೆ ವಿಜೃಂಭಣೆಯಿಂದ ಆಚರಿಸಬೇಕು. ವಿವಿಧ ಸಮಿತಿಗಳನ್ನು‌ ರಚಿಸಿ ಯೋಜನೆಗಳನ್ನು ಸಿದ್ಧಪಡಿಸಿ ಉತ್ತಮವಾಗಿ ಕಾರ್ಯಕ್ರಮಗಳು ಮೂಡಿ ಬರಬೇಕು. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಐತಿಹಾಸಿಕ‌ ಶ್ರೀರಂಗಪಟ್ಟಣ ದಸರಾವನ್ನು ಅಕ್ಟೋಬರ್ 4ರಿಂದ ಮೂರು ದಿನಗಳ ಕಾಲ ಅಥವಾ 5 ದಿನಗಳ ಕಾಲ ಆಚರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು.

ಮಂಗಳವಾರ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಪೂರ್ವಸಿದ್ಧತಾ ಸಭೆ ನಡೆಸಿ ಮಾತನಾಡಿ, ದಸರಾದಲ್ಲಿ ಕಾರ್ಯಕ್ರಮಗಳು ಜನಾಕರ್ಷಿತವಾಗಿರಲಿ ಹಾಗೂ ಯಾವುದೇ ಲೋಪವಿಲ್ಲದಂತೆ ವಿಜೃಂಭಣೆಯಿಂದ ಆಚರಿಸಬೇಕು. ವಿವಿಧ ಸಮಿತಿಗಳನ್ನು‌ ರಚಿಸಿ ಯೋಜನೆಗಳನ್ನು ಸಿದ್ಧಪಡಿಸಿ ಉತ್ತಮವಾಗಿ ಕಾರ್ಯಕ್ರಮಗಳು ಮೂಡಿ ಬರಬೇಕು. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಿ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ ದಸರಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಲು ಸ್ವಾಗತ, ವೇದಿಕೆ, ಸಾಂಸ್ಕೃತಿಕ ಸೇರಿದಂತೆ ವಿವಿಧ ಸಮಿತಿ ರಚಿಸಲಾಗಿದೆ. ಕ್ರೀಡಾ, ಯೋಗ, ಮಕ್ಕಳ ದಸರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ನುಡಿದರು.

ಸಭೆಯಲ್ಲಿ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ಎಚ್‌.ಟಿ. ಮಂಜು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸಾಹಿತ್ಯ ಸಮ್ಮೇಳನಕ್ಕೆ ಮಾಧ್ಯಮ ಸಮನ್ವಯ ಸಮಿತಿ ರಚನೆ

ಮಂಡ್ಯ:ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಮಾಧ್ಯಮ ಸಮನ್ವಯ ಸಮಿತಿ ರಚಿಸಲಾಗಿದೆ.

ಸಮಿತಿ ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಉಪಾಧ್ಯಕ್ಷರಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಗದ ಅಧ್ಯಕ್ಷ ಬಿ.ಪಿ.ಪ್ರಕಾಶ್ , ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ನಿರ್ಮಲ ಸದಸ್ಯ ಕಾರ್ಯದರ್ಶಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಸಂಚಾಲಕರಾಗಿ ನೇಮಿಸಲಾಗಿದೆ.ಸದಸ್ಯರಾಗಿ ನೆಲ್ಲಿಗೆರೆ ಬಾಲು, ರಾಘವೇಂದ್ರ, ಚಂದ್ರು ಮೂಡ್ಯ, ರಘುನಂದನ್ , ಆಶಾಲತಾ ಪುಟ್ಟೇಗೌಡ, ಎಂ.ಎಸ್ .ವೀಣಾ, ಎಸ್ .ಚೇತನ್ , ಹರ್ಷ, ಮಧುಶ್ರೀ, ಸುಧಾಮ, ಮಮತಾ, ಜಿ.ಎನ್ .ಲಲಿತ, ಹರೀಶ್ ಕುಮಾರ್ , ನವೀನ್ , ಸಿದ್ದು ಆರ್ ಜೆ.ಹಳ್ಳಿ, ಆನಂದ್ , ಪ್ರವೀಣ್ , ಕೆ.ಸಿ.ಮಂಜುನಾಥ್ , ರಾಘವೇಂದ್ರ, ಶಶಿಕುಮಾರ್ , ಕೆ.ಎಸ್ .ಸುಬ್ರಹ್ಮಣ್ಯ ಬಾಬು, ಟಿ.ಎಲ್ .ನಾಗರಾಜು, ಎ.ಎಲ್ .ಬಸವೇಗೌಡ, ಶಿವಕುಮಾರ್ , ಎಂ.ಎನ್ .ಶಿವರಾಮು, ಪ್ರೊ.ನಾರಾಯಣಗೌಡ, ಸುರೇಶ್ ಶಡಶ್ಯಾಳು, ಶಿವಮೂರ್ತಿ, ರೋಹಿತ್ , ಅರಸಯ್ಯ ನೇಮಕಗೊಂಡಿದ್ದಾರೆ.