ವಿಘ್ನೇಶ್ ಎಂ. ಭೂತನಕಾಡು
ಅಂಜಪರವಂಡ ಬೋಪಯ್ಯ ಸುಬ್ಬಯ್ಯ ಅವರು ಭಾರತದ ಖ್ಯಾತ ಮಾಜಿ ಫೀಲ್ಡ್ ಹಾಕಿ ಗೋಲ್ಕೀಪರ್ ಮತ್ತು ತರಬೇತುದಾರರಾಗಿದ್ದಾರೆ. ಇವರು ಭಾರತೀಯ ಹಾಕಿ ಇತಿಹಾಸದಲ್ಲಿ ತಮ್ಮ ಅತ್ಯುತ್ತಮ ಗೋಲ್ಕೀಪಿಂಗ್ ಕೌಶಲ್ಯದಿಂದ ಗುರುತಿಸಿಕೊಂಡಿದ್ದಾರೆ.
ಸುಬ್ಬಯ್ಯ ಅವರು 1988 ರಿಂದ 1998 ರವರೆಗೆ ಸುಮಾರು 11 ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿ, 285ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಸುಬ್ಬಯ್ಯ ಅವರು 1992 (ಬಾರ್ಸಿಲೋನಾ) ಮತ್ತು 1996 (ಅಟ್ಲಾಂಟಾ) ರ ಎರಡು ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಹಾಗೂ 1994ರ ವಿಶ್ವಕಪ್ನಲ್ಲಿ ಭಾರತದ ಗೋಲ್ಕೀಪರ್ ಆಗಿ ದೇಶವನ್ನು ಪ್ರತಿನಿಧಿಸಿದ್ದರು. ಮೂರು ಬಾರಿ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸಿದ್ದರು. 1990 ಮತ್ತು 1994 ರಲ್ಲಿ ಬೆಳ್ಳಿ ಪದಕ ಹಾಗೂ 1998ರ ಬ್ಯಾಂಕಾಕ್ ಏಷ್ಯನ್ ಗೇಮ್ಸ್ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದರು.1994ರ ಸಿಡ್ನಿ ವಿಶ್ವಕಪ್ನಲ್ಲಿ ಅರ್ಜೆಂಟೀನಾ ವಿರುದ್ಧ ಅವರು ಮಾಡಿದ ಅದ್ಭುತ ಸೇವ್ಗಳು ಮತ್ತು 1995ರ ಸುಲ್ತಾನ್ ಅಜ್ಲಾನ್ ಶಾ ಟೂರ್ನಿಯಲ್ಲಿ ಜರ್ಮನಿ ವಿರುದ್ಧದ ಟೈ-ಬ್ರೇಕರ್ನಲ್ಲಿ ತೋರಿದ ಸಾಹಸ ಭಾರತ ಚಾಂಪಿಯನ್ ಆಗಲು ಪ್ರಮುಖರಾಗಿದ್ದರು. ಕ್ರೀಡಾ ಕ್ಷೇತ್ರದಲ್ಲಿನ ಅವರ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರ ಅವರಿಗೆ 1997 ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರದಿಂದ 2003 ರಲ್ಲಿ ಏಕಲವ್ಯ ಪ್ರಶಸ್ತಿ ಲಭಿಸಿದೆ. ಮಂಗಳೂರು ವಿಶ್ವವಿದ್ಯಾನಿಲಯವು ಅವರಿಗೆ ಗೌರವಾನ್ವಿತ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿದೆ.
ಭಾರತದಲ್ಲಿ ಫ್ಯಾಶನ್ ಉದ್ಯಮವು ಇನ್ನೂ ಶೈಶವಾವಸ್ಥೆಯಲ್ಲಿದ್ದ ಕಾಲದಲ್ಲೇ ಪ್ರಸಾದ್ ಬಿದ್ದಪ್ಪ ಅವರು ಈ ಕ್ಷೇತ್ರಕ್ಕೆ ಕಾಲಿಟ್ಟರು. ಭಾರತೀಯ ಫ್ಯಾಶನ್ ರಂಗವನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಭಾರತದ ಅತ್ಯಂತ ಯಶಸ್ವಿ ಹಾಗೂ ಪ್ರತಿಷ್ಠಿತ ಸೂಪರ್ ಮಾಡೆಲ್ಗಳನ್ನು ರೂಪಿಸಿದ ಶ್ರೇಯಸ್ಸು ಇವರದ್ದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಅನೇಕ ಪ್ರತಿಭೆಗಳಿಗೆ ಇವರೇ ದಾರಿದೀಪವಾಗಿದ್ದರು.
ಕೊಡಗು ಜಿಲ್ಲೆಗೆ ಕೊಡುಗೆ, ನಂಟು: ಜಾಗತಿಕ ಮಟ್ಟದಲ್ಲಿ ಎಷ್ಟೇ ದೊಡ್ಡ ಯಶಸ್ಸು ಗಳಿಸಿದರೂ, ಪ್ರಸಾದ್ ಬಿದ್ದಪ್ಪ ಅವರು ತಮ್ಮ ಬೇರುಗಳನ್ನು, ಅಂದರೆ ಕೊಡಗನ್ನು ಎಂದಿಗೂ ಮರೆತಿಲ್ಲ. ಕೊಡಗಿನ ಸಂಸ್ಕೃತಿ, ಕಾಫಿ ತೋಟಗಳು ಮತ್ತು ಪ್ರಕೃತಿಯ ಮೇಲಿನ ಪ್ರೀತಿಯನ್ನು ಹಲವು ಸಂದರ್ಭಗಳಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಕೊಡಗಿನ ಯುವಜನತೆಗೆ ಫ್ಯಾಶನ್, ಮೀಡಿಯಾ ಮತ್ತು ಕ್ರಿಯೇಟಿವ್ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳ ಕುರಿತು ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ.