ಕನ್ನಡಪ್ರಭ ವಾರ್ತೆ ವಿಜಯಪುರ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ಬಾಲಕರ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 121 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿತು. 122 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ತಂಡ 20 ಓವರ್‌ಗಳಲ್ಲಿ ತನ್ನ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 105 ರನ್‌ಗಳಿಗೆ ಸೋಲ ಅನುಭವಿಸಿತು. ಇದರೊಂದಿಗೆ ಕರ್ನಾಟಕ ತಂಡ ಭಾರೀ ಅಂತರದ ಗೆಲುವು ದಾಖಲಿಸಿತು.
ಕರ್ನಾಟಕ ತಂಡದ ಪರವಾಗಿ ಆದರ್ಶ್ ರಾಠೋಡ್ 10 ಎಸೆತಗಳಲ್ಲಿ 27 ರನ್‌ಗಳ ಆಕರ್ಷಕ ಇನ್ನಿಂಗ್ಸ್ ಆಡಿದರು. ಅರ್ಪಿತ ನಾಗಾನಂದ 13 ಎಸೆತಗಳಲ್ಲಿ 22 ರನ್‌ಗಳು ಹಾಗೂ ಯೆಶ್ ಪೋರ್ವಾಲ್ 14 ರನ್ ಹಾಗೂ ಜಗದೀಶ್ ಕಂಭೋಗಿ 14 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಕರ್ನಾಟಕ ತಂಡದ ಬೌಲರ್‌ಗಳಲ್ಲಿ ನಮನ ಪವಾರ್ 3 ಓವರ್‌ಗಳಲ್ಲಿ 3 ವಿಕೆಟ್ ಪಡೆದರು, ಜಗದೀಶ್ ಕಂಭಾಗಿ 3 ಓವರ್‌ಗಳಲ್ಲಿ 1 ವಿಕೆಟ್ ಪಡೆದರೆ, ಅರ್ಪಿತ ನಾಗಾನಂದ 3 ಓವರ್‌ನಲ್ಲಿ 1 ವಿಕೆಟ್ ಪಡೆದು ಗಮನ ಸೆಳೆದರು. ವಿಕಾಸ್ ಪಾಟೀಲ್ 3 ಓವರಗಳಲ್ಲಿ 1ವಿಕೆಟ್ ಪಡೆದು 1 ಓವರ್ ಮೇಡನ್ ಹಾಕಿದರು.ಬಾಲಕಿಯರಿಗೂ ಜಯ:
ಕರ್ನಾಟಕದ ಬಾಲಕಿಯರ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿ ಕೊಂಡು ನಿಗದಿತ 20 ಓವರ್‌ಗಳಲ್ಲಿ 139 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿತು. 140 ರನ್‌ಗಳ ಗುರಿ ಬೆನ್ನತ್ತಿದ ದಿಯುದಮನ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೆಲವಲ 79 ರನ್‌ಗಳಿಗೆ ಪತನ ಗೊಂಡಿತು. ಇದರಿಂದ ಕರ್ನಾಟಕ ಬಾಲಕಿಯರು ಬಾರಿ ಅಂತರದ ಗೆಲುವು ದಾಖಲಿಸಿದರು.ಈ ಭರ್ಜರಿ ಗೆಲುವಿಗೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರು ಜಾಫರ್ ಅಂಗಡಿ ಹಾಗೂ ಗೌರವಾಧ್ಯಕ್ಷ ಡಾ.ಅಶೋಕ್ ಕುಮಾರ್ ಜಾಧವ್, ಚಾಂದ್ ಮುಕಾದಮ, ಸಲೀಮ್ ಬೆಪಾರಿ, ಶ್ರೀಕಾಂತ್ ಕಾಖಂಡಕಿ ಹಾಗೂ ಪದಾಧಿಕಾರಿಗಳು ಕರ್ನಾಟಕ ತಂಡಕ್ಕೆ ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.