ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಾಲುಮತ ಸಮಾಜದ ಮುಖಂಡರು ಮಾತನಾಡಿ, ಅಯೋಧ್ಯೆ ರಾಮಮಂದಿರ ಪ್ರತಿಷ್ಠಾಪನೆ ಸಂದರ್ಭದಲ್ಲಿ ಪಗಡಬಂಡಿ ಗ್ರಾಮದ 40ಕ್ಕೂ ಹೆಚ್ಚು ಮನೆಯಿಂದ ಪವಿತ್ರ ಉಣ್ಣೆಯನ್ನು ಸಂಗ್ರಹಿಸಿ ಕೈಯಿಂದಲೇ ನೇಕರಾರು 3 ದಿನಗಳ ಕಾಲ ಈ ಕರಿ ಕಂಬಳಿಯನ್ನು ನೇಯ್ದು ಈಶ್ವರಪ್ಪನವರ ಮೂಲಕ ಶ್ರೀ ರಾಮಲಲ್ಲಾನಿಗೆ ಸಮರ್ಪಿಸುತ್ತಿದ್ದೇವೆ ಎಂದರು.
2015ರಲ್ಲಿ ಪ್ರಧಾನಿ ಮೋದಿ ಅವರು ಚಿತ್ರದುರ್ಗಕ್ಕೆ ಆಗಮಿಸಿದಾಗ ಅವರಿಗೆ ಇದೇ ರೀತಿಯ ಕಂಬಳಿಯನ್ನು ನೀಡಿದ್ದೆವು, ನಮಗೆ ಯಾವುದೇ ರಾಜಕೀಯವಿಲ್ಲ. ಆದರೆ, ಈ ಪವಿತ್ರ ಕಂಬಳಿಯಿಂದ ದೇಶಕ್ಕೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ, ನಮ್ಮ ಸಮಾಜದ ಎಲ್ಲರ ಅಪೇಕ್ಷೆಯಂತೆ ಈ ಕಂಬಳಿಯನ್ನು ನೀಡುತ್ತಿದ್ದೇವೆ ಎಂದು ಪ್ರಮುಖರಾದ ಎಂ.ವಿ.ಶಾಂತಕುಮಾರ್ ತಿಳಿಸಿದರು.ಮಾಜಿ ಸಚಿವ ಈಶ್ವರಪ್ಪ ಅವರು ಈ ಕಂಬಳಿಯನ್ನು ಸ್ವೀಕರಿಸಿ ಪೋಸ್ಟ್ ಮೂಲಕ ಅಯೋಧ್ಯೆಗೆ ಕಳುಹಿಸಿವುದಾಗಿ ಭರವಸೆ ನೀಡಿದರು.
- - -ಬಾಕ್ಸ್ ಚೌಡೇಶ್ವರಿ ದೇಗುಲ ಆವರಣ ಸ್ವಚ್ಛತೆ:ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯ ರಾಮ ಮಂದಿರ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ದೇವಸ್ಥಾನಗಳ ಸ್ವಚ್ಚಗೊಳಿಸುವಂತೆ ಕರೆ ನೀಡಿದ್ದು, ಈ ಹಿನ್ನೆಲೆ ಮಂಗಳವಾರ ಶಿವಮೊಗ್ಗದ ಎನ್.ಟಿ. ರಸ್ತೆಯ ಭಾರತಿ ಕಾಲೋನಿಯ ಚೌಡೇಶ್ವರಿ ದೇವಸ್ಥಾನ ಆವರಣವನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಸ್ವಚ್ಛಗೊಳಿಸಿದರು.
- - - -16ಎಸ್‌ಎಂಜಿಕೆಪಿ05:ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಾಲುಮತ ಸಮಾಜದ ಮುಖಂಡರು ಮಂಗಳವಾರ ಆಯೋಧ್ಯೆಯ ಶ್ರೀ ರಾಮಲಲ್ಲಾನಿಗೆ ಅರ್ಪಿಸಲು ಮಂಗಳವಾರ ಗದ್ದಿಗೆ ಕಂಬಳಿಯನ್ನು ಮಾಜಿ ಸಚಿವ ಈಶ್ವರಪ್ಪನವರಿಗೆ ನೀಡಿದರು.
- - -