ಗುಂಡ್ಲುಪೇಟೆಯಲ್ಲಿ. ಕಂದಕಕ್ಕೆ ಬಿದ್ದು ಕುರುಡು ಕಾಡಾನೆ ಸಾವು

KannadaprabhaNewsNetwork |  
Published : Oct 04, 2024, 01:01 AM IST
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದಲ್ಲಿ | Kannada Prabha

ಸಾರಾಂಶ

ಒಂದು ಕಣ್ಣು ಪೂರ್ಣ ಕುರುಡು, ಮತ್ತೊಂದು ಕಣ್ಣು ಮುಕ್ಕಾಲು ಕುರುಡಾಗಿದ್ದ ಕಾಡಾನೆಯೊಂದು ಆನೆ ಕಂದಕಕ್ಕೆ ಬಿದ್ದು, ಲಿವರ್‌ ಸಿರೋಸಿಸ್‌ಗೆ ಸಾವನ್ನಪ್ಪಿದ ಘಟನೆ ಗುಂಡ್ಲುಪೇಟೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಒಂದು ಕಣ್ಣು ಪೂರ್ಣ ಕುರುಡು, ಮತ್ತೊಂದು ಕಣ್ಣು ಮುಕ್ಕಾಲು ಕುರುಡಾಗಿದ್ದ ಕಾಡಾನೆಯೊಂದು ಆನೆ ಕಂದಕಕ್ಕೆ ಬಿದ್ದು, ಲಿವರ್‌ ಸಿರೋಸಿಸ್‌ಗೆ ಸಾವನ್ನಪ್ಪಿದ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದಲ್ಲಿ ನಡೆದಿದೆ.

ಸುಮಾರು ೫೦ ವರ್ಷ ವಯಸ್ಸಿನ ಗಂಡಾನೆ ಎಡಗಣ್ಣು ಪೂರ್ಣ ಕುರುಡು, ಬಲಗಣ್ಣು ಮುಕ್ಕಾಲು ಭಾಗ ಕುರುಡಾಗಿತ್ತು. ಆಹಾರ ಅರಸಿ ರೈತರ ಜಮೀನಿಗೆ ತೆರಳುವ ಸಮಯದಲ್ಲಿ ಆನೆ ಓಂಕಾರ ವಲಯದ ಕುರುಬರಹುಂಡಿ ಸೆಕ್ಷನ್‌ ೧ರ ಬೋಳೇಗೌಡನಕಟ್ಟೆ ಬೀಟ್‌ನ ಮಲ್ಲಹಳ್ಳಿ ದನದ ದಾರಿಯ ಕಂದಕಕ್ಕೆ ಬಿದ್ದಿದೆ ಎಂದು ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್‌ ಕುಮಾರ್‌ ತಿಳಿಸಿದ್ದಾರೆ. ಆನೆ ಕಂದಕದಲ್ಲಿ ಬಿದ್ದ ವಿಷಯ ಅರಿತ ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಪ್ರಭಾಕರನ್‌, ಎಸ್‌. ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಬಳಿಕ ಪಶು ವೈದ್ಯ ಡಾ.ವಾಸೀಂ ಮಿರ್ಜಾ ಶವ ಪರೀಕ್ಷೆ ನಡೆಸಿದ ಬಳಿಕ ಆನೆ ಹೂಳಲಾಗಿದೆ ಎಂದು ಹೇಳಿದ್ದಾರೆ.

ಸಾವನ್ನಪ್ಪಿದ ಕಾಡಾನೆಗೆ ಒಂದು ಕಣ್ಣು ಸಂಪೂರ್ಣ ಕುರುಡಾಗಿತ್ತು. ಮತ್ತೊಂದು ಕಣ್ಣು ಕೂಡ ಮುಕ್ಕಾಲು ಭಾಗದಷ್ಟು ಕ್ಯಾಟ್ರಕ್ಟ್‌ ಆಗಿತ್ತು. ಆನೆಗೆ ಲೀವರ್‌ ಸಿರೋಸಿಸ್‌ ಆಗಿತ್ತು ಅಲ್ಲದೆ ಕಾಡಿಯೋ ರೆಸ್ಪಕ್ಟ್ರಿಯೋದಿಂದ ಬಳಲುತ್ತಿತ್ತು ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ