ಮೈಮೇಲೆ, ಜನನಾಂಗದ ಮೇಲೆ ಕೆಂಪು ಇರುವೆ, ಬಿಟ್ಟು ವಿಕೃತಿ ವೀಡಿಯೋ ವೈರಲ್ದಾವಣಗೆರೆ: ಅಸಭ್ಯ ವರ್ತನೆ ಮಾಡುತ್ತಿದ್ದ, ಕಳವು ಮಾಡಿದ್ದಾನೆಂಬ ವಿಚಾರಕ್ಕೆ ಅಪ್ರಾಪ್ತ ಬಾಲಕನೊಬ್ಬನಿಗೆ ಕಿಡಿಗೇಡಿ ಯುವಕರು ಅಡಕೆ ಮರಕ್ಕೆ ಕಟ್ಟಿ ಹಾಕಿ, ಚಿತ್ರಹಿಂಸೆ ನೀಡಿದ ಘಟನೆ ಚನ್ನಗಿರಿ ತಾ. ನಲ್ಲೂರು ಗ್ರಾಮದಲ್ಲಿ ವರದಿಯಾಗಿದೆ.
ಅಪ್ರಾಪ್ತನನ್ನು ಅರೆಬೆತ್ತಲೆ ಮಾಡಿ, ಚಡ್ಡಿಯಲ್ಲಿ ಅಡಿಕೆ ಮರಕ್ಕೆ ಕಟ್ಟಿ ಹಾಕಿದ್ದ ಕಿಡಿಗೇಡಿಗಳು ಗರಿಗಳಲ್ಲಿ ಇದ್ದಂತಹ ಕೆಂಪು ಇರುವೆ, ಗೊದ್ದಗಳನ್ನು ಮರಕ್ಕೆ ಹಿಮ್ಮುಖವಾಗಿ ಕೈಕಟ್ಟಿದ್ದ ಅಪ್ರಾಪ್ತನ ತಲೆ, ಮೈಮೇಲೆ, ಗುಪ್ತಾಂಗಗಳಿಗೆ ಬಿಟ್ಟು, ಆತ ಚೀರುವುದು, ಅಳುವುದನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಾ, ವಿಕೃತವಾಗಿ ನಗುವ ದೃಶ್ಯಗಳು ಎಂತಹವರ ಆಕ್ರೋಶಕ್ಕೆ ಗುರಿಯಾಗುವಂತಿವೆ.
ತೀವ್ರ ಹಲ್ಲೆ, ಹಿಂಸೆಯಿಂದ ತತ್ತರಿಸಿದ್ದ ಬಾಲಕ ತಪ್ಪಾಯಿತು ಬಿಡಿ ಎಂಬುದಾಗಿ ಅಳುತ್ತಾ, ಚೀರಾಡುತ್ತಿದ್ದರೂ ಕಲ್ಲು ಮನಸ್ಸಿನ ಕಿಡಿಗೇಡಿಗಳು ಅಪ್ರಾಪ್ತನ ನೋವಿನಂತೆ ನರಳುವುದನ್ನುಅಣಕಿಸುವಂತೆ ವರ್ತಿಸುತ್ತಿರುವುದು ಕಂಡು ಬಂದಿದೆ. ನಲ್ಲೂರು ಗ್ರಾಮದ ಹಕ್ಕಿಪಿಕ್ಕಿ ಸಮುದಾಯದ ಜನಾಂಗದ ಬಾಲಕನಿಗೆ ಅದೇ ಯುವಕನ ಸಂಬಂಧಿಗಳು ಎನ್ನಲಾದ ಕಿಡಿಗೇಡಿಗಳು ಹೀಗೆಲ್ಲಾ ನಡೆಸಿಕೊಂಡಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸೆಕ್ಸ್ ವೀಡಿಯೋಗಳನ್ನು ನೋಡುತ್ತಾ, ಸಾರ್ವಜನಿಕವಾಗಿ ಅಸಭ್ಯ ವರ್ತನೆ ತೋರಿ, ಜನರಿಗೆ ಮುಜುಗರ ಉಂಟು ಮಾಡುತ್ತಿದ್ದ. ಇದೆಲ್ಲದರಿಂದ ರೋಸಿ ಹೋಗಿದ್ದ ಗ್ರಾಮದ ಕೆಲವು ಯುವಕರು ಹೀಗೆ ಮಾಡಿದ್ದಾರೆಂಬ ಮಾತು ಕೇಳಿ ಬರುತ್ತಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆಯ ಸತ್ಯಾಸತ್ಯತೆಯ ಬಗ್ಗೆಯೂ ಈಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಿದೆ.
ಗಳಲ್ಲಿ ಹಿಂದೆ ಸಿಲುಕಿದ್ದು, ಅಂತಹವರ ಬಗ್ಗೆ ಆಗಾಗ್ಗೆ ಪತ್ರಿಕೆಗಳಲ್ಲೂ ವರದಿಯಾಗಿ, ಸುರಕ್ಷಿತವಾಗಿ ಮರಳುತ್ತಿರುವ ಸಮುದಾಯ ಇದು.