ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ಸೊಂದು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದು, ಪ್ರವಾಸಕ್ಕೆ ಬಂದಿದ್ದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕೂದಲೆಳೆ ಅಂತದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ನೆಲಮಂಗಲದ ಎಂಇಎಸ್ ಪಬ್ಲಿಕ್ ಪ್ರೌಢಶಾಲೆ ಶಿಕ್ಷಕರು ಮತ್ತು ಮಕ್ಕಳು ಶನಿವಾರ ಶಾಲಾ ವಾಹನದಲ್ಲಿ ಪ್ರವಾಸಕ್ಕೆ ಬಂದಿದ್ದರು. ಶೃಂಗೇರಿಯಿಂದ ಕೊಲ್ಲೂರಿಗೆ ಹೋಗುವ ವೇಳೆ ಈ ಅವಘಡ ಸಂಭವಿಸಿದೆ. ಆಗುಂಬೆ ಘಾಟಿಯ ಮೊದಲ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಘಾಟಿಯ ರಕ್ಷಣಾ ಗೋಡೆಗೆ ಬಸ್ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ 30 ಮಂದಿ ಇದ್ದರು ಎಂದು ಹೇಳಲಾಗುತ್ತಿದೆ. ಸುದೈವವಶಾತ್ ಬಸ್ ಘಾಟಿಯ ತಡೆಗೋಡೆಗೆ ಅಪ್ಪಳಿಸಿ ನಿಂತ ಕಾರಣ ಭಾರಿ ದುರಂತ ತಪ್ಪಿದೆ. ಸಂಜೆ ವೇಳೆಗೆ ಆಗುಂಬೆಯಿಂದಲೇ ಈ ತಂಡ ನೆಲಮಂಗಲಕ್ಕೆ ಹಿಂದಿರುಗಿದೆ. - - - -28ಟಿಟಿಎಚ್02: ಆಗುಂಬೆಘಾಟಿಯ 1ನೇ ತಿರುವಿನಲ್ಲಿ ಅಪಘಾತಕ್ಕೆ ಈಡಾಗಿರುವ ಶಾಲಾ ಬಸ್.