ಸಾರಾಂಶ
ನಗರದಲ್ಲಿ ಸ್ಟಾರ್ಟ್‌ಅಪ್ ನಡೆಸುತ್ತಿರುವ ಅಮೆರಿಕ ಪ್ರಜೆ ಟೋನಿ ಕ್ಲೋರ್ ಎಂಬುವರು ಜಿಬಿಎ ಪೌರ ಕಾರ್ಮಿಕನಂತೆ ವಸ್ತ್ರ ಧರಿಸಿ ಕೈಯಲ್ಲಿ ಪೊರಕೆ ಹಿಡಿದು ರಸ್ತೆಯನ್ನು ಗುಡಿಸುವ ಮೂಲಕ ನಗರದ ರಸ್ತೆ, ಫುಟ್‌ಪಾತ್ ಮತ್ತು ಕಸದ ಅದ್ವಾನ, ಅವಾಂತರದ ಕುರಿತು ಬೆಳಕು ಚೆಲ್ಲಿದ್ದಾನೆ.
ಬೆಂಗಳೂರು : ನಗರದಲ್ಲಿ ಸ್ಟಾರ್ಟ್‌ಅಪ್ ನಡೆಸುತ್ತಿರುವ ಅಮೆರಿಕ ಪ್ರಜೆ ಟೋನಿ ಕ್ಲೋರ್ ಎಂಬುವರು ಜಿಬಿಎ ಪೌರ ಕಾರ್ಮಿಕನಂತೆ ವಸ್ತ್ರ ಧರಿಸಿ ಕೈಯಲ್ಲಿ ಪೊರಕೆ ಹಿಡಿದು ರಸ್ತೆಯನ್ನು ಗುಡಿಸುವ ಮೂಲಕ ನಗರದ ರಸ್ತೆ, ಫುಟ್‌ಪಾತ್ ಮತ್ತು ಕಸದ ಅದ್ವಾನ, ಅವಾಂತರದ ಕುರಿತು ಬೆಳಕು ಚೆಲ್ಲಿದ್ದಾನೆ.
ಕಿರು ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ
ನಗರದ ಫುಟ್‌ತಾಪ್ ಮೇಲೆ 1 ಕಿ.ಮೀ ನಡೆದರೆ ನೀವು ಸರ್ಕಾರದಿಂದ ಪಿಂಚಣಿಗೆ ಅರ್ಹರಾಗುತ್ತೀರಿ ಎಂದು ವ್ಯಂಗ್ಯಭರಿತವಾಗಿ ಮಾಡಿರುವ ಕಿರು ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ನಿಮ್ಮನ್ನು ನೋಡಿಯಾದರು ಪಾಲಿಕೆಯವರು ರಸ್ತೆಗಳನ್ನು ಸರಿಪಡಿಸಲಿ ಎಂದು ಜನರು ಕಮೆಂಟ್ ಮಾಡಿದ್ದಾರೆ.
ವಿಡಿಯೋದಲ್ಲೇನಿದೆ?
ಇವತ್ತು ನಾನು ಬಿಬಿಎಂಪಿ ಸರ್ವೀಸ್ ಸ್ಕ್ವಾಡ್ ಸೇರಿದ್ದೇನೆ. ಆದರೆ, ಬಿಬಿಎಂಪಿ ನನ್ನನ್ನು ಕೆಲಸಕ್ಕೆ ತೆಗೆದುಕೊಂಡಿಲ್ಲ. ನಾನೇ ಬಿಬಿಎಂಪಿ ಸೇರಿದ್ದೇನೆ. ಪಾದಚಾರಿಗಳು ಓಡಾಡುವ ಜನರ ಪಾಲಿಗೆ ಅಪಾಯಕಾರಿಯಾಗಿವೆ ಎಂದು ನನ್ನ ಸಹೋದ್ಯೋಗಿಗಳು (ಪೌರ ಕಾರ್ಮಿಕರು) ಹೇಳಿದ್ದಾರೆ. ಹೌದು, ಬೆಂಗಳೂರು ಗಲೀಜಾಗಿಲ್ಲ. ಶಾಶ್ವತವಾಗಿ ಕಾಮಗಾರಿ ಪ್ರಗತಿಯಲ್ಲಿದೆ ಎಂಬಂತೆ ಭಾಸವಾಗುತ್ತದೆ. ರಸ್ತೆಯಲ್ಲಿ ಓಡಾಡಿದರೆ ಟೆಕ್ಕಿಗಳ ಕಾಲು ಮೂಳೆಗಳು ಮುರಿಯುತ್ತವೆ. ನಗರದ ಫುಟ್‌ತಾಪ್ ಮೇಲೆ 1 ಕಿ.ಮೀ ನಡೆದರೆ ನೀವು ಸರ್ಕಾರದಿಂದ ಪಿಂಚಣಿಗೆ ಅರ್ಹರಾಗುತ್ತೀರಿ! ಎಂದು ಟೋನಿ ಕ್ಲೋರ್ ವ್ಯಂಗ್ಯವಾಡಿದ್ದಾರೆ.
;Resize=(690,390))
)
)

;Resize=(128,128))
;Resize=(128,128))
;Resize=(128,128))
;Resize=(128,128))