ದಾಬಸ್‍ಪೇಟೆ: ಸೋಂಪುರ ಹೋಬಳಿಯ ಕೆಂಗಲ್ ಗೊಲ್ಲರಹಟ್ಟಿ ನಿವಾಸಿ ಹಾಗೂ ತುಮಕೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವಿದ್ಯಾರ್ಥಿ ಮಂಜುನಾಥ ಸಿ.ಕೆಂಗಲ್‍ಹಟ್ಟಿ ಬರೆದಿರುವ ಬವಣೆ ಪುಸ್ತಕಕ್ಕೆ ಸಾಹಿತ್ಯಕ ಗೌರವ ದೊರೆತಿದೆ.

ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮೆಚ್ಚುಗೆ ವ್ಯಕ್ತಪಡಿಸಿ, ಸಮಾಜದ ಸಂವೇದನೆ, ಮಾನವೀಯ ಮೌಲ್ಯಗಳು ಹಾಗೂ ಜೀವನದ ಸೂಕ್ಷ್ಮ ಭಾವನೆಗಳನ್ನು ಒಳಗೊಂಡ ಬವಣೆ ಕವನ ಸಂಕಲನ ಇತರ ಕವನ ಸಂಕಲನಗಳಿಗೆ ಮಾದರಿಯಾಗಿದೆ. ಇಂದಿನ ಯುವ ಪೀಳಿಗೆ ತಂತ್ರಜ್ಞಾನಕ್ಕೆ ಸೀಮಿತವಾಗದೆ, ಸಾಹಿತ್ಯದ ಮೂಲಕ ಸಮಾಜವನ್ನು ನೋಡುವ ದೃಷ್ಟಿಕೋಣ ಆಶಾದಾಯಕ ಬೆಳವಣಿಗೆ ಎಂದರು.

ಲೇಖಕ ಮಂಜುನಾಥ ಸಿ.ಕೆಂಗಲ್‍ಹಟ್ಟಿ ಮಂಜುನಾಥ್ ಮಾತನಾಡಿ, ಅಧ್ಯಯನದ ಜೊತೆಗೆ ಸಾಹಿತ್ಯದಂತಹ ಸೃಜನಶೀಲ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ. ಈ ಗೌರವವು ತಮ್ಮ ಮುಂದಿನ ಸಾಹಿತ್ಯಕ ಪಯಣಕ್ಕೆ ಇನ್ನಷ್ಟು ಉತ್ತೇಜನ ನೀಡಿದೆ. ಈ ಕವನ ಸಂಕಲನವು ಈಗಾಗಲೇ ಓದುಗರ ಗಮನ ಸೆಳೆಯುತ್ತಿದ್ದು, ವಿದ್ಯಾರ್ಥಿ ಸಾಹಿತ್ಯದ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಐಕ್ಯ ಫೌಂಡೇಶನ್ ರೇಖಾ, ಶ್ರೀನಿವಾಸ, ಅರವಿಂದ, ಆನಂದ್ ಬಸವರಾಜು ಇನ್ನಿತರರು ಉಪಸ್ಥಿತರಿದ್ದರು.

ಪೋಟೋ 7 :

ಸಂಶೋಧನಾ ವಿದ್ಯಾರ್ಥಿ ಮಂಜುನಾಥ ಸಿ.ಕೆಂಗಲ್‍ಹಟ್ಟಿ ಬರೆದಿರುವ ಬವಣೆ ಪುಸ್ತಕವನ್ನು ಮುರಳೀಧರ ಹಾಲಪ್ಪ ಬಿಡುಗಡೆಗೊಳಿಸಿ ಲೇಖಕರನ್ನು ಸನ್ಮಾನಿಸಿದರು.