ಗುಣಮಟ್ಟದ ಶಿಕ್ಷಣ ಪಡೆದು ಸಾಧಕರಾಗಲು ಕರೆ

KannadaprabhaNewsNetwork |  
Published : Feb 02, 2026, 01:30 AM IST
1ಎಚ್ಎಸ್ಎನ್7 : ಟೈಮ್ಸ್ ಹಾಸನ ಪದವಿ ಪೂರ್ವ ಕಾಲೇಜಿನ ಫೇರ್ ವೆಲ್  ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಯಾವ ಶಿಕ್ಷಣ ಸಂಸ್ಥೆ ಸೇರಿದ್ದೇವೆ ಎಂಬುದು ಮುಖ್ಯವಲ್ಲ, ಅಲ್ಲಿ ಸಿಗುವ ಉತ್ತಮ ಶಿಕ್ಷಣ ಸಂಸ್ಕಾರ ನಮ್ಮ ಬದುಕಿನ ದಿಕ್ಕು ಬದಲಿಸಲಿದೆ. ಹೊರಗಿನ ಶಿಕ್ಷಣ ಸಂಸ್ಥೆಗಳಿಗೆ ವಿನಾಕಾರಣ ಹಣ ವ್ಯಯಿಸದೆ ತಮ್ಮೂರಿನಲ್ಲೇ ಕಲಿಯಬೇಕು. ಈ ನಿಟ್ಟಿನಲ್ಲಿ ಟೈಮ್ಸ್ ಹಾಸನ ಪಿಯು ಕಾಲೇಜು ಪ್ರತಿವರ್ಷ ಉತ್ತಮ ಫಲಿತಾಂಶ ನೀಡುತ್ತಿದ್ದು ಅಪಾರ ಪ್ರತಿಭಾವಂತ ಮಕ್ಕಳಿಗೆ ಉನ್ನತ ಸಾಧನೆ ಮಾಡಲು ಮಾರ್ಗದರ್ಶಿಯಾಗಿ ಉತ್ತೇಜಿಸುತ್ತಿದೆ. ನಮ್ಮ ಕ್ರಿಸ್ತ ಜ್ಯೋತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಮಕ್ಕಳು ಬೇರೆ ಊರುಗಳನ್ನು ಹುಡುಕದೆ ಇಲ್ಲಿ ಪಿಯು ಶಿಕ್ಷಣ ಪಡೆಯುತ್ತಿದ್ದು ಕಷ್ಟಪಟ್ಟು ಓದಿದರೆ ಸಾಧನೆಯೂ ಕೂಡ ಹುಡುಕಿಕೊಂಡು ಬರಲಿದೆ ಎಂದು ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಗಳಿಸಿ ಸಾಧಕರಾಗಿ ಹೊರಹೊಮ್ಮಬೇಕು ಎಂದು ಕ್ರಿಸ್ತಜ್ಯೋತಿ ಶಾಲೆ ಪ್ರಾಂಶುಪಾಲ ಸೆಬಾಸ್ಟಿನ್ ಸಲಹೆ ನೀಡಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಟೈಮ್ಸ್ ಹಾಸನ ಪದವಿ ಪೂರ್ವ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ ಮತ್ತು ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಲಿತ ವಿದ್ಯೆಯನ್ನು ಬೇರೊಬ್ಬರೂ ಕಸಿಯಲು ಸಾಧ್ಯವಿಲ್ಲ, ಹೀಗಾಗಿ ಸಮಯ ವ್ಯರ್ಥ ಮಾಡದೆ ಕಲಿಕೆ ಮುಖೇನ ಉನ್ನತ ಜ್ಞಾನ, ಬುದ್ಧಿಶಕ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ ಗುರಿ ಸಾಧನೆ ತಲುಬೇಕು. ಇದಕ್ಕಾಗಿ ಯಾವ ಶಿಕ್ಷಣ ಸಂಸ್ಥೆ ಸೇರಿದ್ದೇವೆ ಎಂಬುದು ಮುಖ್ಯವಲ್ಲ, ಅಲ್ಲಿ ಸಿಗುವ ಉತ್ತಮ ಶಿಕ್ಷಣ ಸಂಸ್ಕಾರ ನಮ್ಮ ಬದುಕಿನ ದಿಕ್ಕು ಬದಲಿಸಲಿದೆ. ಹೊರಗಿನ ಶಿಕ್ಷಣ ಸಂಸ್ಥೆಗಳಿಗೆ ವಿನಾಕಾರಣ ಹಣ ವ್ಯಯಿಸದೆ ತಮ್ಮೂರಿನಲ್ಲೇ ಕಲಿಯಬೇಕು. ಈ ನಿಟ್ಟಿನಲ್ಲಿ ಟೈಮ್ಸ್ ಹಾಸನ ಪಿಯು ಕಾಲೇಜು ಪ್ರತಿವರ್ಷ ಉತ್ತಮ ಫಲಿತಾಂಶ ನೀಡುತ್ತಿದ್ದು ಅಪಾರ ಪ್ರತಿಭಾವಂತ ಮಕ್ಕಳಿಗೆ ಉನ್ನತ ಸಾಧನೆ ಮಾಡಲು ಮಾರ್ಗದರ್ಶಿಯಾಗಿ ಉತ್ತೇಜಿಸುತ್ತಿದೆ. ನಮ್ಮ ಕ್ರಿಸ್ತ ಜ್ಯೋತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಮಕ್ಕಳು ಬೇರೆ ಊರುಗಳನ್ನು ಹುಡುಕದೆ ಇಲ್ಲಿ ಪಿಯು ಶಿಕ್ಷಣ ಪಡೆಯುತ್ತಿದ್ದು ಕಷ್ಟಪಟ್ಟು ಓದಿದರೆ ಸಾಧನೆಯೂ ಕೂಡ ಹುಡುಕಿಕೊಂಡು ಬರಲಿದೆ ಎಂದು ಕಿವಿಮಾತು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಟೈಮ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಮಾತನಾಡಿ, ಶಿಕ್ಷಣದ ಬಗ್ಗೆ ತಾತ್ಸಾರ ಮನೋಭಾವನೆ ಸಲ್ಲದು, ಶಿಸ್ತು ಶ್ರದ್ಧೆ ರೂಢಿಸಿಕೊಂಡು ಕಲಿಕೆಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸದುದ್ದೇಶ ಹೊಂದಿರುವ ಟೈಮ್ಸ್ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ ಎಂದರು.

ಪ್ರಾಂಶುಪಾಲ ನವೀನ್ ಪಿ. ಉಲಿವಾಲ, ಉಪನ್ಯಾಸಕರಾದ ನಾಗೇಂದ್ರ, ರಾಕೇಶ್, ಕೃಷ್ಣಮೂರ್ತಿ, ಮಧು ಇತರರಿದ್ದರು. ಮಾಜಿ ಸೈನಿಕ ಎಂ.ಕೆ. ಸುದೀನ್ ಕುಮಾರ್, ಶಿಕ್ಷಕಿ ಟೊಯಜಾಕ್ಷಿ, ಯುವ ರೈತ ಎಂ.ಎಸ್. ಮನೋಹರ್, ಆ್ಯಂಬುಲೆನ್ಸ್ ಚಾಲಕ ಎಂ.ಡಿ. ಪೃಥ್ವಿ, ಪೌರಕಾರ್ಮಿಕ ಎ.ಎಸ್. ರಂಗಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ
ರಾಜಕ್ಕೆ ಕೇಂದ್ರ ಬಜೆಟ್ಟಲ್ಲಿ ಚೊಂಬು : ಸಿಎಂ ಸಿಡಿಮಿಡಿ