ದಾಬಸ್‍ಪೇಟೆ: ರಸ್ತೆ ದಾಟುತ್ತಿದ್ದ ಓಂಶಕ್ತಿ ಮಾಲಾಧಾರಿ ಮಹಿಳೆಯರಿಗೆ ಶಾಸಕರ ಪಾಸ್ ಇದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 48ರ ಟಿ.ಬೇಗೂರು ಬಳಿ ನಡೆದಿದೆ.
ಶಾಸಕರ ಪತ್ನಿ ಸಂಚರಿಸುತ್ತಿದ್ದರು: ಬೆಂಜ್ ಕಾರಿನಲ್ಲಿ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಪತ್ನಿ ಚೈತ್ರಾ ಬೆಂಗಳೂರಿಗೆ ಹೋಗುತ್ತಿದ್ದರು ಎನ್ನಲಾಗಿದೆ. ಅಪಘಾತ ಸಂಭವಿಸಿದ ಬಳಿಕ ಶಾಸಕರ ಕಾರಿನಲ್ಲಿ ಬೆಂಗಳೂರಿಗೆ ಹೋದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆದರೆ, ಪೊಲೀಸರು ಇದು ಶಾಸಕರ ಪಾಸ್ ಇದ್ದ ಸಂಬಂಧಿಕರ ಕಾರು, ಶಾಸಕರ ಕಾರಲ್ಲ, ಕಾರಿನಲ್ಲಿ ಮೂವರು ಮಾತ್ರ ಇದ್ದರು ಎಂದು ಮಾಹಿತಿ ನೀಡಿದ್ದಾರೆ.
ಮಹಿಳೆಯರಿಗೆ ಚಿಕಿತ್ಸೆ: ಮಹಿಳೆಯರಿಗೆ ಕಾರು ಡಿಕ್ಕಿ ಆಗುತ್ತಿದ್ದಂತೆ ಇಬ್ಬರನ್ನು ಬೆಂಜ್ ಕಾರಿನಲ್ಲಿಯೇ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ಕರೆ ತಂದು ತಕ್ಷಣ ಚಿಕಿತ್ಸೆ ಕೊಡಿಸಿ ಸಂಪೂರ್ಣ ಚಿಕಿತ್ಸೆ ಮುಗಿಸುವ ತನಕ ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆಯ ವೆಚ್ಚವನ್ನು ಅವರೇ ಬರಿಸಿದ್ದಾರೆ ಎಂದು ಗಾಯಾಳುಗಳ ಸಂಬಂಧಿಕರು ಮಾಹಿತಿ ನೀಡಿದ್ದಾರೆ. ---ಪೋಟೋ 8 : ಡಿಕ್ಕಿ ಹೊಡೆದಿರುವ ಕಾರು.
ಪೋಟೋ 9 : ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿರುವುದು.