ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮಹಾಯೋಜನೆ ಅಡಿಯಲ್ಲಿ ಮುಡಿಗುಂಡದಿಂದ ಬಸ್ತೀಪುರ, ಕೆಂಪನಪಾಳ್ಯ ಮೂಲಕ ಸಿದ್ದಯ್ಯನಪುರ ತಲುಪುವ 80 ಅಡಿ ರಸ್ತೆ ಅಭಿವೃದ್ಧಿ ಮಾಡುವ ಚಿಂತನೆ ನನಗಿದೆ. ಅದೇ ರೀತಿಯಲ್ಲಿ ಆದ್ಯತೆ ಮೇರೆಗೆ ಪಟ್ಟಣದ ಪ್ರಮುಖ ರಸ್ತೆಗಳಾದ ಡಾ.ರಾಜ್‍ಕುಮಾರ್ ಹಾಗೂ ಅಂಬೇಡ್ಕರ್ ರಸ್ತೆ ಅಗಲೀಕರಣ ಬಗ್ಗೆ ಚಿಂತನೆ ಮಾಡಲಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ತಿಳಿಸಿದರು.ಕೊಳ್ಳೇಗಾಲದ ತಾಪಂನಲ್ಲಿರುವ ಶಾಸಕರ ಕಚೇರಿಯಲ್ಲಿ ಶನಿವಾರ ಸಾವ೯ಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ಲೋಕೋಪಯೋಗಿ ಇಲಾಖೆ ಮೂಲಕ ರಸ್ತೆ ಕಾಮಗಾರಿ ಕೈಗೊಳ್ಳಲು ತಯಾರಿ ನಡೆಯುತ್ತಿದೆ ಜೊತೆಗೆ ಪಟ್ಟಣ ವ್ಯಾಪ್ತಿಯ ಮಸೀದಿ ವೃತ್ತದಿಂದ ಕನ್ನಿಕಾಪರಮೇಶ್ವರಿ ಮಾರ್ಗವಾಗಿ ಸಾಮಂದಗೇರಿ, ಭೀಮನಗರ ಆರ್ಚ್ ಮುಂಭಾಗದ ಮೂಲಕ ಬೆಂಗಳೂರು ರಸ್ತೆ ಸಂಪರ್ಕಿಸುವ ರಸ್ತೆ (ಹಳೇ ಬೆಂಗಳೂರು ರೋಡ್) ಅಭಿವೃದ್ಧಿಗೂ ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು. ಕೊಳ್ಳೇಗಾಲ ಪಟ್ಟಣದ ಡಾ.ರಾಜ್‍ಕುಮಾರ್ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ ಅಗಲೀ ಕರಣ ಮಾಡಿ ಅಭಿವೃದ್ಧಿ ಪಡಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿದ್ದೇನೆ,
ಲೋಕೋಪಯೋಗಿ ಇಲಾಖೆ ಮೂಲಕ ರಸ್ತೆ ಕಾಮಗಾರಿ ಕೈಗೊಳ್ಳಲು ತಯಾರಿ ನಡೆಯುತ್ತಿದೆ. ಲೋಕೋಪಯೋಗಿ ಇಲಾಖೆ ಮೂಲಕ ಈ ಎರಡು ರಸ್ತೆಗಳ ಅಭಿವೃದ್ಧಿ ಪಡಿಸಿ ನಂತರ ನಗರಸಭೆಗೆ ಹಸ್ತಾಂತರ ಮಾಡಿಕೊಳ್ಳುವ ಬಗ್ಗೆ ಲೋಕೋಪಯೋಗಿ ಅಧೀನ ಕಾರ್ಯದರ್ಶಿಗಳ ಬಳಿ ಚಚೆ೯ಸಿದ್ದು ಅವರು ಸಹ ಸಮ್ಮತಿಸಿದ್ದಾರೆ ಎಂದು ಹೇಳಿದರು. ಹಲವು ವಷ೯ಗಳ ಕಾಲ ಠಿಕಾಣಿ ಹೂಡಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಅಭಿವೖದ್ದಿ ದೖಷ್ಟಿಯಿಂದ ವಗಾ೯ವಣೆಗೆ ಕ್ರಮ ವಹಿಸಲಾಗುವುದು ಎಂದರು. ಇದೇ ವೇಳೆ ಶಾಸಕರು ಹಲವು ನಾಗರೀಕರಿಂದ 28ಕ್ಕೂ ಅಧಿಕ ಅಹವಾಲುಗಳನ್ನು ಸ್ವೀಕರಿಸಿ ಪರಿಹರಿಸುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ, ಜಿ.ಪಂ ಮಾಜಿ ಸದಸ್ಯ ಯೋಗೇಶ್, ನಗರಸಭೆ ಮಾಜಿ ಅಧ್ಯಕ್ಷ ಶಾಂತರಾಜು, ಶಾಸಕರ ಆಪ್ತ ಕಾಯ೯ದಶಿ೯ ಹೊಂಗನೂರು ಚೇತನ್ ಇನ್ನಿತರಿದ್ದರು.ಕೊಳ್ಳೇಗಾಲ ತಾಲೂಕಿನಲ್ಲಿ ಹೆಚ್ಚು ವರ್ಷಗಳ ಕಾಲ ಠಿಕಾಣಿ ಹೂಡಿರುವ ಅಧಿಕಾರಿಗಳ ವರ್ಗಾವಣೆಗೆ ಕ್ರಮ ವಹಿಸಲಾಗುವುದು. ಚಿಕ್ಕರಂಗನಾಥ ಮತ್ತು ದೊಡ್ಡ ರಂಗನಾಥ ಕೆರೆ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು.
- ಎ.ಆರ್. ಕೃಷ್ಣಮೂರ್ತಿ, ಶಾಸಕ, ಕೊಳ್ಳೇಗಾಲ