ಕನ್ನಡಪ್ರಭ ವಾರ್ತೆ ಮೈಸೂರು
ನಗರದ ನಂಜರಾಜ ಬಹದ್ದೂರು ಛತ್ರದಲ್ಲಿ ಸಹಜ ಸಮೃದ್ಧ ಹಾಗೂ ಸಹಜ ಸೀಡ್ಸ್ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ಮಾಗಿ ಸಂಭ್ರಮ ಮೇಳವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಚಳಿಗಾಲದಲ್ಲಿ ಆರೋಗ್ಯಕ್ಕೆ ಪೂರಕವಾದ, ದೇಹಕ್ಕೆ ಚೈತನ್ಯ ಕೊಡುವಂಥ ಕಾಳುಗಳ ಬಳಕೆ ಬಹು ಮುಖ್ಯ. ಸಾಂಪ್ರದಾಯಿಕವಾಗಿ ಬೆಳೆದ ಅವರೆ, ಹಲಸಂದೆ, ತೊಗರಿ ಕಾಯಿಗಳ ಆಹಾರವನ್ನು ಹೆಚ್ಚೆಚ್ಚು ಸೇವಿಸುವುದು ಬಹುಮುಖ್ಯ. ಇವುಗಳ ಬಳಕೆಯಿಂದ ಬಹುಬೆಳೆ ಪದ್ಧತಿಯನ್ನು ಅನುಸರಿಸುತ್ತಿರುವ ರೈತರಿಗೆ ಆದಾಯ ಮತ್ತು ಇದನ್ನು ಬಳಸುವ ಗ್ರಾಹಕರ ಆರೋಗ್ಯ ಎರಡೂ ಉತ್ತಮವಾಗುತ್ತದೆ ಎಂದು ಹೇಳಿದರು.
ಮಾಗಿ ಕಾಲದಲ್ಲಿ ಸಿಗುವ ಅವರೆ, ತೊಗರಿಯ ಸೊಗಡು, ಸ್ವಾದ ವಿಶೇಷವಾದದ್ದು. ಅಗ್ಗವಾಗಿ ಸಿಗುವ ಪ್ರೋಟೀನ್ ಸಮೃದ್ಧ ಆಹಾರವಿದು. ನಗರವಾಸಿಗಳಿಗೆ ಸಾಂಪ್ರದಾಯಿಕ ಆಹಾರ, ಅಡುಗೆಗಳನ್ನು ಪರಿಚಯಿಸುವ ಮಾಗಿ ಸಂಭ್ರಮ ಮೇಳ ಎಲ್ಲೆಡೆ ನಡೆಯುವಂತಾಗಬೇಕು ಎಂದರು.ಪಿರಿಯಾಪಟ್ಟಣ ತಾಲೂಕು ಹಿಟ್ನೆಹೆಬ್ಬಾಗಿಲಿನ ಸಾವಯವ ಕೃಷಿಕ ಕಾಳಪ್ಪ ಮಾತನಾಡಿ, ಹೆಚ್ಚು ಆರೈಕೆ ಕೇಳದೆ ಬೆಳೆಯುವ ಕಡಲೆಕಾಯಿ, ಮರ ತೊಗರಿ, ಸಿಹಿ ಗೆಣಸಿನಂಥ ಸಾಂಪ್ರದಾಯಿಕ ಬೆಳೆಗಳು ಅಪರೂಪವಾಗುತ್ತಿವೆ. ತಂಬಾಕು ಮತ್ತು ಮುಸುಕಿನ ಜೋಳದಂಥ ವಾಣಿಜ್ಯ ಬೆಳೆಗಳಿಗೆ ಮಾರುಹೋಗಿರುವ ರೈತರು ಅವರೆ, ಹಲಸಂದೆ, ಗೆಡ್ಡೆ ಗೆಣಸುಗಳನ್ನು ಮರೆತು ಅಂಗಡಿಯ ದಿನಸಿಗಳಿಗೆ ದಾಸರಾಗಿದ್ದಾರೆ. ಮನೆ ಬಳಕೆಗಾದರೂ ಬೇಳೆ ಕಾಳು, ಗೆಡ್ಡೆ ಗೆಣಸು ಬೆಳೆಯಬೇಕು ಎಂದು ಸಲಹೆ ನೀಡಿದರು.
ಸಿ.ಎನ್. ಕೇಶವಮೂರ್ತಿ ನಿರೂಪಿಸಿದರು.
ಬಾಕ್ಸ್...
ಎರಡು ದಿನಗಳ ಮೇಳದಲ್ಲಿ ಹಸಿ ಕಡಲೆಕಾಯಿ, ಅವರೆ, ಹಲಸಂದೆ, ಗೆಡ್ಡೆ ಗೆಣಸು, ಕೆಂಪು ಮುಸುಕಿನ ಜೋಳ, ತೊಗರಿ ಮೊದಲಾದ ಚಳಿಗಾಲದ ಬೆಳೆಗಳು ಮಾರಾಟಕ್ಕೆ ಬಂದಿವೆ.
ದೇವಧಾನ್ಯ ರೈತ ಉತ್ಪಾದಕರ ಕಂಪನಿಯು ಸಿರಿಧಾನ್ಯ, ಜವಾರಿ ಬೇಳೆಕಾಳುಗಳು ಹಾಗೂ ದೊಡ್ಯಗ ಕೆಂಪಕ್ಕಿ, ಉದುರು ಸಾಳಿ ಮೊದಲಾದ ದೇಸಿ ಅಕ್ಕಿಗಳನ್ನು ಮಾರಾಟಕ್ಕೆ ತಂದಿದ್ದಾರೆ.
ಬೇರು ನ್ಯಾಚುರಲ್ಸ್ ಎಳ್ಳುಂಡೆ ಹಾಗೂ ಶಾವಿಗೆ ಪರಿಚಯಿಸಿದೆ. ಧಾರವಾಡದ ಮಹಿಳಾ ಸ್ವಸಹಾಯ ಸಂಘ ಬ್ಯಾಡಗಿ ಮೆಣಸಿನಕಾಯಿಯ ಕಾರದಪುಡಿ, ಮಸಾಲ ಪುಡಿ ಮಾರಾಟ ಮಾಡುತ್ತಿವೆ. ನಿರ್ಲಕ್ಷಿತ ಹಣ್ಣಿನ ಬೇಲದ ಜ್ಯೂಸ್, ಹುಣಸೇ ಜ್ಯೂಸ್ ಸಿಗುತ್ತಿವೆ.
ಎಚ್.ಡಿ. ಕೋಟೆಯ ಹುಲಿಕಾಡು ರೈತ ಉತ್ಪಾದಕರ ಕಂಪನಿಯು ನಾಡ ತೊಗರಿ, ಅವರೆ, ಗೆಡ್ಡೆ ಗೆಣಸು, ರಾಗಿ ಮತ್ತು ದಿನನಿತ್ಯದ ಅಕ್ಕಿಗಳನ್ನು ಮೇಳಕ್ಕೆ ತಂದಿದ್ದಾರೆ.
ಸಿರಿಧಾನ್ಯ ಮತ್ರು ಸಾವಯವ ಪದಾರ್ಥಗಳು, ಮೌಲ್ಯವರ್ಧಿತ ಉತ್ಪನ್ನಗಳು, ಶೃಂಗಾರ ವರ್ಧಕಗಳು, ಕೋತಿ ಓಡಿಸುವ ಬಂದೂಕು, ಬಿದಿರಿನ ಉತ್ಪನ್ನಗಳು ಮತ್ತು ದೇಸಿ ಅಕ್ಕಿಗಳು ಮೇಳದಲ್ಲಿ ಮಾರಾಟಕ್ಕಿವೆ.